Advertisement
ತನ್ನ ಕೊನೆಯಾದ ಬಳಿಕ ಶರೀರವನ್ನು ಸಮಾಧಿ ಮಾಡದೆ, ಯಾವುದೇ ಸ್ಮಾರಕ ನಿರ್ಮಿಸದೆ ಅಗ್ನಿ ಸ್ಪರ್ಶ ಮಾಡಿ ಚಿತಾ ಭಸ್ಮವನ್ನು ಜಲಮೂಲಗಳಲ್ಲಿ ವಿಸರ್ಜಿಸಬೇಕು ಎಂದು 2014 ರಲ್ಲೇ ಶ್ರೀಗಳು ಕಾನೂನು ಬದ್ದವಾಗಿ ಬರೆದಿಟ್ಟಿದ್ದರು. ಅದೇ ರೀತಿಯಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಗುವುದು ಎಂದು ವಿವಿಧ ಶ್ರೀಗಳು ಮತ್ತು ಗಣ್ಯರು ತಿಳಿಸಿದ್ದಾರೆ.
Related Articles
Advertisement
ಮಂಗಳವಾರ ಬೆಳಗ್ಗೆ6 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಆಶ್ರಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಚಿತೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲೇ ಊಟ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ.
ವೈಕುಂಠ ಏಕಾದಶಿಯ ಪುಣ್ಯ ದಿನದಂದು ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಇಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳಿಗೆ ಹೇಳಿಕೆ ನೀಡಿ ಭಾವುಕರಾದರು.
ದರ್ಶನಕ್ಕೆ ಜನಸಾಗರ
ರಾತ್ರಿಯೇ ಆಶ್ರಮದಲ್ಲಿ ಭಕ್ತಸಾಗರ ಆಗಮಿಸಿದ್ದು ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಪೊಲೀಸರು ಎರಡು ಗೇಟ್ ಗಳ ಮೂಲಕ ಭಕ್ತರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ರಸ್ತೆಗಳಲ್ಲಿಯೂ ಟ್ರಾಫಿಕ್ ನಿಯಂತ್ರಣಕ್ಕಾಗಿ ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ.