Advertisement

ಅಮೃತ್ ಪೌಲ್ ಜತೆಗೆ ಸಚಿವರ ಹೆಸರನ್ನೂ ಬಹಿರಂಗಪಡಿಸಲಿ: ಕಾಂಗ್ರೆಸ್ ಆಗ್ರಹ

05:00 PM Jul 04, 2022 | Team Udayavani |

ಬೆಂಗಳೂರು : ಎಡಿಜಿಪಿ ಅಮೃತ್ ಪೌಲ್ ಜತೆಗೆ ಪಿಎಸ್ ಐ ನೇಮಕದಲ್ಲಿ ಭಾಗಿಯಾದ ಪ್ರಭಾವಿ ಸಚಿವರ ಹೆಸರನ್ನೂ ಸರಕಾರ ಬಹಿರಂಗಪಡಿಸಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

Advertisement

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಎಡಿಜಿಪಿ ಬಂಧನದಿಂದ ಸರಕಾರದ ದೊಡ್ಡಮಟ್ಟದ ವ್ಯಕ್ತಿಗಳು ಹಗರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಇದರ ಜತೆಗೆ ಈ ಹಗರಣದಲ್ಲಿ ಭಾಗಿಯಾದ ಪ್ರಭಾವಿ ಸಚಿವರ ಹೆಸರನ್ನು ಜನತೆಯ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಇತಿಹಾಸದಲ್ಲಿ ಎಡಿಜಿಪಿ ದರ್ಜೆ ಅಧಿಕಾರಿ‌ ಇದುವರೆಗೆ ಬಂಧನವಾಗಿರಲಿಲ್ಲ. ಇದು‌‌ ಪೊಲೀಸ್ ಇಲಾಖೆಯ ಪಾಲಿಗೆ ಕಪ್ಪು ಚುಕ್ಕೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ರಾಜ್ಯಪಾಲರು ತಕ್ಷಣ ಸರಕಾರವನ್ನು ವಜಾಗೊಳಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ಸದನದಲ್ಲಿ ಮೂರು ಬಾರಿ ಗೃಹ ಸಚಿವರು ಉತ್ತರ ನೀಡುವಾಗ ಪಿಎಸ್ ಐ ನೇಮಕದಲ್ಲ ಹಗರಣದಲ್ಲಿ‌ ನಡೆದಿಲ್ಲ ಎಂದೇ ಹೇಳುತ್ತಿದ್ದರು. ಆದರೆ ಈಗ ಏನಾಗಿದೆ ! ಇದು ಡಬಲ್ ಎಂಜಿನ್ ಸರಕಾರದ ಇನ್ನೊಂದು ಸಾಧನೆ ಎಂದು ಟೀಕಿಸಿದೆ.

ಇದನ್ನೂ ಓದಿ : ಪಿಎಸ್ಐ ನೇಮಕಾತಿ ಅಕ್ರಮ: ಎಡಿಜಿಪಿ ಅಮೃತ್ ಪೌಲ್ ಬಂಧಿಸಿದ ಸಿಐಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next