ವಾಷಿಂಗ್ಟನ್: ತಂತ್ರಜ್ಞಾನ ಎಷ್ಟು ಸೌಲಭ್ಯ ಕಲ್ಪಿಸಿಕೊಡುತ್ತದೆಯೋ ಅಷ್ಟೇ ಸಂಕಷ್ಟಕ್ಕೂ ತಂದಿಡುತ್ತದೆ ಎನ್ನುವ ಮಾತಿದೆ. ಅದಕ್ಕೆ ಸಾಕ್ಷಿಯೆನ್ನುವಂತೆ, ಮನುಷ್ಯನ ಕೆಲಸ ಸುಲಭವಾಗಲೆಂದು ಬಳಸುತ್ತಿರುವ ಅಲೆಕ್ಸಾ ಆತನ ಬದುಕಿಗೇ ಆಪತ್ತು ತಂದೊಡ್ಡಿದ ಉದಾಹರಣೆ ಅಮೆರಿಕದಲ್ಲಿ ನಡೆದಿದೆ.
ಕ್ರಿಸ್ಟಿನ್ ಲಿವ್ಡಾಲ್ ಎಂಬವರ 10 ವರ್ಷದ ಮಗ ಇತ್ತೀಚೆಗೆ ಮನೆಯಲ್ಲಿ ಬೋರ್ ಆಗುತ್ತಿದೆಯೆಂದು, ಅಲೆಕ್ಸಾ ಬಳಿ ಒಂದು ಪ್ರಶ್ನೆ ಕೇಳಿದ್ದಾನೆ. ಏನಾದರೂ ಚಾಲೆಂಜ್ ಮಾಡುವುದಿದ್ದರೆ ಹೇಳು ಎಂದಿದ್ದಾನೆ. ಅದಕ್ಕೆ ಉತ್ತರಿಸಿರುವ ಅಲೆಕ್ಸಾ, “ಚಾಲೆಂಜ್ ಸುಲಭವಾಗಿದೆ.
ಇದನ್ನೂ ಓದಿ:ದಲಿತರ ರಕ್ಷಣೆಗೆ ಸರಕಾರ ಬದ್ಧ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಮೊಬೈಲ್ ಫೋನ್ ಚಾರ್ಜರ್ ಪ್ಲಗ್ ಇನ್ ಮಾಡು. ಅದರ ಚಾರ್ಜಿಂಗ್ ಪಾಯಿಂಟ್‌ಗೆ ಕಾಯಿನ್ ಒಂದನ್ನಿಟ್ಟು ಅದನ್ನು ಮುಟ್ಟು ಎಂದಿದೆ.’ ಇದನ್ನು ourcommunitynow.com ವೆಬ್‌ಸೈಟ್ ಆಧರಿಸಿ ಹೇಳುತ್ತಿರುವುದಾಗಿಯೂ ಹೇಳಿದೆ. ಆದರೆ ಹೀಗೆ ಮಾಡುವುದರಿಂದ ವಿದ್ಯುತ್ ತಗಲುವ ಸಾಧ್ಯತೆಯಿದ್ದು, ಪ್ರಾಣಕ್ಕೇ ಕುತ್ತು ಬರಬಹುದಿತ್ತು ಎಂದು ಕ್ರಿಸ್ಟಿನಾ ತಮ್ಮ ಸಾಮಾಜಿಕ ಜಾಲತಾಣ ಗಳಲ್ಲಿ ಬರೆದುಕೊಂಡಿದ್ದಾರೆ.