Advertisement

ಫೋರ್ಬ್ಸ್‌ ಪಟ್ಟಿಯಲ್ಲಿ ನಟ ಅಕ್ಷಯ್‌

04:17 AM Jun 06, 2020 | Lakshmi GovindaRaj |

ಮುಂಬೈ: ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ಅಕ್ಷಯ್‌ ಕುಮಾರ್‌, ಫೋರ್ಬ್ಸ್‌ ಬಿಡುಗಡೆ ಮಾಡಿರುವ “ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ  ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ 52ನೇ ಸ್ಥಾನ ಪಡೆದಿದ್ದಾರೆ.

Advertisement

ಈ ಬಾರಿಯ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ನಟ ಎಂಬ  ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೂನ್‌ 2019ರಿಂದ ಮೇ ನಡುವೆ ಅಕ್ಷಯ್‌ 366 ಕೋಟಿ ರೂ. ಸಂಪಾದಿಸಿದ್ದಾರೆ. ಈ ಮೂಲಕ ಹಾಲಿವುಡ್‌ನ‌ ವಿಲ್‌ ಸ್ಮಿತ್‌ ಮತ್ತು  ಜೆನ್ನಿಫೆರ್‌ ಲೋಪೆಜ್‌ರನ್ನು ಹಿಂದಿಕ್ಕಿದ್ದಾರೆ.

“ವರ್ಷಕ್ಕೆ ಒಂದೇ ಸಿನಿಮಾ’ ಎಂಬ ಬೇಲಿ ಹಾಕಿಕೊಳ್ಳದೆ, ಒಂದರ ಹಿಂದೆ ಒಂದರಂತೆ ಸಿನಿಮಾ ಮಾಡುವುದು  ಹಾಗೂ ಇತ್ತೀಚೆಗೆ “ದಿ ಎಂಡ್‌’ ಗಾಗಿ ಅಮೆಜಾನ್‌ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next