Advertisement

ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವರ್ಷದ ಊಟ ನೀಡಿದ ಐಶ್ವರ್ಯಾ ರೈ

12:05 PM Nov 08, 2017 | Team Udayavani |

ಮುಂಬಯಿ: ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್‌ ನಟಿ ನಟಿ  ಐಶ್ವರ್ಯಾ ರೈ  ಬಚ್ಚನ್‌ ಅವರು  ತನ್ನ 44ನೇ ಜನ್ಮ ದಿನದ ಸಂದರ್ಭದಲ್ಲಿ  ಮಿಡ್ಡೇ  ಮೀಲ್‌  ಕಾರ್ಯಕ್ರಮದ  ಮೂಲಕ  ಸುಮಾರು 1,000ಕ್ಕಿಂತ ಅಧಿಕ ಮಕ್ಕಳಿಗೆ ಒಂದು ವರ್ಷದವರೆಗೆ ಊಟವನ್ನು ನೀಡಲು ಮುಂದಾಗಿದ್ದಾರೆ.

Advertisement

ತನ್ನ ಸೌಂದರ್ಯ ಮತ್ತು ಅಭಿನಯಕ್ಕೆ ಹೆಸರುವಾಸಿಯಾಗಿರುವ  ಐಶ್ವರ್ಯಾ ರೈ  ಅವರು ಸಾಮಾಜಿಕ ಕಾರ್ಯಕ್ಕೂ ಕೈ ಜೋಡಿಸಿದ್ದಾರೆ. ಅನ್ನ ಆತ್ಮೀಯ ಫೌಂಡೇಶನ್‌ನ  ಮಿಡ್ಡೇ ಮಿಲ್‌ ಯೋಜನೆಯು ಮಹಾರಾಷ್ಟ್ರ ದಲ್ಲಿ  2,000ಕ್ಕಿಂತ ಅಧಿಕ ಶಾಲೆಗಳಲ್ಲಿನ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿದೆ.

 2004  ಆರಂಭವಾದ ಅನ್ನಮಿತ್ರ ಸಂಸ್ಥೆಯು  ನಿರತರವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ.  ಈಗ ಐಶ್ವರ್ಯ ರೈ ಅವರು ಈ ಸಂಸ್ಥೆಗೆ  ಕೈಜೋಡಿಸಿ ಒಂದು ವರ್ಷಗಳ ಕಾಲ ಮಕ್ಕಳಿಗೆ ಬಿಸಿ ಊಟ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ.  ಅಲ್ಲದೆ ಸಾವಿರಾರು ಮಕ್ಕಳ ಊಟದ ಖರ್ಚಿನ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next