Advertisement

ಏರ್‌ ಇಂಡಿಯಾ ವಿಮಾನ ಒಪ್ಪಂದದ ಬಗ್ಗೆ ಹೊಸ ಮಾಹಿತಿ : 470 ಅಲ್ಲ 840 ವಿಮಾನ!!

11:27 PM Feb 16, 2023 | Team Udayavani |

ಹೊಸದಿಲ್ಲಿ: ಟಾಟಾ ಸನ್ಸ್‌ ಮಾಲಕತ್ವದ ಏರ್‌ ಇಂಡಿಯಾ ಕಂಪೆನಿ ಬುಧವಾರ ಬೋಯಿಂಗ್‌ ಮತ್ತು ಏರ್‌ಬಸ್‌ ಕಂಪೆನಿಗಳ ಜತೆಗೆ 470 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಮುಂದಿನ ಒಂದು ದಶಕದಲ್ಲಿ ಎರಡೂ ಕಂಪೆನಿಗಳಿಂದ ಹೆಚ್ಚುವರಿಯಾಗಿ 370 ವಿಮಾನಗಳನ್ನು ಪಡೆದುಕೊಳ್ಳಲು ಅವಕಾಶ ಇದೆ. ಈ ಮೂಲಕ 840 ವಿಮಾನಗಳ ಖರೀದಿ ಒಪ್ಪಂದ ಮಾಡಿ ದಂತೆ ಆಗಿದೆ ಎಂದು ಏರ್‌ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ನಿಪುಣ್‌ ಅಗರ್ವಾಲ್‌ ಹೇಳಿದ್ದಾರೆ.

Advertisement

ಈ ಮೂಲಕ ಕಂಪೆನಿ ದಾಖಲೆ ನಿರ್ಮಿಸಿದೆ ಎಂದು ಅವರು ಲಿಂಕ್ಡ್ ಇನ್‌ನಲ್ಲಿ ಬರೆದುಕೊಂಡಿ ರುವ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. “ಏರ್‌ ಬಸ್‌ನಿಂದ 250 ಹಾಗೂ ಬೋಯಿಂಗ್‌ನಿಂದ 220 ವಿಮಾನಗಳು ಸೇರಿ ಒಟ್ಟು 470 ವಿಮಾನಗಳ ಖರೀದಿ ಅಂತಿಮಗೊಂಡಿದೆ. ಇದರ ಹೊರತಾಗಿ ಮುಂದಿನ ಒಂದು ದಶಕದಲ್ಲಿ 2  ಕಂಪೆನಿಗಳಿಂದ ಹೆಚ್ಚುವರಿಯಾಗಿ 70 ವಿಮಾನಗಳ ಖರೀದಿಯ ಆಯ್ಕೆ ಮತ್ತು ಹಕ್ಕುಗಳನ್ನು ಏರ್‌ ಇಂಡಿಯಾ ಪಡೆದುಕೊಂಡಿದೆ’ ಎಂದು ಮಾಹಿತಿ ನೀಡಿದ್ದಾರೆ.

ನಿರ್ವಹಣೆ ಬಗ್ಗೆ: ಜಿಇ ಏರೋಸ್ಪೇಸ್‌, ರೋಲ್ಸ್‌- ರಾಯ್ಸ, ಮತ್ತು ಸಿಎಫ್ಎಂ ಇಂಟರ್‌ನ್ಯಾಶನಲ್‌ ಕಂಪೆನಿಗಳೊಂದಿಗೆ ವಿಮಾನಗಳ ಎಂಜಿನ್‌ಗಳ ನಿರ್ವಹಣೆ ಮತ್ತು ಉಸ್ತುವಾರಿಗಾಗಿ  ಏರ್‌ ಇಂಡಿಯಾ ದೀರ್ಘಾವಧಿ ಒಪ್ಪಂದ ಮಾಡಿ ಕೊಂಡಿದೆ’ ಎಂದು  ಹೇಳಿದ್ದಾರೆ.

“ಆಧುನಿಕ ವಿಮಾನ ಯಾನ ಇತಿಹಾಸದಲ್ಲೇ ವಿಮಾನ ಯಾನ ಸಂಸ್ಥೆಯಿಂದ ಅತೀ ಹೆಚ್ಚು ವಿಮಾನಗಳ ಖರೀದಿ ಒಪ್ಪಂದಗಳಲ್ಲಿ ಇದು ಒಂದಾಗಿದೆ.

17 ವರ್ಷಗಳಲ್ಲೇ ಏರ್‌ ಇಂಡಿಯಾ ಕಂಪೆನಿಯು ವಿಮಾನಗಳ ಖರೀದಿ ಒಪ್ಪಂದ ಮಾಡಿಕೊಂಡಿರು  ವುದು ಇದೇ ಮೊದಲು. ಈ ವರ್ಷದ ಅಂತ್ಯದಲ್ಲಿ ಮೊದಲ ಎ350 ವಿಮಾನವು ಏರ್‌ ಇಂಡಿಯಾ ತೆಕ್ಕೆಗೆ ಸೇರಲಿದೆ’ ಎಂದು ನಿಪುಣ್‌ ಅಗರ್ವಾಲ್‌ ವಿವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next