Advertisement

ಏರ್‌ ಇಂಡಿಯಾಕ್ಕೆ ಟಾಟಾ ಬಿಡ್‌

10:30 AM Dec 15, 2020 | mahesh |

ಹೊಸದಿಲ್ಲಿ: ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಮಾರುವ ಪ್ರಸ್ತಾವ‌ಕ್ಕೆ ಮರು ಜೀವ ಬಂದಂತೆ ಕಾಣುತ್ತಿದೆ. ಸೋಮವಾರ ಸಂಜೆ ಸಂಸ್ಥೆ ಯನ್ನು ಖರೀದಿಸುವ ಬಗ್ಗೆ ಆಸಕ್ತಿ ವ್ಯಕ್ತ ಪಡಿಸಲು ಕೊನೆಯ ದಿನವಾಗಿತ್ತು. ಎಲ್ಲ ಸಂಸ್ಥೆಗಳ ಪೈಕಿ ಪ್ರಮುಖವಾಗಿ ಏರ್‌ ಇಂಡಿಯಾವನ್ನು 1932ರಲ್ಲಿ ಸ್ಥಾಪಿಸಿ 1953ರಲ್ಲಿ ಭಾರತ ಸರಕಾರಕ್ಕೆ ಹಸ್ತಾಂತರಿಸಿದ ಟಾಟಾ ಸಮೂಹ ಪ್ರಧಾನವಾಗಿದೆ. ಟಾಟಾ ಸಮೂಹ ವಿಸ್ತಾರ ಮತ್ತು ಏರ್‌ ಏಷ್ಯಾ ಇಂಡಿಯಾ ಎಂಬ ಎರಡು ವಿಮಾನಯಾನ ಸಂಸ್ಥೆ ಗಳನ್ನು ಹೊಂದಿದೆ. ಸದ್ಯ ಏರ್‌ಏಷ್ಯಾ ಇಂಡಿಯಾ ಸಂಸ್ಥೆಯ ಮೂಲಕ ಸರಕಾರಿ ವಿಮಾನ ಸಂಸ್ಥೆ ಖರೀದಿಸುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದೆ. ಹೊಸದಿಲ್ಲಿಯಲ್ಲಿ ಮೂಲ ಗಳು ತಿಳಿಸಿರುವ ಪ್ರಕಾರ ಸಂಸ್ಥೆಯ ಪ್ರತಿನಿಧಿಗಳು ಶೀಘ್ರವೇ ಈ ಬಗ್ಗೆ ಸರಕಾ ರದ ಜತೆಗೆ ಮಾತುಕತೆ ನಡೆಸಲಿದ್ದಾರೆ. ಹಿಂದಿನ ಸಂದರ್ಭಗಳಲ್ಲಿ ಕೂಡ ಟಾಟಾ ಗ್ರೂಪ್‌ ಏರ್‌ ಇಂಡಿಯಾ ಖರೀದಿಸಲಿದೆ ಎಂದು ವದಂತಿಗಳಿದ್ದಿದ್ದರೂ, ಖಚಿತವಾಗಿರಲಿಲ್ಲ. ಈ ಬಗ್ಗೆ ಸಂಸ್ಥೆ ಏನನ್ನೂ ಹೇಳಿಲ್ಲ.

Advertisement

ಕೇಂದ್ರ ಸರಕಾರ ಸೋಮವಾರ ಸಲ್ಲಿಕೆ ಯಾಗಿರುವ ಆಸಕ್ತಿಗಳ ಬಗ್ಗೆ ಮಾಹಿತಿ ನೀಡಿ, ಟಾಟಾ ಸಂಸ್ಥೆ, ಅಮೆರಿಕದ ಇಂಟ ರ್‌ಅಪ್‌ ಇಂಕ್‌ ಸೇರಿದಂತೆ ಹಲವು ಕಂಪೆನಿಗಳು ಖರೀದಿ ಬಗ್ಗೆ ಆಸಕ್ತಿ ಪ್ರಕಟಿ ಸಿವೆ ಎಂದು ಬಂಡವಾಳ ಹೂಡಿಕೆ ಮತ್ತು ಸಾರ್ವಜನಿಕ ಸೊತ್ತು ನಿರ್ವಹಣ ಇಲಾ ಖೆಯ ಕಾರ್ಯದರ್ಶಿ ಟ್ವೀಟ್‌ನಲ್ಲಿ ತಿಳಿಸಿ ದ್ದಾರೆ. 200 ಸದಸ್ಯರಿರುವ ಏರ್‌ ಇಂಡಿಯಾ ಉದ್ಯೋಗಿಗಳು ರಚಿಸಿ ಕೊಂಡಿರುವ ಸಂಸ್ಥೆ ಕೂಡ ಸರಕಾರಿ ವೈಮಾನಿಕ ಸಂಸ್ಥೆಯನ್ನು ಖರೀದಿಸಿ ಮುನ್ನಡೆಸುವ ಬಗ್ಗೆ ಆಸಕ್ತಿ ತೋರಿಸಿವೆ. ಏರ್‌ ಇಂಡಿಯಾ ಸಾಲ-ಬಡ್ಡಿ ಸೇರಿಸಿ 90 ಸಾವಿರ ಕೋಟಿ.ರೂಗಳನ್ನು ವಿವಿಧ ಸಂಸ್ಥೆಗೆ ಪಾವತಿ ಮಾಡಬೇಕಾಗಿದೆ.

ಇದುವರೆಗೆ…
1932- ಟಾಟಾ ಸನ್ಸ್‌ ಸಂಸ್ಥೆಯಿಂದ ಟಾಟಾ
ಏರ್‌ಲೈನ್ಸ್‌ ಸ್ಥಾಪನೆ
1946- ಏರ್‌ ಇಂಡಿಯಾ ಎಂದು ಹೆಸರು ಬದಲು
1953- ಸರಕಾರಕ್ಕೆ ಸಂಸ್ಥೆಯ ಹಸ್ತಾಂತರ
1995- ಟಾಟಾ ಸನ್ಸ್‌ ವಿಮಾನ ಸಂಸ್ಥೆ ಶುರು ಮಾಡಲು ಯತ್ನ, ಸಿಗದ ಅನುಮತಿ
2001- ಏರ್‌ ಇಂಡಿಯಾ ಖರೀದಿಗೆ ಟಾಟಾ ಸಂಸ್ಥೆ ಯತ್ನಿಸಿದ್ದರೂ, ಬಂಡವಾಳ ಮಾರಾಟಕ್ಕೆ ಸರಕಾರ ಒಪ್ಪಿರಲಿಲ್ಲ
2013- ಎರಡು ವಿಮಾನ ಸಂಸ್ಥೆಗಳ ಹುಟ್ಟು. ಏರ್‌ ಏಷ್ಯಾ ಇಂಡಿಯಾ, ವಿಸ್ತಾರ. ಮಲೇಷ್ಯಾದ ಏರ್‌ ಏಷ್ಯಾ ಮತ್ತು ಸಿಂಗಾಪುರ ಏರ್‌ಲೈನ್ಸ್‌ ಸಹಭಾಗಿತ್ವದಲ್ಲಿ ಕಂಪೆ‌ನಿ ಸ್ಥಾಪನೆ.

Advertisement

Udayavani is now on Telegram. Click here to join our channel and stay updated with the latest news.

Next