Advertisement

ಏರ್‌ಇಂಡಿಯಾ ನಾಲ್ಕು ಕಂಪೆನಿಗಳಾಗಿ ವಿಭಜನೆ

06:35 AM Jan 16, 2018 | Harsha Rao |

ಹೊಸದಿಲ್ಲಿ:ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಸಂಸ್ಥೆಯನ್ನು ನಾಲ್ಕು ಕಂಪೆನಿಗಳಾಗಿ ವಿಭಜಿಸಿ, ಪ್ರತಿ ಕಂಪೆನಿಗಳ ಷೇರುಗಳಲ್ಲಿ ಶೇ. 51ರಷ್ಟನ್ನು ಮಾತ್ರ ಪರಭಾರೆ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ ಜಯಂತ್‌ ಸಿನ್ಹಾ ತಿಳಿಸಿದ್ದಾರೆ. 

Advertisement

ಏತನ್ಮಧ್ಯೆ, ಏರ್‌ ಇಂಡಿಯಾ ದೇಶೀಯ ವಿಮಾನ ಯಾನ ಸಂಸ್ಥೆ ಹಾಗೂ ವಿದೇಶಗಳಲ್ಲಿ ನೀಡಲಾಗುತ್ತಿರುವ ಸೇವಾ ಕಂಪೆನಿಯಾದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆಗಳನ್ನು ವಿಲೀನಗೊಳಿಸಿ ಒಂದೇ ಕಂಪೆನಿ ಯನ್ನಾಗಿಸಲೂ ತೀರ್ಮಾನಿಸಲಾಗಿದ್ದು, ಈ ಕುರಿತ ಪ್ರಕ್ರಿಯೆಗಳು ವರ್ಷಾಂತ್ಯಕ್ಕೆ ಮುಕ್ತಾಯವಾಗುತ್ತವೆ ಎಂದು ಸಿನ್ಹಾ ತಿಳಿಸಿದ್ದಾರೆ. 

ಪರಭಾರೆ ಕುರಿತಂತೆ ಸಮರ್ಪಕ ಚರ್ಚೆ ನಡೆಯಬೇಕು ಎಂದು ಪ್ರಧಾನಿಗೆ  ಸಿಪಿಐ ನಾಯಕ ಡಿ. ರಾಜಾ ಆಗ್ರಹಿಸಿದ್ದಾರೆ. ಈ ಕುರಿತಂತೆ ಪತ್ರ ಬರೆದಿರುವ ಅವರು, ಏರ್‌ಇಂಡಿಯಾ ಪರಭಾರೆಯು ಮುಂದೆ ವ್ಯತಿರಿಕ್ತ ಪರಿಣಾಮಗಳನ್ನು ನೀಡಬಹುದು. 

Advertisement

Udayavani is now on Telegram. Click here to join our channel and stay updated with the latest news.

Next