Advertisement

ಯುದ್ಧ ತರಬೇತಿ ಹಾರಾಟದ ವೇಳೆ ಮಿಗ್‌ ಪತನ : ಪೈಲಟ್‌ ಸಾವು

08:17 PM Mar 17, 2021 | Team Udayavani |

ನವದೆಹಲಿ: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬುಧವಾರ IAFನ ಮಿಗ್‌-21 ಬೈಸನ್‌ ವಿಮಾನ ಪತನವಾಗಿ ಪೈಲಟ್‌ ಅಸುನೀಗಿದ್ದಾರೆ. ಅವರನ್ನು ಗ್ರೂಪ್‌ ಕ್ಯಾಪ್ಟನ್‌ ಎ.ಗುಪ್ತಾ ಎಂದು ಗುರುತಿಸಲಾಗಿದೆ.

Advertisement

ಯುದ್ಧ ತರಬೇತಿ ಹಾರಾಟದ ವೇಳೆ ಈ ದುರಂತ ನಡೆದಿದೆ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ನೀಡಲಾಗಿದೆ. ಜತೆಗೆ ಪೈಲಟ್‌ ಅಸುನೀಗಿರುವ ಬಗ್ಗೆಯೂ ಭಾರತೀಯ ವಾಯುಪಡೆ ದುಃಖ ವ್ಯಕ್ತಪಡಿಸಿದೆ.

2019ರ ಫೆ.27ರಂದು ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಇದೇ ವಿಮಾನದ ಮೂಲಕ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದು ಉರುಳಿಸಿದ್ದರು. ಹಿಂದಿನ ಸೋವಿಯತ್‌ ಒಕ್ಕೂಟ ನಿರ್ಮಿಸಿದ್ದ ಮಿಗ್‌-21 ಬೈಸನ್‌ ವಿಮಾನವನ್ನು 1960ರಲ್ಲಿ ಮಿಗ್‌-21 ಎಂಬ ಸರಣಿಗೆ ಮೇಲ್ದರ್ಜೆಗೆ ಏರಿಸಿ ಸೇರ್ಪಡೆ ಮಾಡಲಾಗಿತ್ತು.

ಇದನ್ನೂ ಓದಿ :ರಾಜ್ಯದಲ್ಲಿ ಹಗಲು ಅಥವಾ ರಾತ್ರಿ ಕರ್ಫ್ಯೂ ಇಲ್ಲ : ಮಾಸ್ಕ್ ಕಡ್ಡಾಯ, ತಪ್ಪಿದರೆ ಕ್ರಮ ; BSY

Advertisement

Udayavani is now on Telegram. Click here to join our channel and stay updated with the latest news.

Next