Advertisement
ವಿದ್ಯುತ್ ಸಂಪರ್ಕ ಜಾಲಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಈಗಾಗಲೇ ಅಭಿವೃದ್ಧಿಗೊಂಡು ಕೃಷಿ ವಲಯವಾಗಿರುವ ಪ್ರದೇಶಗಳನ್ನು ಯೋಜನೆಗೆ ಗುರುತಿಸಲಾಗಿದೆ. ಬೇರೆ ರಾಜ್ಯ, ಜಿಲ್ಲೆಗಳಿಗೆ ಮಾಡಲಾಗುತ್ತಿರುವ ಯೋಜನೆಗಾಗಿ ನಮ್ಮ ಫಲವತ್ತಾದ ಕೃಷಿಭೂಮಿಯನ್ನು ನಾಶ ಪಡಿಸುವುದನ್ನು ವಿರೋಧಿಸುತ್ತಿ ದ್ದೇವೆ. ಯೋಜನೆಯಿಂದ ಉಭಯ ಜಿಲ್ಲೆಗಳ 1,150 ಎಕರೆ ಭೂಭಾಗ ಬಲಿಯಾಗುತ್ತದೆ. ಸುಮಾರು 2,300 ಎಕರೆಯಷ್ಟು ಜಮೀನು ಉಪಯೋಗಕ್ಕೆ ಇಲ್ಲದಂತಾಗಲಿದೆ. ಇದಲ್ಲದೆ, 328 ಮನೆಗಳು, 26 ದೈವಸ್ಥಾನಗಳು, 8 ಮಸೀದಿ, 16 ದೇವಸ್ಥಾನ,14 ಶಾಲೆಗಳು, 3 ಸೆಮಿನರಿಗಳುಈ ಕಾರಿಡಾರ್ ಹಾದುಹೋಗುವ ಜಾಗದಲ್ಲಿ ಬರಲಿದೆ ಎಂದರು.
ಯುಕೆಟಿಎಲ್ ಯೋಜನೆಗಾಗಿ ಕೃಷಿ ಭೂಮಿ ನಾಶ ಮಾಡುವ ಬದಲು ಭೂಗತ ಕೇಬಲ್ ಅಳವಡಿಸಿ ಯೋಜನೆ ಮುಂದುವರೆಸಬಹುದು. ಸಮುದ್ರ ಮಾರ್ಗ, ರೈಲ್ವೇ ಹಳಿ, ಹೆದ್ದಾರಿ ಬದಿಯಲ್ಲಿ ರವಾನಿಸಲು ಅವಕಾಶವಿದ್ದು ಅವುಗಳನ್ನು ಬಳಸಿಕೊಳ್ಳಬಹುದು ಎಂದರು.ಪ್ರಮುಖರಾದ ರಾಜೀವ ಗೌಡ, ದಯಾನಂದ ಶೆಟ್ಟಿ, ಉದಯ ಕುಮಾರ್, ಅಲೊನ್ಸ್ ಡಿ’ಸೋಜಾ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ
ಕಚೇರಿಗೆ ಮುತ್ತಿಗೆ
ಪ್ರಸ್ತುತ ಹೋರಾಟಕ್ಕೆ ರಾಜ್ಯದ ರೈತ ಸಂಘಟನೆಗಳು ಬೆಂಬಲಿಸಿವೆ. ಫಲವತ್ತಾದ ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಇದೆ. ಈ ಹಿನ್ನೆಲೆಯಲ್ಲಿ ಹೋರಾಟ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಮುಖಂಡ ಶ್ರೀಧರ ಶೆಟ್ಟಿ ಹೇಳಿದರು.