Advertisement
ಎಲ್ಲ ಹಳ್ಳಿಗಳಲ್ಲಿ ರೈತರು ತಮ್ಮ ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಯಲ್ಲಿತಲ್ಲೀನರಾಗಿದ್ದಾರೆ.ಜಿಲ್ಲಾದ್ಯಂತ ಮುಂಗಾರು ಮಳೆ ಜುಲೈ ತಿಂಗಳಲ್ಲಿ ಧಾರಕಾರವಾಗಿ ಸುರಿದಿದೆ. ಜಿಲ್ಲೆಯಲ್ಲಿ ಜನವರಿ 1ರಿಂದ ಆಗಸ್ಟ್1ರವರೆಗೆ ವಾಡಿಕೆ ಮಳೆ ಜುಲೈ ಅಂತ್ಯಕ್ಕೆ 368.6 ಮಿ.ಮೀ.ಮಳೆ ಬೀಳಬೇಕು. ಕಳೆದ ವರ್ಷ 361.1 ಮಿ.ಮೀ. ಮಳೆಬಿದ್ದಿದ್ದು, ಈ ವರ್ಷ ಜುಲೈ ಅಂತ್ಯಕ್ಕೆ 319.9 ಮಿ.ಮೀ. ಮಳೆಬಿದ್ದಿದೆ. ವಾಡಿಕೆ ಮತ್ತು ವಾಸ್ತವಿಕ ಮಳೆಗಿಂತ ಈ ಬಾರಿ ಮಳೆಕಡಿಮೆಯಾಗಿದ್ದರೂ, ಜುಲೈ ತಿಂಗಳಲ್ಲಿ ವಾಡಿಕೆ ಮತ್ತು ವಾಸ ¤ವಿಕಮಳೆಗಿಂತ ಅಧಿಕ ಮಳೆ ಬಿದ್ದಿದೆ. ಜುಲೈ ತಿಂಗಳಲ್ಲಿ ವಾಡಿಕೆ ಮಳೆ 75.4 ಮಿ.ಮೀ. ಬೀಳಬೇಕು.
ಕೃಷಿ ಕಾಯಕದಲ್ಲಿ ತಲ್ಲೀನ: ಮಳೆಯಿಂದ ಸ್ವಲ್ಪ ಬರವುನೀಡಿದರೂ ರೈತರು ಸಂತಸದಿಂದ ಕುಟುಂಬ ಸಮೇತವಾಗಿ ಹೊಲಗಳಲ್ಲಿ ಬಿತ್ತನೆ ಕಾರ್ಯವನ್ನು ಚುರುಕುಗೊಳಿಸುತ್ತಿದ್ದಾರೆ.ನೇಗಿಲುಹಿಡಿದುಭೂಮಿಯನ್ನುಹಸನು ಮಾಡುತ್ತಿರುವುದುಒಂದೆಡೆಯಾದರೆ, ಇನ್ನು ಕೆಲವು ಕಡೆಗಳಲ್ಲಿ ರಾಗಿ ಸಸಿ ಹಾಕುತ್ತಿರುವುದು, ಕಾಳು ಬಿತ್ತುತ್ತಿರುವುದು ಕಂಡು ಬರುತ್ತಿದ್ದು,ಇಡೀ ಜಿಲ್ಲೆಯಲ್ಲಿ ಜುಲೈ ತಿಂಗಳ ವಾತಾವರಣದಂತೆ ಆಗಸ್ಟ್‌ತಿಂಗಳಲ್ಲೂ ಮಳೆ ಸಮರ್ಪಕವಾಗಿ ಬಂದರೆ ರೈತರಿಗೆ ಹರ್ಷಮೂಡಲಿದೆ. ಆದರೆ, ಎಲ್ಲಿ ಮಳೆ ಕೈಕೊಡುವುದೋ ಎನ್ನುವಆತಂಕದಿಂದಲೇ ರೈತರು ಕೃಷಿಯಲ್ಲಿ ತಲ್ಲೀನರಾಗಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 4.02 ಲಕ್ಷ ಹೆಕ್ಟೇರ್‌ಬಿತ್ತನೆ ಗುರಿ ಪೈಕಿ ಜುಲೈ 22ಕ್ಕೆ 31 ಸಾವಿರ ಹೆಕ್ಟೇರ್ ಮಾತ್ರಬಿತ್ತನೆಯಾಗಿದೆ. ವಾಡಿಕೆಯಂತೆ ಜುಲೈ ಅಂತ್ಯಕ್ಕೆ ಶೇ.56ರಷ್ಟುಬಿತ್ತನೆಯಾಗಬೇಕಿದ್ದು, ಈ ಬಾರಿ ಕಡಿಮೆ ಬಿತ್ತನೆಯಾಗಿರುವುದು ಕಂಡುಬಂದಿದೆ.
Related Articles
Advertisement
ಕೇವಲ 31 ಸಾವಿರಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.24ರಷ್ಟುಮಾತ್ರ ಪ್ರಗತಿಯಾಗಿದೆ. ಕಳೆದ ವರ್ಷ ಈ ವೇಳೆಗೆ ಶೇ.36ರಷ್ಟು ಬಿತ್ತನೆಯಾಗಿತ್ತು. ಜೂನ್-ಜುಲೈ ತಿಂಗಳಲ್ಲಿ ಶೇಂಗಾಬಿತ್ತನೆಗೆ ಸಕಾಲವಾಗಿದೆ. ಆದರೆ, ಜೂನ್ ತಿಂಗಳಲ್ಲಿ ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ಭಾಗಗಳಲ್ಲಿ ನಿರೀಕ್ಷಿಸಿದಷ್ಟು ಮಳೆ ಬಾರದ ಹಿನ್ನಲೆ ಬಿತ್ತನೆಕುಂಠಿತವಾಗಿದೆ.ರಾಗಿ ಬೆಳೆಯುವ ತಾಲೂಕುಗಳಾದ ತುಮಕೂರು, ಕುಣಿಗಲ್, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರುತಾಲೂಕುಗಳಲ್ಲಿ ಈ ವೇಳೆಗೆ ಶೇ.40ರಷ್ಟು ರಾಗಿ ಬಿತ್ತನೆಯಾಗಬೇಕಾಗಿತ್ತು.
ಆದರೆ, ಮಳೆಯ ಅಭಾವದಿಂದ ಬಿñನೆ ¤ ಕುಂಠಿತಗೊಂಡಿದೆ. 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿñನೆ ¤ಮಾಡಬೇಕಾಗಿದ್ದು, 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರಬಿತ್ತನೆಯಾಗಿದ್ದು, ಶೇ.5ರಷ್ಟು ಮಾತ್ರ ಬಿತ್ತನೆ ಯಾಗಿದೆ, ಕಳೆದವರ್ಷ ಶೇ. 18ರಷ್ಟು ಈ ವೇಳೆಗೆ ಬಿತ್ತನೆಯಾಗಿತ್ತು. ಜಿಲ್ಲೆಯಲ್ಲಿರಾಗಿ ಬಿತ್ತನೆಗೆ ಆಗಸ್ಟ್ ಮೊದಲ ವಾರದವರೆಗೆ ಕಾಲಾವಕಾಶವಿದೆ. ಜುಲೈ ತಿಂಗಳಲ್ಲಿ ಧಾರಾಕಾರವಾಗಿ ಮಳೆ ಬಿದ್ದಿದೆ. ಮಧ್ಯಮಧ್ಯ ಬರವು ನೀಡದ ಹಿನ್ನೆಲೆ ಬಿತ್ತನೆ ಕುಂಠಿತಗೊಂಡಿದೆ. ಮಳೆಬರವು ನೀಡಿದರೆ ರಾಗಿ ಬಿತ್ತನೆಕಾರ್ಯ ಚುರುಕಾಗಲಿದೆ.
ಚಿ.ನಿ. ಪುರುಷೋತ್ತಮ್