Advertisement
ಪ್ರಶ್ನೆ ಪತ್ರಿಕೆ ಮುದ್ರಣವಾಗದ ಕಾರಣ ಪರೀಕೆ ಮುಂದೂಡಲಾಗಿದೆ ಎಂದು ವಿವಿ ಪರೀಕ್ಷಾಂಗದ ಅಧಿಕಾರಿಗಳು ಹೇಳುತ್ತಿದ್ದರೆ, ಇದಕ್ಕೆ ಪ್ರಶ್ನೆ ಪತ್ರಿಕೆ ಬಹಿರಂಗ ಇಲ್ಲವೇ ಮತ್ತೂಂದು ಕಾರಣ ಎನ್ನಲಾಗುತ್ತಿದೆ.ಕಳೆದ ವರ್ಷ ಬಿಕಾಂ ಮೂರನೇ ಸೆಮಿಸ್ಟಾರ್‌ನ ಎರಡು ಪತ್ರಿಕೆಗಳು ಹಾಗೂ ಅದರ ಹಿಂದಿನ ವರ್ಷ ಬಿಇಡಿ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಂಡಿರುವುದು ಸೇರಿದಂತೆ ವರ್ಷಂಪ್ರತಿ ಪರೀಕ್ಷೆಯಲ್ಲಿ ಒಂದಿಲ್ಲ ಒಂದು ಅವಾಂತರ ಸೃಷ್ಟಿಯಾಗಿ ಇಡೀ ವಿವಿಗೆ ಸವಾಲು ಹಾಕುತ್ತಿರುವ ಘಟನೆಗಳು ಪದೇ-ಪದೇ ನಡೆಯುತ್ತಿರುವುದು ವಿವಿಯ ನೈತಿಕತೆ ಪ್ರಶ್ನಿಸುವಂತಾಗಿದೆ.
ಕ್ಲಸ್ಟರ್ ಪರೀಕ್ಷೆ ಸುಸೂತ್ರವಾಗಿ ನಡೆದರೆ ಎಲ್ಲಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಾಸಾಗುವುದಿಲ್ಲವೋ ಎನ್ನುವ ಆತಂಕದಲ್ಲಿ ಪರೀಕ್ಷೆಗೆ ಒಂದಿಲ್ಲ ಒಂದು ರೀತಿಯಲ್ಲಿ ಅಡ್ಡಿಪಡಿಸುತ್ತಿದ್ದಾರೆ ಎನ್ನಲಾಗಿದೆ. ಪ್ರತಿಷ್ಠಿತ ಕಾಲೇಜುಗಳು ಹಾಗೂ ಸರ್ಕಾರಿ ಕಾಲೇಜುಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಸರಿಯಾಗಿ ತರಗತಿಗಳನ್ನು ನಡೆಸದೆ ಹಾಗೂ ಪಾಸ್ ಮಾಡಿಕೊಡುತ್ತೇವೆ ಎನ್ನುವ ಭರವಸೆಯೊಂದಿಗೆ ಪ್ರವೇಶಾತಿ ಪಡೆಯುವ ಕೆಲ ಕಾಲೇಜುಗಳು ಕ್ಲಸ್ಟರ್ ಪದ್ಧತಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಅಲ್ಲದೇ ಕ್ಲಸ್ಟರ್ ಪದ್ಧತಿ ಉಲ್ಲಂಘನೆ (ವೈಲೆನ್ಸ್ ) ನಿಯಮದಡಿ ಪ್ರತಿ ವಿದ್ಯಾರ್ಥಿಯಿಂದ 10 ಸಾವಿರ ರೂ. ದಂಡ ಕಟ್ಟಿಸಿ ತಮ್ಮ ಕಾಲೇಜಿನಲ್ಲಿಯೇ ಪರೀಕ್ಷೆ ಬರೆಯಲಾರಂಭಿಸಿದ್ದನ್ನು ನೋಡಿದರೆ ಪರೀಕ್ಷೆ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
Related Articles
Advertisement
ಪರೀಕ್ಷೆ ಸೂಸುತ್ರವಾಗಿ ನಡೆಯದಿದ್ದಕ್ಕೆ ಹಾಗೂ ಕ್ಲಸ್ಟರ್ ಪದ್ಧತಿಗೆ ಹಲವರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ವಿಶ್ವವಿದ್ಯಾಲಯದ ಕುಲಪತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ ಮುಂದಿನ ವರ್ಷದಿಂದ ಪ್ರವೇಶಾತಿ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಪಾಸು ಮಾಡುವ ನಿರ್ಣಯವನ್ನು ವಿವಿ ಸಿಂಡಿಕೆಟ್ -ಸಿನೆಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರಂತೆ. ಇದನ್ನು ನೋಡಿದರೆ ಪರೀಕ್ಷೆ ಸುಸೂತ್ರವಾಗಿ ನಡೆಯದೇ ಅಡ್ಡ ದಾರಿಯಲ್ಲಿ ನಡೆದಿರುವುದು ನಿರೂಪಿಸುತ್ತದೆ.
ಒಟ್ಟಾರೆ ಪ್ರತಿ ವರ್ಷ ಪರೀಕ್ಷೆ ಸಮಯದಲ್ಲಿ ಒಂದಿಲ್ಲ ಒಂದು ಅವಾಂತರ ಸೃಷ್ಟಿಸುತ್ತಿರುವ ಗುಲ್ಬರ್ಗ ವಿಶ್ವವಿದ್ಯಾಲಯವು ಪರೀಕ್ಷೆ ನಡೆಸಲು ಯೋಗ್ಯವೇ ಎನ್ನುವ ಪ್ರಶ್ನೆ ಹುಟ್ಟು ಹಾಕಿ¨
ಹಣಮಂತರಾವ ಭೈರಾಮಡಗಿ