Advertisement
“ನಿನ್ನ ಪ್ರಪ್ರಥಮ ಅಭ್ಯಾಸದಿಂದ ಮೊದಲ್ಗೊಂಡು ಇಂದಿನ ಈ ಮಹೋನ್ನತ ಯಶಸ್ಸಿನ ತನಕ ನೀನು ಸದಾ ನನ್ನನ್ನು ಹೆಮ್ಮೆಪಡುವಂತೆ ಮಾಡುತ್ತಲೇ ಇದ್ದೆ. ಕೀಪ್ ಗೋಯಿಂಗ್ ಸ್ಟ್ರಾಂಗ್ ಬೇಟಾ’ ಎಂಬುದಾಗಿ ರಾಜ್ಕುಮಾರ್ ಶರ್ಮ ಬರೆದಿದ್ದಾರೆ.
ವಿಜಯಯಾತ್ರೆ ಮುಗಿದೊಡನೆ ರಾತ್ರಿಯೇ ವಿರಾಟ್ ಕೊಹ್ಲಿ ಲಂಡನ್ಗೆ ವಿಮಾನ ಏರಿದರು. ಅವರ ಪತ್ನಿ ಅನುಷ್ಕಾ ಶರ್ಮ ಮತ್ತು ಮಕ್ಕಳಿಬ್ಬರು ಯು.ಕೆ.ಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಭಾರತ-ಪಾಕಿಸ್ಥಾನ ನಡುವಿನ ವಿಶ್ವಕಪ್ ಮುಖಾಮುಖಿ ವೇಳೆ ಅನುಷ್ಕಾ ಶರ್ಮ ನ್ಯೂಯಾರ್ಕ್ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಅನಂತರ ಅವರು ಯಾವುದೇ ಪಂದ್ಯಗಳ ವೇಳೆ ಹಾಜರಿರಲಿಲ್ಲ. ವಿಜಯೋತ್ಸವದ ವೇಳೆ ಮುಂಬಯಿಗೂ ಬಂದಿರಲಿಲ್ಲ.