ಗುಡಿಸಲಲ್ಲಿ ಕಾಲ ಕಳೆಯುತ್ತಿರುವ ಕೊರಗ ಕುಟುಂಬ.
Advertisement
ಕುಂದಾಪುರ ತಾಲೂಕಿನ ಕಾಲೊ¤àಡು ಗ್ರಾಮದ ಮೂರೂರಿನಲ್ಲಿ 7 ಕುಟುಂಬಗಳಿರುವ ಕೊರಗರ ಕಾಲೋನಿಗೆ ಸಚಿವ ಆಂಜನೇಯ 2016ರ ಡಿ.31ರಂದು ಭೇಟಿ ನೀಡಿ ಮರ್ಲಿ ಕೊರಗ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಕೊರಗರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಘೋಷಿಸಿದ್ದಲ್ಲದೆ, ಆದರ್ಶ ಗ್ರಾಮವನ್ನಾಗಿ ರೂಪಿಸುವ ಭರವಸೆ ನೀಡಿದ್ದರು. ಆ ಬಳಿಕ ಕಾಲೊನಿ ಎಷ್ಟು ಪ್ರಗತಿ ಕಂಡಿದೆ ಎನ್ನುವುದನ್ನು “ಉದಯವಾಣಿ’ ಬಳಗ ಭೇಟಿ ನೀಡಿ ಪರಿಶೀಲಿಸಿದಾಗ ಕಂಡುಬಂದ ಪರಿಸ್ಥಿತಿ ಶೋಚನೀಯವಾಗಿದೆ.
ಸಚಿವರ ಭೇಟಿಯ ಬಳಿಕವೂ ಕಾಲೊನಿಗೆ ಮೂಲಭೂತ ಸೌಕರ್ಯಗಳಲ್ಲೊಂದಾದ ರಸ್ತೆ ಸಂಪರ್ಕ ಒದಗಿಲ್ಲ. ಸಚಿವರ ಭೇಟಿಗೂ ಮುನ್ನವೇ ಕಾಮಗಾರಿ ಆರಂಭಗೊಂಡಿದ್ದರೂ ಸೇತುವೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಕಾಲೊನಿಗೆ ನಳ್ಳಿ ನೀರಿನ ಸಂಪರ್ಕ ಇಲ್ಲ. ಇರುವ ಒಂದು ಸಮುದಾಯ ಬಾವಿಯ ನೀರು ಬತ್ತಿ ಹೋಗುವ ಪರಿಸ್ಥಿತಿಯಿದೆ. ಫೆಬ್ರವರಿ- ಮಾರ್ಚ್‌ನಲ್ಲಿ ಕುಡಿ ಯುವ ನೀರಿಗೆ ತತ್ವಾರ ಉಂಟಾಗಬಹುದು. ಸಮು ದಾಯ ಭವನದ ಕಾಮಗಾರಿ ನಡೆಯುತ್ತಿರುವುದು ಒಂದೇ ಸಮಾಧಾನಕರ ವಿಚಾರ. 3 ಮನೆಗಳ ನಿರ್ಮಾಣ ಕಾರ್ಯ ಪ್ರಾಥಮಿಕ ಹಂತದಲ್ಲೇ ಇದೆ. ಈ ಕುಟುಂಬದವರು ಇನ್ನೆಷ್ಟು ದಿನ ಪುಟ್ಟ ಗುಡಿಸಲಲ್ಲೇ ಕಾಲ ಕಳೆಯಬೇಕೋ ತಿಳಿದಿಲ್ಲ. 3 ಫೇಸ್ ವಿದ್ಯುತ್ ಸಂಪರ್ಕ ಒದಗಿಸಲು ಸಚಿವರು ಸೂಚಿಸಿದ್ದರೂ ಈಗಲೂ ಒಂದು ಬಲ್ಬ್ನ “ಭಾಗ್ಯ ಜ್ಯೋತಿ’ ಮಾತ್ರ ಈ ಮನೆಗಳನ್ನು ಬೆಳಗುತ್ತಿದೆ. ಸಚಿವರು ಭೇಟಿ ನೀಡಿದ ಬಳಿಕ ಕಳೆದ ಒಂದು ವರ್ಷದಲ್ಲಿ ಕಾಲೋನಿಯಲ್ಲಿ ಗಮನಾರ್ಹ ಅಭಿವೃದ್ಧಿ ಕಾರ್ಯಗಳೇನೂ ನಡೆದಿಲ್ಲ. ಅಂದರೆ, ಇದು ಕಾಟಾಚಾರದ ಗ್ರಾಮವಾಸ್ತವ್ಯವೇ ಎನ್ನುವ ಅನುಮಾನ ಮೂಡಿದೆ. ಸಚಿವರ ಭೇಟಿಯ ಬಳಿಕ ಸರಕಾರದ ಹಲವು ಸವಲತ್ತುಗಳು ಮನೆ ಬಾಗಿಲಿಗೆ ಹರಿದು ಬರಬಹುದು ಎನ್ನುತ್ತಾ ಕನಸಿನ ಗೋಪುರವನ್ನೇ ಕಟ್ಟಿಕೊಂಡಿದ್ದ ಕೊರಗ ಕುಟುಂಬಗಳ ನಿರೀಕ್ಷೆ ಹುಸಿಯಾಗಿದೆ.
Related Articles
ಉಡುಪಿಯಿಂದ ಮೂರೂರಿಗೆ 80 ಕಿ.ಮೀ., ಕುಂದಾಪುರದಿಂದ 56 ಕಿ.ಮೀ. ದೂರವಿದೆ. ಏಳು ಕೊರಗ ಕುಟುಂಬಗಳು ವಾಸಿಸುತ್ತಿರುವ ಇಲ್ಲಿಗೆ ತಾಲೂಕು ಕೇಂದ್ರದಿಂದ ನೇರ ಬಸ್ ಸಂಪರ್ಕ ಇಲ್ಲ. ಅತಿ ಸನಿಹದ ಬಸ್ ನಿಲ್ದಾಣಕ್ಕೆ ತಲುಪಲು 10 ಕಿ.ಮೀ.ಗೂ ಹೆಚ್ಚು ದೂರ ಕಾಲ್ನಡಿಗೆ ಅಥವಾ ಅನ್ಯ ವಾಹನಗಳ ಮೂಲಕ ಪ್ರಯಾಣಿಸಬೇಕು. ಪಡಿತರ ಸಾಮಗ್ರಿಗಳನ್ನು ಮನೆಗೆ ತರಲು ವಾಹನ ಬಾಡಿಗೆಯಾಗಿ 250 ರೂ. ತೆರಬೇಕು. ಹತ್ತಿರದ ಅರೆಶಿರೂರಿನ ಪೇಟೆಗೆ ಬರಬೇಕಾದರೆ ರಿಕ್ಷಾ ಬಾಡಿಗೆ 100 ರೂ. ವ್ಯಯಿಸಬೇಕು.
Advertisement
ಸಚಿವರಲ್ಲಿ ನಮ್ಮ ಸಮಸ್ಯೆಗಳ ಬಗ್ಗೆ ಮನವಿ ಮಾಡಿಕೊಂಡಿದ್ದೆವು. 3 ಫೇಸ್ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಹೇಳಿದ್ದರು. ಇನ್ನೂ ಮಂಜೂರಾಗಿಲ್ಲ. ಸ್ವೂದ್ಯೋಗ ಯೋಜನೆಯಡಿ ಟೈಲರಿಂಗ್ ಘಟಕ ಹಾಗೂ ಕೈಮಗ್ಗ ಕೈಗಾರಿಕೆಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೆವು. ಇದಕ್ಕೆ ತತ್‌ಕ್ಷಣ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದರು. ಒಳಮೀಸಲಾತಿ ಬಗ್ಗೆ ಪ್ರಸ್ತಾವಿಸಿದ್ದರು. ಆದರೆ ಅದಿನ್ನೂ ಘೋಷಣೆಯಾಗಿಯೇ ಉಳಿದಿದೆ. ಗುಲಾಬಿ ಕೊರಗ, ಮೂರೂರು ಪ್ರಶಾಂತ್ ಪಾದೆ