Advertisement
ರಾಜರಾಜೇಶ್ವರಿನಗರ, ದತ್ತ ಲೇಔಟ್, ಕೋರ ಮಂಗಲ 1ನೇ ಬ್ಲಾಕ್, ರುಕ್ಮಿಣಿನಗರ, ರಾಯಲ್ ಎನ್‌ಕ್ಲೈವ್, ಸಿಡೇದಹಳ್ಳಿ, ಉಲ್ಲಾಳ ಮತ್ತು ಸುತ್ತಲಿನ ಪ್ರದೇಶ, ಉಪನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗಿತ್ತು. ಕೋರಮಂಗಲದ 1ನೇ ಬ್ಲಾಕ್, 4ನೇ ಬ್ಲಾಕ್ ಸೇರಿದಂತೆ ಸುತ್ತ ಮುತ್ತಲಪ್ರದೇಶಗಳಲ್ಲಿ ಮನೆ ಹಾಗೂ ಅಪಾರ್ಟ್ ಮೆಂಟ್ ಬೇಸ್‌ಮೆಂಟ್‌ಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ರಸ್ತೆಯಲ್ಲಿ ಮೂರು ಅಡಿ ನೀರು ಹಾಗೂ ಕೆಸರು ತುಂಬಿದ್ದರಿಂದ ವಾಹನಸವಾರರು ಪರದಾಡಿದರು.
Related Articles
Advertisement
ಬೆಳ್ಳಂದೂರು ಸಮೀಪದಕಸವನಹಳ್ಳಿಕೆರೆ ತುಂಬಿಹರಿದ ಪರಿಣಾಮಕೆರೆಯ ಸುತ್ತಲಿನ ಮನೆಗಳು, ಬೇಗೂರು, ಮಂಗಲಮ್ಮನಪಾಳ್ಯದ ಬಹುತೇಕ ಮನೆಗಳಿಗೆ ನೀರು ನುಗ್ಗಿತು. ಇದರಿಂದ ಬೇಸ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಕಾರುಗಳು, ದ್ವಿಚಕ್ರ ವಾಹನಗಳು ಜಲಾವೃತಗೊಂಡವು. ಸುಮಾರು 800ಮನೆಗಳಿರುವಅಪಾರ್ಟ್‌ಮೆಂಟ್‌ಗೆನೀರುನುಗ್ಗಿದ ಪರಿಣಾಮ ಬೇಸ್‌ಮೆಂಟ್‌ನ ಸಂಪುಗಳಿಗೆ ಕೊಳಚೆ ನೀರು ತುಂಬಿಕೊಂಡಿತ್ತು. ಎಲೆಕ್ಟ್ರಿಕಲ್ ಕೊಠಡಿಯೂ ಜಲಾವೃತವಾದ ಪರಿಣಾಮ ಫ್ಲ್ಯಾಟ್‌ಗಳ ವಿದ್ಯುತ್ ಸಂಪರ್ಕವೂ ಕಡಿತವಾಗಿತ್ತು. ಅದೇ ರೀತಿ, ಹೊಸಕೆರೆಹಳ್ಳಿಯ ರಾಜಕಾಲುವೆಯಲ್ಲಿ ನೀರು ಪ್ರಯಾಣ ಹೆಚ್ಚಾಗಿ ಗೋಡೆ ಕುಸಿದು ಅವಾಂತರ ಸೃಷ್ಟಿಯಾಗಿತ್ತು. ರಾಜಕಾಲುವೆ ಸಮೀಪದ ಮನೆಗಳು, ಕಟ್ಟಡ ಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಅಪಾಯದ ಸ್ಥಿತಿ ತುಲುಪಿವೆ. ಬೆಳ್ಳಂದೂರು ವಾರ್ಡ್‌ನ ಹರಳೂರು ಕೆರೆ ಕೋಡಿ ಒಡೆದಿದ್ದು, ಶುಭ ಎನ್‌ಕ್ಲೈವ್‌ಬಡಾವಣೆಗೆ ನೀರು ನುಗ್ಗಿತ್ತು
ದಿಢೀರ್ ನೆರೆ ತಪ್ಪಿಸಲು ಇಂಗುಗುಂಡಿ :
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಗಾಗ್ಗೆ ಉಂಟಾಗುವ “ದಿಢೀರ್ ನೆರೆ ತಪ್ಪಿಸಲು ಅಲ್ಲಲ್ಲಿ ಇಂಗುಗುಂಡಿ (ರಿಚಾರ್ಜಿಂಗ್ ಪಿಟ್)ಗಳ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದುಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ತಿಳಿಸಿದರು.
ಮಂಗಳವಾರ ಸುರಿದ ಭಾರಿ ಮಳೆಯಿಂದ ಹಾನಿ ಉಂಟಾದ ಆರ್.ಆರ್. ನಗರ ಗುರುದತ್ತ ಲೇಔಟ್‌ಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ರಾಜಕಾಲುವೆಗಳಲ್ಲಿ ನೀರಿನಹರಿವುಈ ಮೊದಲು ಶೇ. 40ರಷ್ಟಿತ್ತು.ಅದಕ್ಕೆ ತಕ್ಕಂತೆ ರಾಜಕಾಲುವೆಗಳೂಇದ್ದವು. ಆದರೆ, ಈಗಕಾಂಕ್ರೀಟ್‌ಮಯದಿಂದ ಹರಿವಿನ ಮಟ್ಟ ಶೇ. 94ರಷ್ಟಾಗಿದೆ. ಇದರಿಂದ ಒತ್ತಡಹೆಚ್ಚಿದ್ದು, ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಅಲ್ಲಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಹೇಳಿದರು.
ಮಂಗಳವಾರ ರಾತ್ರಿ ಸುಮಾರು 75ರಿಂದ 150 ಮಿ.ಮೀ. ಮಳೆ ಸುರಿದಿದೆ.ಈಮಧ್ಯೆ ಪಾಲಿಕೆ ವತಿಯಿಂದ ರಾಜಕಾಲುವೆ ಹಾಗೂ ಜಲಮಂಡಳಿಯಿಂದ ಸ್ಯಾನಿಟರಿ ಕಾಮಗಾರಿ ನಡೆಯುತ್ತಿದೆ ಎಂದ ಅವರು, ಉದ್ದೇಶಿತ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಬೇಕಿದೆ.ಅದನ್ನುಕೂಡಲೇಮಾಡಲಾಗುತ್ತದೆ. ಈ ಸಂಬಂಧ ಈಗಾಗಲೇ1,100ಕಟ್ಟಡಗಳನ್ನು ತೆರವು ಮಾಡಲಾಗಿದ್ದು, 700 ಕಟ್ಟಡಗಳ ತೆರವು ಕಾರ್ಯನಡೆಯಬೇಕಿದೆ. ಕೋವಿಡ್ ಹಿನ್ನೆಲೆ ನವೆಂಬರ್ ವರೆಗೂ ಯಾವುದೇ ತೆರವು ಕಾರ್ಯ ನಡೆಸದಂತೆ ನ್ಯಾಯಾಲಯ ಸೂಚನೆ ನೀಡಿದೆ. ನವೆಂಬರ್ ನಂತರ ತೆರವು ಕಾರ್ಯ ಪುನಾರಂಭಗೊಳ್ಳಲಿದೆ ಎಂದರು.
ನಗರದಲ್ಲಿ 842 ಕಿ.ಮೀ ಇದ್ದು, ಈಗಾಗಲೇ 400 ಕಿ.ಮೀ ಉದ್ದದ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಿ, ಆರ್‌ಸಿಸಿ ಗೋಡೆ ನಿರ್ಮಿಸಲಾಗಿದೆ. ಇನ್ನುಳಿದ 400 ಕಿ.ಮೀ. ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಆಯುಕ್ತ ಎನ್. ಮಂಜುನಾಥ ಪ್ರಸಾದ್ ಮಾತನಾಡಿ, ಗುರುದತ್ ಲೇಔಟ್‌ನಲ್ಲಿಯರಾಜಕಾಲುವೆ ತಡೆಗೋಡೆಯು ಸುಮಾರು 20 ವರ್ಷಗಳ ಹಿಂದೆ ಕಟ್ಟಿದ್ದು. ಇದನ್ನು ತೆರವುಗೊಳಿಸಿ, ಹೊಸದಾಗಿ ಕಟ್ಟುವ ಕೆಲಸ ನಡೆಯುತ್ತಿದೆ. ಜತೆಗೆಜಲಮಂಡಳಿಯಿಂದಒಳ ಚರಂಡಿ ಕೆಲಸ ನಡೆಸುತ್ತಿದೆ. ಈ ಮಧ್ಯೆ ಸುರಿದ ಭಾರೀ ಮಳೆಗೆ ರಾಜಕಾಲುವೆಯ
ನೀರಿನ ರಭಸ ಹಾಗೂ ಜಲಮಂಡಳಿಯ
ಕಾಮಗಾರಿಯಿಂದನೀರುಹೆಚ್ಚುಬಂದು, ತಡೆಗೋಡೆ ಜಾಗದಲ್ಲಿ ಮಣ್ಣುಕೊರೆತ ಉಂಟಾಗಿ ಕುಸಿದುಬಿದ್ದಿದೆ. ಗೋಡೆ ಕುಸಿತದಿಂದ ಬಾಧಿತವಾಗಿರುವ ಎರಡು ಮನೆಗಳಲ್ಲಿ ಎಂಟು ಕುಟುಂಬಗಳಿದ್ದು, ಅವರನ್ನು ಬೇರೆಡೆ ಸ್ಥಳಾಂತರಿಸಿ, ಕಾಮಗಾರಿ ಮುಗಿದ ಬಳಿಕ ವಾಪಾಸ್ ಕರೆಸಲಾಗುವುದು ಎಂದರು.
ವಲಯ ಜಂಟಿ ಆಯುಕ್ತರು ನಾಗರಾಜ್, ಮುಖ್ಯ ಎಂಜಿನಿಯರ್ (ರಾಜಕಾಲುವೆ) ಪ್ರಹ್ಲಾದ್ ಮತ್ತಿತರರು ಉಪಸ್ಥಿತರಿದ್ದರು.