Advertisement

20 ವರ್ಷದ ನಂತರ ಬಗ್ರಾಮ್‌ ತೊರೆಯಲಿದೆ ಅಮೆರಿಕ ಸೇನೆ!

08:51 PM Jun 29, 2021 | Team Udayavani |

ಬಗ್ರಾಮ್‌ (ಅಫ್ಘಾನಿಸ್ತಾನ): 2001ರಲ್ಲಿ ಅಮೆರಿಕದ ಅತ್ಯುನ್ನತ ಕಟ್ಟಡಗಳಾದ ಪೆಂಟಗನ್‌ ಮತ್ತು ಡಬ್ಲೂಟಿಒಗಳು, ಅಲ್‌ಖೈದಾ ಉಗ್ರರ ಆತ್ಮಾಹುತಿ ದಾಳಿಯಿಂದ ಧರೆಗುರುಳಿದ್ದವು. ಅಲ್ಲಿಂದ ಅಫ್ಘಾನಿಸ್ತಾನದ ತಾಲಿಬಾನ್‌ ಉಗ್ರರ ಸ್ಥಿತಿ ಬಿಗಡಾಯಿಸಿತು. ಆ ದೇಶಾದ್ಯಂತ ಸೇನಾನೆಲೆಗಳನ್ನು ಸ್ಥಾಪಿಸಿದ ಅಮೆರಿಕ ಎರಡು ದಶಕಗಳ ಕಾಲ ದೇಶವನ್ನು ಹಿಡಿತಕ್ಕೆ ಪಡೆದಿತ್ತು. ಇದೀಗ ಅಮೆರಿಕ ಸೇನೆ ವಾಪಸ್‌ ಹೊರಟಿದೆ. ಜು.4ರಂದು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತೊರೆಯಲಿದೆ. ಈ ಪೈಕಿ ಅಮೆರಿಕ ಸೇನೆಗೆ ಆಶ್ರಯ ನೀಡಿದ ಪ್ರಮುಖ ನೆಲೆ ಬಗ್ರಾಮ್‌. ಇದು ಬಗ್ರಾಮ್‌ ಏರ್‌ಫೀಲ್ಡ್‌ ಎಂದೇ ಖ್ಯಾತವಾಗಿದೆ.

Advertisement

ಕಾಬೂಲ್‌ನ ಉತ್ತರ ಭಾಗದಲ್ಲಿ ಒಂದು ಗಂಟೆ ಪ್ರಯಾಣಿಸಿದರೆ, ಈ ಸಣ್ಣ ನಗರ ಸಿಗುತ್ತದೆ. ಬೇಲಿ ಮತ್ತು ಬೃಹತ್‌ ಗೋಡೆಗಳ ನಡುವೆ ಇದುವರೆಗೆ ಬಂಧಿಯಾಗಿತ್ತು! ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು, ವಿಮಾನಗಳನ್ನು ಇಲ್ಲಿ ಅಮೆರಿಕ ನೆಲೆಗೊಳಿಸಿತ್ತು.

ಇದನ್ನೂ ಓದಿ :Online ಬೆಟ್ಟಿಂಗ್‌ ನಿಷೇಧ ವಿಚಾರ : ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್‌ ಅಸಮಧಾನ

ಇದೀಗ ಬಗ್ರಾಮನ್ನು ಬಿಟ್ಟು ಅಮೆರಿಕ ಯೋಧರು ಹೊರಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಭಾರೀ ಸೇನಾ ಕಾರ್ಯಾಚರಣೆಯ ಕೇಂದ್ರಬಿಂದುವಾಗಿ ಇದು ಉಳಿದುಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next