Advertisement

ನೋಟು ಅಮಾನ್ಯದ ಬಳಿಕ ರೂಪಾಯಿ ಕುಸಿತ ಕಳವಳಕಾರಿ: ಮಮತಾ

04:28 PM Aug 16, 2018 | Team Udayavani |

ಕೋಲ್ಕತ : ನೋಟು ಅಮಾನ್ಯದ ಬಳಿಕ ಇದೀಗ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಅತ್ಯಂತ ಕಳವಳಕ್ಕೆ ಕಾರಣವಾಗಿದೆ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

Advertisement

ಇಂದು ಗುರುವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 43 ಪೈಸೆ ಕುಸಿದು ಹೊಸ ಸಾರ್ವಕಾಲಿಕ ಕನಿಷ್ಠ  70.32 ರೂ. ಮಟ್ಟಕ್ಕೆ ಜಾರಿರುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, “ನೋಟು ಅಮಾನ್ಯದ ಬಳಿಕದ ಅಷ್ಟೇ ಕಳವಳಕಾರಿಯಾಗಿ ರೂಪಾಯಿ ಮೌಲ್ಯ ಕುಸಿಯುತ್ತಿದ್ದು ಇದರಂದ ಸಣ್ಣ ವ್ಯಾಪಾರಿಗಳನ್ನು, ರೈತರನ್ನು ಇದು ನಾಶ ಮಾಡುತ್ತಿದೆ; ರೈತರ ದುಸ್ಥಿತಿ ದುಪ್ಪಟ್ಟಾಗುತ್ತಿದೆ’ ಎಂದು ಹೇಳಿದ್ದಾರೆ. 

ರೂಪಾಯಿ ಮೌಲ್ಯ ಕುಸಿತದೊಂದಿಗೆ ದೇಶದ ಆರ್ಥಿಕತೆಯೂ ಕುಸಿಯುವ ಭೀತಿ ಇದೆ; ದೇಶದ ತೈಲ ಆಮದು ಹೆಚ್ಚಲಿದೆ; ತರಕಾರಿ ಬೆಲೆ ಗಗನಕ್ಕೇರಲಿದೆ ಎಂದು ಮಮತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next