ಹೊಸದಿಲ್ಲಿ: ಮಧ್ಯಪ್ರದೇಶದಲ್ಲಿ ಹೊಂದಾಣಿಕೆಯಾಗದ ಮೈತ್ರಿ ಮಾತುಕತೆಯ ಕುರಿತು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ದ ನಡುವಿನ ಉದ್ವಿಗ್ನತೆಯು ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಉತ್ತರ ಪ್ರದೇಶದ ಕಾಂಗ್ರೆಸ್ ಶಾಸಕರೊಬ್ಬರು ಈಗ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಅಹಂಕಾರ (ಘಮಂಡ್), ತಪ್ಪು ಗ್ರಹಿಕೆ(ಗಲತ್ ಸಮಜ್) ಮತ್ತು ಬುದ್ಧಿವಂತಿಕೆ(ಸದ್ಬುದ್ದಿ)ಗಾಗಿ ಪ್ರಾರ್ಥಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಎಸ್ ಪಿ ಗೆ ಮಧ್ಯಪ್ರದೇಶದಲ್ಲಿ ಯಾವುದೇ ನೆಲೆಯಿಲ್ಲದ ಕಾರಣ ಚುನಾವಣ ಕಣದಿಂದ ಹಿಂದೆ ಸರಿಯುವಂತೆ ಕೇಳಿದ್ದ ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ ಅವರನ್ನು ಅಖಿಲೇಶ್ ಯಾದವ್ ಗುರುವಾರ ಕಟುವಾಗಿ ಟೀಕಿಸಿದ್ದರು. ಮಧ್ಯಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟದ ಪಾಲುದಾರನಾಗಿ ಕಾಂಗ್ರೆಸ್ ಬೆಂಬಲಿಸುವಂತೆ ರಾಯ್ ಎಸ್‌ಪಿಯನ್ನು ಕೇಳಿದ್ದರು. ಬೆನ್ನಲ್ಲೇ ಅಖಿಲೇಶ್ ರಾಯ್ ಅವರಿಗೆ ಸ್ಥಾನಮಾನ ಇಲ್ಲ’ ಎಂದು ಟೀಕಿಸಿದ್ದರು. ಪಾಟ್ನಾ ಅಥವಾ ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟ ಸಭೆಯಲ್ಲಿ ಇರಲಿಲ್ಲ. ಮೈತ್ರಿಯ ಬಗ್ಗೆ ಅವರಿಗೆ ಏನು ಗೊತ್ತು,” ಎಂದು ಹೇಳಿದ್ದರು “ಕಾಂಗ್ರೆಸ್ ನ ಸಣ್ಣ ನಾಯಕರು ನಮ್ಮ ಪಕ್ಷದ ಬಗ್ಗೆ ಹೇಳಿಕೆಗಳನ್ನು ಪಡೆಯಬಾರದು” ಎಂದು ಕಿಡಿ ಕಾರಿದ್ದರು.
ಕಾಂಗ್ರೆಸ್ ನಾಯಕರು ರಾಯ್ ಅವರ ಬೆಂಬಲಕ್ಕೆ ನಿಂತಿದ್ದು, ಅಖಿಲೇಶ್ ಅವರ ಸ್ಥಾನಮಾನ ಮತ್ತು ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಸೇರಿದಂತೆ ಅವರ ಸ್ವಂತ ಪಕ್ಷದೊಳಗಿನ ನಾಯಕರ ವರ್ತನೆಯನ್ನು ಪ್ರಶ್ನಿಸಿದ್ದಾರೆ. ಫರೇಂದ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಚೌಧರಿ, ಅಖಿಲೇಶ್ ಅವರ “ತಪ್ಪು ತಿಳುವಳಿಕೆ” ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ”ಕಾಂಗ್ರೆಸ್‌ನ ಪ್ರತಿಯೊಬ್ಬ ರಾಜ್ಯಾಧ್ಯಕ್ಷರ ಅಧಿಕಾರವೆಂದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನಂತರ ಪ್ರತಿಯೊಬ್ಬ ರಾಜ್ಯಾಧ್ಯಕ್ಷರು ನೇರ ಹೊಣೆಗಾರರಾಗಿರುತ್ತಾರೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ” ಎಂದು ಚೌಧರಿ ಪೋಸ್ಟ್ ಮಾಡಿದ್ದಾರೆ.
100 ವರ್ಷಗಳಿಂದ ಕಾಂಗ್ರೆಸ್ ವಿಕೇಂದ್ರೀಕೃತ ಪ್ರಜಾಪ್ರಭುತ್ವದ ಮೂಲಕ ದೇಶದ ಜನರ ಸೇವೆಯಲ್ಲಿ ಮತ್ತು ವಿವಿಧ ಪ್ರಾಂತ್ಯಗಳ ಸೇವೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
”ನಿಮ್ಮ ಪಕ್ಷದಲ್ಲಿ ವಿಷಯಗಳು ಸ್ವಲ್ಪ ವಿಭಿನ್ನವಾಗಿವೆ ಎಂದು ನನಗೆ ತಿಳಿದಿದೆ. ಇಡೀ ರಾಜ್ಯ ಮತ್ತು ಕುರ್ಮಿ ಸಮುದಾಯಕ್ಕೆ ನಿಮ್ಮ ಪಕ್ಷದಲ್ಲಿ ನರೇಶ್ ಉತ್ತಮ್ ಅವರ ಸ್ಥಾನಮಾನ ತಿಳಿದಿದೆ. ಬಹುಶಃ ಇದು ನಿಮ್ಮ ತಪ್ಪು ತಿಳುವಳಿಕೆಗೆ ಕಾರಣ ”ಎಂದು ಚೌಧರಿ ಬರೆದಿದ್ದಾರೆ.