Advertisement

Electricity: ಆಫ್ರಿಕಾ ವಿದ್ಯುತ್‌ ಬಳಕೆ ಭಾರತದ ಎಸಿಗೆ ಸಮ

11:43 PM Oct 24, 2023 | Pranav MS |

ಹೊಸದಿಲ್ಲಿ: ಭಾರತದಲ್ಲಿ ಗೃಹೋ­ಪಯೋಗಿ ಹವಾನಿಯಂತ್ರಕಗಳ ಬಳಕೆ­ಗಾಗಿ ವೆಚ್ಚವಾಗುತ್ತಿರುವ ವಿದ್ಯುತ್‌ ಪ್ರಮಾಣ 2050ರ ವೇಳೆ 9ಪಟ್ಟು ಹೆಚ್ಚಾಗ­ಲಿದ್ದು, ಇದು ಪ್ರಸಕ್ತ ಇಡೀ ಆಫ್ರಿಕಾದಲ್ಲಿ ಬಳಕೆಯಾಗುತ್ತಿರುವ ವಿದ್ಯುತ್‌ ಪ್ರಮಾಣ­ವನ್ನು ಮೀರಲಿದೆ ಎಂದು ಇಂಟರ್‌ನ್ಯಾಶನಲ್‌ ಎನರ್ಜಿ ಏಜೆನ್ಸಿ ತಿಳಿಸಿದೆ.

Advertisement

ಇತ್ತೀಚೆಗಷ್ಟೇ ಸಂಸ್ಥೆ ಬಿಡುಗಡೆಗೊಳಿ­ಸಿದ ವರದಿ ಪ್ರಕಾರ, ಮುಂದಿನ 3 ದಶಕಗಳಲ್ಲಿ ಭಾರತದಲ್ಲಿ ಭಾರೀ ಪ್ರಮಾಣ­ದಲ್ಲಿ ವಿದ್ಯುತ್‌ ಬೇಡಿಕೆ ಉಂಟಾಗಲಿದೆ. ಅಂದರೆ 2022ರಲ್ಲಿ 42 ಎಕ್ಸಾಜೌಲ್ಸ್‌ (ಇಜೆ) ಇರುವ ವಿದ್ಯುತ್‌ ಪೂರೈಕೆಯು 2030ಕ್ಕೆ 53.7 ಇಜೆಗಳಷ್ಟು ಹಾಗೂ 2050ರ ವೇಳೆಗೆ 73 ಇಜೆಗಳಷ್ಟು ಹೆಚ್ಚಾಗಲಿದೆ.

ಅಲ್ಲದೇ ಇಂಧನ ಬೇಡಿಕೆ ಕೂಡ ಹೆಚ್ಚಲಿದ್ದು, 2022ರಲ್ಲಿ ದಿನಕ್ಕೆ 5.2 ದಶಲಕ್ಷ ಬ್ಯಾರೆಲ್‌ ಇದ್ದಂಥ ಬೇಡಿಕೆ 2030ರ ವೇಳೆಗೆ 6.8 ದ. ಬ್ಯಾರೆಲ್‌ಗೆ, 2050ರ ವೇಳೆಗೆ 7.8 ದಶಲಕ್ಷ ಬ್ಯಾರೆಲ್‌ಗೆ ಏರಿಕೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next