ಕಾಬೂಲ್: ಕೆಲ ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಫ್ಘಾನಿಸ್ಥಾನದ ಕ್ರಿಕೆಟ್ ಆಟಗಾರ ನಜೀಬ್ ತರಕಾಯ್ ಇಂದು ಸಾವನ್ನಪ್ಪಿದ್ದಾರೆ.
29 ವರ್ಷದ ನಜೀಬ್ ಕಳೆದ ಶುಕ್ರವಾರ ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಜಲಾಲಬಾದ್ ನ ಪೂರ್ವ ನಂಗರ್ಹಾರ್ ನಲ್ಲಿ ಅಪಘಾತ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ನಜೀಬ್ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿ ಸ್ವತಃ ಟ್ವೀಟ್ ಮಾಡಿ ಈ ವಿಚಾರವನ್ನು ತಿಳಿಸಿದೆ.
ಇದನ್ನೂ ಓದಿ:ಚೇತೇಶ್ವರ ಪೂಜಾರ, ಹನುಮ ವಿಹಾರಿ ಮತ್ತು ರವಿಶಾಸ್ತ್ರೀಗೆ ಆರು ದಿನ ಕ್ವಾರಂಟೈನ್?
ನಜೀಬ್ ತರಕಾಯ್ ಅಫ್ಘಾನಿಸ್ಥಾನದ ಪರ 12 ಟಿ20 ಮತ್ತು ಒಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದರು. 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ನಲ್ಲಿ ನಜೀಬ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.