ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಏವಿಯೇಷನ್, ಟೂರಿಸಂ, ಹಾಸ್ಪಿಟಾಲಿಟಿ ಮತ್ತು ಟೂರ್-ಟ್ರಾವಲ್ಸ್‌ನಲ್ಲಿ ತರಬೇತಿ ಹೊಂದಿದ ಯುವಕ, ಯುವತಿಯರಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಸಿರೆಬ್ರಾ ಇಂಟಿಗ್ರೇಟೆಡ್ ಟೆಕ್ನಾಲಜೀಸ್ ಲಿಮಿಟೆಡ್ ಸ್ಥಾಪಕ ವಿ.ರಂಗನಾಥನ್ ತಿಳಿಸಿದರು.
ಜಯನಗರದಲ್ಲಿ ಏರೋಸ್ಟಾರ್ ಜೆಟ್ ತರಬೇತಿ ಅಕಾಡೆಮಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಅಹಮದಾಬಾದ್, ಸೂರತ್, ಬರೋಡಾ ಮತ್ತು ರಾಜ್‌ಕೋಟ್ ಜತೆಗೆ ಬೆಂಗಳೂರಿನ ಜಯನಗರ ಮತ್ತು ಮಲ್ಲೇಶ್ವರದಲ್ಲಿ ಅಕಾಡೆಮಿ ಶಾಖೆಗಳಿವೆ.
ಅಕಾಡೆಮಿಯು ವಿಮಾನಯಾನ, ವಿಮಾನ ನಿಲ್ದಾಣ, ಪ್ರವಾಸ ಮತ್ತು ಸಾರಿಗೆ ನಿರ್ವಹಣೆಗೆ ಸಂಬಂಧಿಸಿದಂತೆ ಉದ್ಯೋಗ ಮತ್ತು ತರಬೇತಿ ಆಧಾರಿತ ಶಿಕ್ಷಣ ಒದಗಿಸುತ್ತದೆ. ವೃತ್ತಿ ಆಧಾರಿತ ಮತ್ತು ತರಬೇತಿ ಕೋರ್ಸ್ ಇದಾಗಿದ್ದು, ತರಬೇತಿ ಪೂರ್ಣಗೊಳಿಸಿದ ನಂತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಗಲಿದೆ ಎಂದರು.
1500 ವಿದ್ಯಾರ್ಥಿಗಳು ತರಬೇತಿ: ಅಕಾಡೆಮಿಯ ವಿವಿಧ ಕೇಂದ್ರಗಳಲ್ಲಿ ಈಗಾಗಲೇ ತರಬೇತಿ ಪಡೆದ 1500ಕ್ಕೂ ಅಧಿಕ ವಿದ್ಯಾರ್ಥಿಗಳು ದೇಶದ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಏರ್‌ಲೈನ್ಸ್, ಹೋಟೆಲ್ ಮತ್ತು ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 25 ವಿದ್ಯಾರ್ಥಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸ್ಥಳೀಯ ವಿದ್ಯಾರ್ಥಿಗಳಿಗೆ ಏವಿಯೇಷನ್, ಟೂರಿಸಂ, ಹಾಸ್ಪಿಟಾಲಿಟಿ ಮತ್ತು ಟೂರ್-ಟ್ರಾವಲ್ಸ್‌ನಲ್ಲಿ ತರಬೇತಿ ನೀಡಿ ಈ ಉದ್ಯಮದಲ್ಲಿ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಬೆಂಗಳೂರಿನ ಎರಡು ಕಡೆ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ.
ಏರೋಸ್ಟಾರ್ ಜೆಟ್ ಟ್ರೈನಿಂಗ್ ಅಕಾಡೆಮಿ ಸಿಐಎಸಿ ಗ್ಲೋಬಲ್ ಅಂಗೀಕೃತವಾಗಿರುವ ಜತೆಗೆ, ಐಎಟಿಐಯ ಅಧಿಕೃತ ತರಬೇತಿ ಸಂಸ್ಥೆಯಾಗಿದೆ. ತರಬೇತಿಗೆ ಸೇರಬಯಸುವ ವಿದ್ಯಾರ್ಥಿಗಳು ಕನಿಷ್ಠ ಪಿಯುಸಿ ಅಥವಾ 12ನೇ ತರಗತಿ ಉತೀ¤ರ್ಣರಾಗಿರಬೇಕು ಎಂದು ಸಂಸ್ಥೆ ತಿಳಿಸಿದೆ.