Advertisement
“ಕರ್ನಾಟಕ ಸಂಭ್ರಮ-50’ರ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಸ್ಥಾಪಿಸುವ ಮೂಲಕ ಈ ಸವಿನೆನಪನ್ನು ಶಾಶ್ವತವಾಗಿಡುವುದು ಯೋಜನೆಯ ಉದ್ದೇಶ.
ಎಚ್ಡಿ ಕೋಟೆಯಿಂದ ತರಿಸಿದ ಕಲ್ಲಿನಿಂದ ಹಲ್ಮಿಡಿ ಶಿಲಾಶಾಸನವನ್ನು ಚಿಕ್ಕಮಗಳೂರಿನಲ್ಲಿ ಸಿದ್ದಪಡಿಸಲಾಗಿದೆ. ಹೀಗೆ ಸಿದ್ದವಾದ ಶಿಲಾ ಶಾಸನದ ಪ್ರತಿಕೃತಿಯನ್ನು ಎಲ್ಲ ಜಿಲ್ಲಾ ಕೇಂದ್ರಗಳಿಗೆ ಈಗಾಗಲೇ ಕಳುಹಿಸಲಾಗಿದೆ. ಪ್ರತಿಷ್ಠಾಪನೆ ನಡೆಸುವ ಸ್ಥಳಗಳಲ್ಲಿ ಕಲ್ಲಿನ ಪ್ರತಿಕೃತಿ ತಂದು ನಿಲ್ಲಿಸಲಾಗಿದೆ.
Related Articles
Advertisement
ಕನ್ನಡದ ಮೊದಲ ಶಿಲಾ ಶಾಸನ
ಬೇಲೂರು ತಾಲೂಕಿನ ಹಲ್ಮಿಡಿಯಲ್ಲಿ 1936ರಲ್ಲಿ ಪತ್ತೆಯಾದ ಶಾಸನವನ್ನು ಕನ್ನಡ ಲಿಪಿಯಲ್ಲಿ ಲಭ್ಯವಾದ ಮೊಟ್ಟ ಮೊದಲ ಶಾಸನವೆಂದು ಪರಿಗಣಿಸಲಾಗಿದೆ. 16 ಸಾಲುಗಳ ಬರಹ ಇದರಲ್ಲಿತ್ತು. ಇದು ಕ್ರಿ.ಶಕ 450ರ ಸುಮಾರಿನದ್ದು ಎಂದು ಅಂದಾಜಿಸಲಾಗಿದೆ. ಇದರ ಬಗ್ಗೆ ಸಾಕಷ್ಟು ಅಧ್ಯಯನ-ಅವಲೋಕನಗಳು ನಡೆದಿದೆ. ಹೀಗಾಗಿ ಈ ಶಿಲಾ ಶಾಸನದ ಮಹತ್ವವನ್ನು ಶಾಶ್ವತವಾಗಿ ಜನರ ನೆನಪಿನಲ್ಲಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಪ್ರತಿಕೃತಿ ಸ್ವರೂಪದಲ್ಲಿ ಇರಿಸಲು ಸರಕಾರ ಉದ್ದೇಶಿಸಿದೆ. ಹಲ್ಮಿಡಿ ಶಾಸನದ ಪ್ರತಿಕೃತಿ
-ಎತ್ತರ: ನಾಲ್ಕೂವರೆ ಅಡಿ
-ಅಗಲ: 2 ಅಡಿ
-ದಪ್ಪ: 6 ಇಂಚು
-ತೂಕ: 450 ರಿಂದ 500 ಕಿಲೋ 31 ಜಿಲ್ಲೆಗಳಿಗೂ ರವಾನೆ
ಚಿಕ್ಕಮಗಳೂರಿನಲ್ಲಿ ಒಂದು ಶಿಬಿರ ಮಾಡಿಸಿ 15 ಜನ ಆರ್ಟಿಸ್ಟ್, 15 ಸಹಾಯಕ ಶಿಲ್ಪಿಗಳು ಸೇರಿ ಹಲ್ಮಿಡಿ ಶಾಸನದ ಪ್ರತಿಕೃತಿ ಮಾಡಲಾಗಿದೆ. 31 ಜಿಲ್ಲೆಗಳಿಗೂ ಇದನ್ನು ತಲುಪಿಸಲಾಗಿದೆ. ನ.1ರಂದು ಪ್ರತಿಷ್ಠಾಪನೆ ಆಗಲಿದೆ.
ಚಂದ್ರಶೇಖರ್,
-ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ