Advertisement

Adyar: ಹೊಂಡ ಗುಂಡಿಯಿಂದ ಸಂಕಷ್ಟ, ಪಾದಚಾರಿಗಳಿಗೆ ಕೆಸರಿನ ಸಿಂಚನ

02:17 PM Sep 17, 2024 | Team Udayavani |

ಅಡ್ಯಾರ್‌: ನಗರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 66ರ ಅಡ್ಯಾರ್‌ ಕಟ್ಟೆಯಿಂದ ಅಡ್ಯಾರ್‌ ಪದವು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರು ಗದ್ದೆಯಂತಾಗಿದೆ. ವಾಹನಗಳ ಸಂಚಾರಕ್ಕೆ, ಜನ ನಡೆದುಕೊಂಡು ಹೋಗಲು ಸಂಕಷ್ಟ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಅಡ್ಯಾರ್‌ ಕಟ್ಟೆಯಿಂದ ಕೆಮಂಜೂರು ರೈಲ್ವೇ ಟ್ರಾಫಿಕ್‌ ವರೆಗಿನ ಸುಮಾರು ಅರ್ಧ ಕಿ.ಮೀ. ರಸ್ತೆಯಲ್ಲಿ ಮಳೆಗಾಲದ ಆರಂಭದಲ್ಲೇ ಅಲ್ಲಲ್ಲಿ ಗುಂಡಿ ಬಿದ್ದು ಹದಗೆಟ್ಟು ಸಂಚಾರಕ್ಕೆ ಅಡ್ಡಿಯಾಗಿತ್ತು. ಕಳೆದ ವಾರ ಈ ಗುಂಡಿಗಳಿಗೆ ಮಣ್ಣು ಸುರಿದು ಮುಚ್ಚುವ ಕೆಲಸ ನಡೆದಿತ್ತು. ಆದರೆ ಮಳೆ ಈ ಮಣ್ಣು ಕೆಸರು ರಾಡಿಯಾಗಿದೆ. ಟಿಪ್ಪರ್‌, ಲಾರಿ, ಟೆಂಪೋ ಸಹಿತ ವಿವಿಧ ಘನ ವಾಹನಗಳ ಸಂಚಾರವೂ ಈ ರಸ್ತೆಯಲ್ಲಿ ಹೆಚ್ಚಾ ಗಿದ್ದು, ಸಂಪೂರ್ಣವಾಗಿದೆ ಹಾಳಾಗಿದೆ.

ಕೆಲವು ಕಡೆಗಳಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ಗುಂಡಿ ತಪ್ಪಿಸಿ ವಾಹನ ಚಲಾಯಿಸುವ ಸಾಹಸ ಮಾಡಬೇಕಾದ ಪರಿಸ್ಥಿತಿಯಿದೆ. ದೊಡ್ಡ ವಾಹನಗಳು ಸಾಗು ವಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಕೆಸರಿನ ಸಿಂಚನವಾ ಗುತ್ತಿದೆ. ನಿತ್ಯ ಮಳೆಯೂ ಸುರಿಯುತ್ತಿ ರುವುದರಿಂದ ರಸ್ತೆ ಮತ್ತಷ್ಟು ಹದಗೆಡುವ ಸಾಧ್ಯತೆಯಿದ್ದು, ಸಂಬಂಧಪಟ್ಟವರು ಗಮನ ಹರಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next