Advertisement
ಹೌದು, ಬಿಬಿಎಂಪಿ ಅಕಾರಿಗಳು ಹಾಗೂ ನೌಕರರ ಹಾಜರಾತಿ ಪರಿಶೀಲಿಸಲು ಸೋಮವಾರ ಬೆಳಗ್ಗೆ 10.30ಕ್ಕೆ ಮೇಯರ್, ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿರುವ ಹಣಕಾಸು ವಿಭಾಗದ ವಿಶೇಷ ಆಯುಕ್ತರ ಕಚೇರಿ, ಮುಖ್ಯ ಲೆಕ್ಕಾಕಾರಿಗಳ ಕಚೇರಿ, ಆಸ್ತಿ ವಿಭಾಗದ ಜಂಟಿ ಆಯುಕ್ತರ ಕಚೇರಿ, ಕಂದಾಯ ವಿಭಾಗದ ಜಂಟಿ ಆಯುಕ್ತರ ಕಚೇರಿ, ಟಿವಿಸಿಸಿ ಕಚೇರಿಗಳು ಸೇರಿದಂತೆ ಪಾಲಿಕೆಯ 10ಕ್ಕೂ ಹೆಚ್ಚು ವಿಭಾಗಗಳ ಕಚೇರಿಗಳಿಗೆ ಭೇಟಿ ನೀಡಿ ಹಾಜರಾತಿ ಬಗ್ಗೆ ತಪಾಸಣೆ ನಡೆಸಿದರು.
Related Articles
Advertisement
ಧೂಳು ಹಿಡಿಯುತ್ತಿರುವ ಕಡತಗಳು!ಮೇಯರ್ ಪಾಲಿಕೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸುವ ವೇಳೆ ಹಲವಾರು ಕಡತಗಳು ಧೂಳು ಹಿಡಿಯುತ್ತಿರುವುದು ಬೆಳಕಿಗೆ ಬಂದಿತು. ಇದರಿಂದ ಸಿಡಿಮಿಡಿಗೊಂಡ ಮಹಾಪೌರರು ಕಡತಗಳನ್ನು ಕೂಡಲೇ ವಿಲೇವಾರಿ ಮಾಡಲು ನಿಮಗೇನು ಕಷ್ಟ? ಕಡತಗಳ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಸಾರ್ವಜನಿಕರ ಸೇವೆ ಹೇಗೆ ಮಾಡುತ್ತೀರಾ? ಸಿಬ್ಬಂದಿಗಳು ಮೊದಲು ತಮ್ಮ ಕರ್ತವ್ಯ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಮೇಯರ್, ಆಯುಕ್ತರು ಮತ್ತು ವಿಶೇಷ ಆಯುಕ್ತರು ನಿತ್ಯ ಬರುವಂತಹ ಕೇಂದ್ರ ಕಚೇರಿಯಲ್ಲಿಯೇ ಅಕಾರಿಗಳು ಮತ್ತು ನೌಕರರು ಸಮಯಕ್ಕೆ ಸರಿಯಾಗಿ ಹಾಜರಾಗದಿದ್ದರೆ, ವಲಯ ಕಚೇರಿಗಳಲ್ಲಿ ಇನ್ಯಾವ ಪರಿಸ್ಥಿತಿ ಇರುತ್ತದೆ ಎಂದು ಊಹೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೈರು ಹಾಜರಾಗಿರುವ ಎಲ್ಲ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡುವಂತೆ ಅಕಾರಿಗಳಿಗೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಇದೇ ನಿರ್ಲಕ್ಷ್ಯ ಮುಂದುವರಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.
-ಜಿ.ಪದ್ಮಾವತಿ, ಮೇಯರ್