Advertisement
ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿ ತಾಲೂಕು ಆಡಳಿತ ಸೌಧವಿದೆ. ಸೌಧದ ಹೊರಗಡೆ ಕಾನೂನಿನ ಪಾಠದ ಶಿಸ್ತು-ಪ್ರಕೃತಿ ಸೌಂದರ್ಯ ಸ್ವಲ್ಪ ಪರವಾಗಿಲ್ಲ.. ಆದ್ರೇ ಆಡಳಿತ ಸೌಧದ ೨ನೇ ಮತ್ತು ೩ನೇ ಮಹಡಿಯ ಪರಿಸರದ ಸೊಬಗು ಅನುಭವಿಸಲು ನಮ್ಮಿಂದಲೂ ಸಾಧ್ಯವಿಲ್ಲ.. ಯಾಕೆಂದರೆ ಸಮರ್ಪಕ ಬೆಳಕು ಮತ್ತು ಗಾಳಿ ನೀಡುವ ಕಿಟಕಿಗಳೇ ಕಾಣೆಯಾಗಿವೆ.!
ಆಡಳಿತ ಸೌಧದ ೨ ಮತ್ತು ೩ನೇ ಮಹಡಿಯಲ್ಲಿ ಉಪತಹೀಲ್ದಾರ್ ಕಚೇರಿ, ಉಪಖಜಾನೆ ಕಾರ್ಯಲಯ, ಭೂ ದಾಖಲೆಗಳ ಸಹಾಯಕ ಕಚೇರಿ, ಕಂದಾಯ ದಾಖಲೆ ಕೊಠಡಿ, ಪೋಡಿ ಶಾಖೆ, ಕಂದಾಯ ಸಿಬ್ಬಂದಿ ಕೊಠಡಿ, ಪರ್ಯಾವೇಕ್ಷಕ ಮತ್ತು ಗಣಕ ಯಂತ್ರದ ಕೊಠಡಿ, ಸರ್ವೇ ದಾಖಲೆಗಳ ಕೊಠಡಿ, ಸರ್ವೇ ಇಲಾಖೆಯ ಕೊಠಡಿಗಳಿವೆ. ಶೌಚಾಲಯ ಇದ್ದರೂ ಸ್ವಚ್ಚತೆಯೇ ಮಾಯವಾಗಿದೆ.. ನೀರಿದ್ದರೂ ಮಹಡಿಗೆ ಸರಬರಾಜು ಆಗೋತ್ತಿಲ್ಲ.. ಸರಕಾರಿ ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಶೌಚಾಲಯ ಇಲ್ಲದೇ ಹೊರಗಡೆ ಹೋಗಬೇಕಾದ ಪರಿಸ್ಥಿತಿ ಇನ್ನೂ ಹೊರಗಡೆಯಿಂದ ಕಚೇರಿಗೆ ಬರುವ ಸಾರ್ವಜನಿಕರಿಗೆ ಇನ್ನೂ ಶೌಚಾಲಯ ಸೀಗುತ್ತಾ ಎಂಬುದೇ ಯಕ್ಷಪ್ರಶ್ನೆಯಾಗಿದೆ.
Related Articles
Advertisement
ನೇಟ್‌ವರ್ಕ್ ಕೊಠಡಿಯ ಸಮಸ್ಯೆ..ನ್ಯಾಯಾಲಯ, ಸಾರ್ವಜನಿಕ ಆಸ್ಪತ್ರೆ, ಆಹಾರ ಇಲಾಖೆ, ಅರಣ್ಯ ಇಲಾಖೆ, ಸಬ್ ರಿಜೀಸ್ಟರ್ ಕಚೇರಿ, ತಾಪಂ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ನಾಡಕಚೇರಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಕರ್ನಾಟಕ ರಾಜ್ಯ ವ್ಯಾಪಕ ಪ್ರದೇಶ ಜಾಲದ (ಕೆಎಸ್‌ಡ್ಲೂಎಎನ್) ಕೊಠಡಿಯ ಕಿಟಕಿಗಳ ಗಾಜುಗಳು ಒಡೆ ದಿರುವ ಪರಿಣಾಮ ಮಳೆಯ ನೀರು ಒಳಗಡೆ ಶೇಖರಣೆಯಾಗಿ ನೇಟ್‌ವರ್ಕ್ ಪ್ರಸರಣಕ್ಕೂ ಸಮಸ್ಯೆ ಆಗಲಿದೆ. ಕಚೇರಿ ಆವರಣದಲ್ಲೇ ಸರ್ವೇ ಇಲಾಖೆ..
ಸರ್ವೇ ಇಲಾಖೆಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನೇ ಇಲ್ಲಿಯವರೇಗೆ ಕೊರಟಗೆರೆ ಆಡಳಿತ ಕಲ್ಪಿಸಿಲ್ಲ. ೨೦ಜನ ಸರಕಾರಿ ಸರ್ವೇ ಸಿಬಂದಿಗಳಿಗೆ ಜಾಗದ ಕೊರತೆಯು ಇದೆ. ಕಚೇರಿಯ ಮುಖ್ಯ ಅಧಿಕಾರಿಯೇ ಆವರಣದಲ್ಲಿ ಗೂಡು ಕಟ್ಟಿಕೊಂಡು ಕಾರ್ಯ ನಿರ್ವಹಣೆ ಮಾಡುತ್ತೀದ್ದಾರೆ. ಅಧಿಕಾರಿಗಳಿಗೆ ಸೌಲಭ್ಯ ಕಲ್ಪಿಸದಿರುವ ಕೊರಟಗೆರೆ ಆಡಳಿತ ಇನ್ನೂ ಸಾರ್ವಜನಿಕರಿಗೆ ಹೇಗೆ ಸೌಲಭ್ಯ ಕಲ್ಪಿಸುತ್ತಾರೇ ಎಂಬುದೇ ಪ್ರಶ್ನೆಯಾಗಿದೆ. ಸರ್ವೇ ದಾಖಲೆಯ ಪುಸ್ತಕ ಶೇಖರಣೆ ಮಾಡಲು ಸ್ಥಳಾವಕಾಶದ ಕೊರತೆ ಇದೆ. ಶೌಚಾಲಯ ಇದ್ದರೂ ಸ್ವಚ್ಚತೆಯು ಇಲ್ಲ ಸಮರ್ಪಕ ನೀರು ಸರಬರಾಜು ಆಗೂತ್ತೀಲ್ಲ. ಮಹಿಳೆಯರು ಶೌಚಾಲಯಕ್ಕೆ ಹೊರಗಡೆ ತೆರಳಬೇಕಾದ ಪರಿಸ್ಥಿತಿ ಇದೆ. ದಯವಿಟ್ಟು ಮಹಿಳಾ ಸಿಬ್ಬಂದಿಗೆ ಶೌಚಾಲಯ ಮತ್ತು ನೀರಿಗೆ ಅನುಕೂಲ ಕಲ್ಪಿಸಬೇಕಿದೆ.
ಲಕ್ಷ್ಮೀ, ಸಿಬ್ಬಂದಿ, ಸರ್ವೇ ಇಲಾಖೆ ಸ್ಥಳಾವಕಾಶ ಕೊರತೆಯಿಂದ ಕೊಠಡಿ ಆವರಣದಲ್ಲೇ ಸರ್ವೇ ಇಲಾಖೆ ಕಚೇರಿ ಮಾಡಿ ಕೊಂಡಿದ್ದೇವೆ. ಶೌಚಾಲಯಗಳಿಗೆ ಖಜಾನೆ ಅಧಿಕಾರಿವರ್ಗ ಬೀಗ ಹಾಕಿರುವ ಪರಿಣಾಮ ಸಮಸ್ಯೆ ಆಗಿದೆ. ಇಕ್ಕಟ್ಟಿನ ಪ್ರದೇಶದಲ್ಲಿ ೨೦ಜನ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಶೌಚಾಲಯ ಇಲ್ಲದೇ ಮಹಿಳಾ ಸಿಬ್ಬಂದಿಗಳಿಗೆ ತೀರ್ವತರದ ಸಮಸ್ಯೆ ಎದುರಾಗಿದೆ.
ರುದ್ರೇಶ್. ಎಡಿಎಲ್‌ಆರ್. ಸರ್ವೇ ಇಲಾಖೆ, ಮಹಿಳಾ ಸಿಬ್ಬಂದಿಗೆ ಶೌಚಾಲಯದ ಕೊರತೆಯ ಬಗ್ಗೆ ತಕ್ಷಣ ಪರಿಶೀಲನೆ ನಡೆಸುತ್ತೇನೆ. ಶೌಚಾಲಯದ ಸ್ವಚ್ಚತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ತಕ್ಷಣ ತಹಶೀಲ್ದಾರ್‌ಗೆ ಸೂಚಿಸುತ್ತೇನೆ. ಕೊಠಡಿಗಳ ಕಿಟಕಿಯ ಗಾಜುಗಳ ರಿಪೇರಿಯ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ.
ಸೋಮಪ್ಪ ಕಡಕೋಳ. ಎಸಿ. ಮಧುಗಿರಿ