ಟೋಕಿಯೊ: ಶ್ರೀಮಂತರ ಕ್ರೀಡೆ ಎಂದರೆ ಹೆಸರಾದ ಗಾಲ್ಫ್ ನಲ್ಲಿ ಭಾರತ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಸದ್ದು ಮಾಡಿದೆ. 23 ವರ್ಷದ ಕರ್ನಾಟಕದ ಕುವರಿ ಅದಿತಿ ಅಶೋಕ್ ಮೊದಲ ಬಾರಿಗೆ ಒಲಿಂಪಿಕ್ಸ್ ನ ಗಾಲ್ಫ್ ಕೋರ್ಟ್ ನಲ್ಲಿ ಭಾರತದ ಹೆಸರನ್ನು ಮೆರೆಸಿದ್ದಾರೆ. ಪದಕ ಗೆಲ್ಲಲು ವಿಫಲರಾದರೂ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಆರಂಭಿಕ ಮೂರೂ ಸುತ್ತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅದಿತಿ ಸತತವಾಗಿ 2ನೇ ಸ್ಥಾನವನ್ನು ಕಾಯ್ದುಕೊಂಡಿದ್ದರು. ಆದರೆ ಇಂದಿನ ಪಂದ್ಯದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದರು.
ಇದನ್ನೂ ಓದಿ:ಗುಂಡೇಟು ತಿಂದ ಬಾಕ್ಸರ್‌ಗೆ ಒಲಿಂಪಿಕ್ಸ್ ನಲ್ಲಿ ಸತತ 2ನೇ ಚಿನ್ನ!
ಕೊನೆಯ ಸುತ್ತಿನಲ್ಲಿ ಕೆಲವೇ ಕೆಲವೇ ಇಂಚುಗಳ ಅಂತರದಿಂದ ಅದಿತಿ ಪದಕ ತಪ್ಪಿಸಿಕೊಂಡರು. ನ್ಯೂಜಿಲ್ಯಾಂಡ್ ನ ಲಿಡಿಯಾ ಕೊ ಅವರು ಬರ್ಡಿ ಹೊಡೆತದಲ್ಲಿ (ನಿಗದಿತ ಸ್ಟ್ರೋಕ್ ಗಿಂತ ಒಂದು ಹೆಜ್ಜೆ ಮೊದಲು) ಗುಳಿಯೊಳಗೆ ಚೆಂಡನ್ನು ಹಾಕಿದರು. ಇದರಿಂದ ಅದಿತಿ ಅಶೋಕ್ ನಾಲ್ಕನೇ ಸ್ಥಾನಕ್ಕೆ ಕುಸಿಯಬೇಕಾಯಿತು.
ಅಮೆರಿಕದ ನೆಲ್ಲಿ ಕೊರ್ಡಾ ಬಂಗಾರ ಗೆದ್ದುಕೊಂಡರು.