Advertisement
ಸುದ್ದಿಗಾರರ ಜತೆಗೆ ಮಾತನಾಡಿ, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ. ಮೈಸೂರಿನಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಆಹ್ವಾನಿಸಿದ್ದರು. ಹೀಗಾಗಿ ಭೇಟಿ ಮಾಡಿ ಮಾತನಾಡಿ ಬಂದಿದ್ದೇನೆ. ನಮ್ಮಲ್ಲಿ ಮತಭೇದವಿರಬಹುದು, ಆದರೆ ಮನ ಭೇದವಿಲ್ಲ. ಮೈಸೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸುತ್ತೇನೆ ಎಂದರು.
ಸರಕಾರದ ಬಗ್ಗೆ ಇಲ್ಲಸಲ್ಲದ ಆರೋಪವನ್ನ ಮೈತ್ರಿ ಪಕ್ಷಗಳು ಮಾಡುತ್ತಿವೆ. ಆರೋಪಕ್ಕೆ ಮೈಸೂರಲ್ಲೇ ಉತ್ತರಿಸುತ್ತೇವೆ. ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆ ಆದಾಗ ಹೈಕಮಾಂಡ್ ನಾಯಕರು ಬರುವುದು ಸಹಜ. ಕೆಲ ನಿರ್ದೇಶನಗಳನ್ನು ನೀಡಿರುವುದು ನಿಜ. ಸರಕಾರ ಕೆಡಗುವುದು ವಿಪಕ್ಷಗಳಿಗೆ ಸುಲಭವಲ್ಲ. ಮಾಜಿ ಪ್ರಧಾನಿ ದೇವೇಗೌಡರಾಗಲಿ, ವಿಪಕ್ಷ ನಾಯಕರಾಗಲಿ ಯಾರೂ ಸನ್ಯಾಸಿಗಳಲ್ಲ. ಅವರ ರಾಜಕಾರಣ ಅವರು ಮಾಡಲಿ. ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದರು.