Advertisement
ಅಲ್ಬುದಾ ಇನ್ವೆಸ್ಟ್‌ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಹಾಗೂ ಎಪಿಎಂಎಸ್ ಇನ್ವೆಸ್ಟ್‌ಮೆಂಟ್ ಫಂಡ್ ಸಂಸ್ಥೆಗಳಿಗೆ ಸಂಬಂಧಿಸಿರುವ ಷೇರು ವ್ಯವಹಾರಗಳನ್ನು ನಡೆಸಬಹುದಾದ ಡಿಮ್ಯಾಟ್ ಖಾತೆಗಳನ್ನು ಕೇಂದ್ರದ ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ತಟಸ್ಥಗೊಳಿಸಿದೆ ಎಂದು ಮಾಡಲಾದ ವರದಿಗಳು ಸತ್ಯಕ್ಕೆ ದೂರವಾಗಿರುವಂಥವು. ನಮ್ಮ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವವರನ್ನು ತಡೆಯುವ ದುರುದ್ದೇಶ ಇದರ ಹಿಂದಿದೆ ಎಂದು ಅದಾನಿ ಗ್ರೂಪ್ ಹೇಳಿದೆ.
ಕಂಪನಿಯಿಂದ ಈ ಸ್ಪಷ್ಟನೆ ಹೊರಬೀಳುವಷ್ಟರಲ್ಲಿ ಷೇರುಪೇಟೆಯಲ್ಲಿ ಅದಾನಿ ಷೇರುಗಳು ಶೇ.25ರಷ್ಟು ಕುಸಿತ ಕಂಡಿವೆ. ಮಧ್ಯಾಹ್ನದ ಹೊತ್ತಿಗೆ, ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇ.24.99ರಷ್ಟು, ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಷೇರುಗಳು ಶೇ. 18.75 ಕುಸಿತ ಕಂಡವು. ಇದರೊಂದಿಗೆ, ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್ ಷೇರುಗಳು ಶೇ. 5ರಷ್ಟು ಇಳಿಮುಖವಾದರೆ, ಅದಾನಿ ಪವರ್ ಷೇರುಗಳು ಶೇ. 4.99ರಷ್ಟು ಕುಸಿದವು. ಪರಿಣಾಮವೆಂಬಂತೆ, ಅದಾನಿ ಕಂಪನಿಗೆ ಬರೋಬ್ಬರಿ 55,692 ಕೋಟಿ ರೂ. ನಷ್ಟವಾಗಿದೆ.