Advertisement

ಆ್ಯಡಂ ಪೀಟಿ ಈಜು ದಾಖಲೆ

07:35 AM Aug 06, 2018 | Team Udayavani |

ಲಂಡನ್‌,  ವಿಶ್ವದ ಅಗ್ರಮಾನ್ಯ ಈಜುಗಾರ ಆ್ಯಡಂ ಪೀಟಿ ತಮ್ಮ ಸಾಮರ್ಥ್ಯವನ್ನು ಮತ್ತೂಮ್ಮೆ ರುಜುವಾತುಪಡಿಸಿದ್ದಾರೆ. 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ ತಮ್ಮದೇ ವಿಶ್ವ ದಾಖಲೆಯನ್ನು ಉತ್ತಮಪಡಿಸಿಕೊಂಡು, ಯುರೋಪಿಯನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಬಾರಿ ಅವರು ಕೇವಲ 57 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದಾರೆ. ಈ ಮೂಲಕ ಅವರು 9ನೇ ಬಾರಿ ಯುರೋಪಿಯನ್‌ ಲಾಂಗ್‌ ಕೋರ್ಸ್‌ ಟೈಟಲ್‌ ಗೆದ್ದಂತಾಗಿದೆ.

Advertisement

ಇಂಗ್ಲೆಂಡಿನ 23ರ ಹರೆಯದ ಪೀಟಿ 2016ರ ರಿಯೋ ಒಲಿಂಪಿಕ್ಸ್‌ನಲ್ಲೂ ದಾಖಲೆ ಸ್ಥಾಪಿಸಿದ್ದರು. ಈಗ ಇದಕ್ಕಿಂತ 0.13 ಸೆಕೆಂಡ್‌ಗಳಷ್ಟು ಬೇಗ ಈಜಿ ತಮ್ಮದೇ ದಾಖಲೆಯನ್ನು ತಿದ್ದಿ ಬರೆದರು. “ಇದು ಅಮೋಘ. ಆದರೆ, ನಾನು ದಾಖಲೆ ಮಾಡುವುದನ್ನು ಗುರಿಯಾಗಿಸಿಕೊಂಡಿರಲಿಲ್ಲ. ಕೊಳದಲ್ಲಿ ಮುಳುಗು ಹಾಕಿದೊಡನೆ ಅದಮ್ಯ ಚೈತನ್ಯ ಸಿಕ್ಕಂತಾಯಿತು. ಗುರಿ ಮುಟ್ಟಿದೊಡನೆ ಸಮಯ ನೋಡಿರಲಿಲ್ಲ. “ನೋ ವೇ’ ಎಂದು ಕಿರುಚಿದೆ. ಆದರೆ, ದಾಖಲೆ ನಿರ್ಮಾಣವಾಗಿದೆ ಎಂಬುದನ್ನು ಅರಿಯಲು ಸ್ವಲ್ಪ ಸಮಯ ಹಿಡಿಯಿತು’ ಎಂದಿದ್ದಾರೆ ಆ್ಯಡಂ ಪೀಟಿ.

ಬೆಳ್ಳಿ ಗೆದ್ದ ಇಂಗ್ಲೆಂಡ್‌ನ‌ವರೇ ಆದ ಜೇಮ್ಸ್‌ ವಿಲ್ಬಿ, ಪೀಟಿ ಅವರಿಗಿಂತ 1.54 ಸೆಕೆಂಡ್‌ ಹಿಂದಿದ್ದರು ಎಂದರೆ ಚಿನ್ನದ ಮೀನಿನ ಮಿಂಚಿನ ವೇಗವನ್ನು ಊಹಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next