ಮುಂಬೈ: ಚಿತ್ರರಂಗದಲ್ಲಿ ನಟಿಯರನ್ನು ಬೋಗದ ವಸ್ತುವಿನ ರೀತಿ ನೋಡುತ್ತಾರೆ ಎಂದು ಬಾಲಿವುಡ್ ನಟಿ ಮಹಿಕಾ ಶರ್ಮಾ ಈ ಬಗ್ಗೆ ಹೇಳಿದ್ದಾರೆ.
ಬಣ್ಣದ ಲೋಕದಲ್ಲಿ ತೆರೆಯ ಹಿಂದಿನ ಕರಾಳ ಮುಖದ ಬಗ್ಗೆ ಮಾತನಾಡಿರುವ ಮಹಿಕಾ, ಮನರಂಜನಾ ಕ್ಷೇತ್ರದಲ್ಲಿ, ನಟಿಯರನ್ನು ಸದಾ ಲೈಂಗಿಕ ವಸ್ತುಗಳಂತೆ ಪರಿಗಣಿಸಲಾಗುತ್ತಿದೆ. ಕೆಲವರು ಬಲವಂತ ಮಾಡಿದರೆ, ಮತ್ತೆ ಕೆಲವರು ಅವಕಾಶ ನೀಡುವ ಆಸೆ ಹುಟ್ಟಿಸಿ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಅದರಲ್ಲೂ ಸಿನಿಮಾ ಹಿನ್ನೆಲೆ ಹೊಂದಿರದ ನಟಿಯರು ಬೆಳೆಯುವುದು ತುಂಬಾ ಕಷ್ಟ ಎಂದಿದ್ದಾರೆ.
ಉದ್ಯಮದಲ್ಲಿ ಮುಂದುವರಿಯಬೇಕಾದರೆ, ನೀವು ಯಾವುದಾದರೂ ತ್ಯಾಗ ಮಾಡಲೇ ಬೇಕು ಎಂದು ಬಹಳಷ್ಟು ಮಂದಿ ನನಗೆ ಹೇಳಿದ್ದಾರೆ. ಅವರು( ನಿರ್ದೇಶಕ, ನಿರ್ಮಾಪಕ) ಹೇಳುವುದನ್ನು ನೀವು ಕೇಳದಿದ್ದರೆ ಅವಕಾಶ ಬರುವುದಿಲ್ಲ. ಚಿತ್ರರಂಗದಲ್ಲಿ ಬದುಕು ಕಂಡುಕೊಳ್ಳಲು ಬರುವ ಹೆಚ್ಚಿನ ನಾಯಕಿಯರು ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ನಿರ್ದೇಶಕರಿಗೆ ಅಥವಾ ನಿರ್ಮಾಪಕರಿಗೆ ಬಲಿಯಾಗುತ್ತಾರೆ.
ಯುವತಿಯರನ್ನು ಅವರು ಕೇವಲ ಲೈಂಗಿಕ ವಸ್ತುಗಳಂತೆ ನೋಡುತ್ತಾರೆ. ಇನ್ನೂ ಯಾವುದೇ ಹಿನ್ನೆಲೆ ಇಲ್ಲದೆ ಬರುವ ಹುಡುಗಿಯರ ಪರಿಸ್ಥಿತಿ ಕೆಟ್ಟದಾಗಿರುತ್ತದೆ. ಸಮಾಜ ಕೂಡ ಸಿನಿಮಾದವರನ್ನು ನೋಡುವ ದೃಷ್ಟಿಕೋನ ಬೇರೆಯಾಗಿರುತ್ತದೆ. ಹಿರೋಯಿನ್ಸ್ ಎಂದರೆ ಹೈ ಪ್ರೊಫೈಲ್ಸ್ ವೇಶ್ಯೆರಂತೆ ನೋಡಲಾಗುತ್ತದೆ. ಕ್ರೇಜ್ ಹೊರತುಪಡಿಸಿ, ಗೌರವವಿಲ್ಲ. “ಇದು ದಾರುಣ ವಿಷಯ” ಎಂದಿದ್ದಾರೆ.
ಪ್ರಸ್ತುತ ಬಾಲಿವುಡ್‌ನಲ್ಲಿ ಕಂಪನ ಸೃಷ್ಟಿಸುತ್ತಿರುವ ರಾಜ್‌ಕುಂದ್ರ ಅವರ ಪೋರ್ನೊ ಚಿತ್ರ ನಿರ್ಮಾಣ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ” ಶಿಲ್ಪಾ ಶೆಟ್ಟಿಯನ್ನು ಸ್ಫೂರ್ತಿಯಾಗಿ ನೋಡುವ ನಾವು ಅಶ್ಲೀಲ ಪ್ರಕರಣದಲ್ಲಿ ಆಕೆಯ ಪತಿ ರಾಜ್‌ಕುಂದ್ರ ಬಂಧನಕ್ಕೊಳಗಾಗುವುದನ್ನು ನೋಡುತ್ತಿರುವುದು ಕೆಟ್ಟ ಎನ್ನಿಸುತ್ತದೆ ಎಂದಿದ್ದಾರೆ.