Advertisement

ನಾಲಿಗೆ ಹರಿಬಿಟ್ಟು ಜೈಲು ಸೇರಿದ ಬಾಲಿವುಡ್ ನಟಿ

06:41 PM Jun 25, 2021 | Team Udayavani |

ಮುಂಬೈ : ಅಸಭ್ಯ ಪದಗಳಿಂದ ನಿಂದನೆ ಹಾಗೂ ಅನೇಕರಿಗೆ ಬೆದರಿಕೆ ಹಾಕಿದ ಆರೋಪದಡಿ ಬಾಲಿವುಡ್ ನಟಿ ಪಾಯಲ್​ ರೋಹಟ್ಗಿ ಅವರನ್ನು ಗುಜರಾತ್​ನ ಅಹ್ಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

Advertisement

ವೈದ್ಯ ಪರಾಗ್​ ಶಾ ಎಂಬುವವರು ಪೊಲೀಸ್​ ಠಾಣೆಯಲ್ಲಿ ಪಾಯಲ್​ ವಿರುದ್ಧ ದೂರು ದಾಖಲು ಮಾಡಿದ್ದರು. ಅಹ್ಮದಾಬಾದ್​ನ ಹೌಸಿಂಗ್​ ಸೊಸೈಟಿಯೊಂದರಲ್ಲಿ ಪರಾಗ್​ ಸದಸ್ಯರಾಗಿದ್ದಾರೆ. ಈ ಹೌಸಿಂಗ್​ ಸೊಸೈಟಿ ವಾಟ್ಸ್​ಆಯಪ್​ ಗ್ರೂಪ್​ನಲ್ಲಿ ಪರಾಗ್​ ವಿರುದ್ಧ ಹಾಗೂ ಆ ಸೊಸೈಟಿಯ ಮುಖ್ಯಸ್ಥರ ವಿರುದ್ಧ ಪಾಯಲ್ ಕೆಟ್ಟ ಶಬ್ದ ಬಳಕೆ ಮಾಡಿದ್ದಾರೆ. ಅಲ್ಲದೆ, ಬೆದರಿಕೆ ಹಾಕಿದ್ದಾರೆ. ನಂತರ ಈ ಪೋಸ್ಟ್​ಗಳನ್ನು ಅವರು ಡಿಲೀಟ್​ ಮಾಡಿದ್ದಾರೆ. ಈ ಹಿನ್ನೆಲೆ ಈಕೆಯ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪಾಯಲ್​ ಈ ರೀತಿ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಮಾಜಿ ಪ್ರಧಾನಿ ಜವಾಹರ್​ಲಾಲ್​ ನೆಹರು ಅವರ ಪತ್ನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ 2019ರಲ್ಲಿ ಪಾಯಲ್​ ವಿರುದ್ಧ ಪ್ರಕರಣ ದಾಖಲಾಗಿತ್ತು. ಟ್ವಿಟರ್​ನಲ್ಲಿ ಆಕ್ಟಿವ್​ ಆಗಿದ್ದ ಇವರು, ಸಾಕಷ್ಟು ಬಾರಿ ಕೀಳಾಗಿ ಮಾತನಾಡಿದ್ದಿದೆ. ಇದರಿಂದ ಅವರ ಟ್ವಿಟರ್​ ಖಾತೆಯನ್ನು ಟ್ವಿಟರ್​ ಇಂಡಿಯಾ ಡಿಲೀಟ್​ ಮಾಡಿದೆ.

ಇನ್ನು ’36 ಚೈನಾ ಟೌನ್’​, ‘ಅಗ್ಲಿ ಔರ್​ ಪಗ್ಲಿ’, ‘ಹೇ ಬೇಬಿ’ ವ್ಯಾಲೆಂಟೈನ್ ನೈಟ್ ಸೇರಿ ಸಾಕಷ್ಟು ಚಿತ್ರಗಳಲ್ಲಿ ಪಾಯಲ್​ ನಟಿಸಿದ್ದಾರೆ. 2008ರಲ್ಲಿ ಬಿಗ್​ ಬಾಸ್​ಗೂ ಕೂಡ ಬಂದಿದ್ದರು. ವ್ರೆಸ್ಲರ್​ ಸಂಗ್ರಾಮ್​ ಸಿಂಗ್​ ಜತೆ ಇವರು ಬಹುಕಾಲದಿಂದ ರಿಲೇಶನ್​ಶಿಪ್​ನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next