Advertisement

BBK11: ಬಿಗ್ ಬಾಸ್ ಮನೆಯಿಂದ ಅರ್ಧದಲ್ಲೇ ಆಚೆ ಬಂದ ಶೋಭಾ: ಇದೆಲ್ಲ ಡ್ರಾಮಾ ಎಂದು ಕಿಚ್ಚ ಗರಂ

11:01 PM Dec 01, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ವಾರದಿಂದ ಒಬ್ಬರು ಮನೆಯಿಂದ ಆಚೆ ಬಂದಿದ್ದಾರೆ.

Advertisement

ಧನರಾಜ್ ಅವರ ಶೋಭಾ ಅವರಿಗೆ ಕೊಟ್ಟ ಕಳಪೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದಕ್ಕೆ ಶೋಭಾ‌ ಮನೆಯವರ ದೃಷ್ಟಿಯಲ್ಲಿ ನಾನು ಕಳಪೆ ಅಲ್ಲ. ನಿಮ್ಮ ಅಭಿಪ್ರಾಯದಲ್ಲಿ ನಾನು ಕಳಪೆ. ಆಗಿದ್ದು ಆಗೋಯಿತು ಬಿಟ್ಟು ಬಿಡು ಎಂದು ಶೋಭಾ ಧನರಾಜ್ ಅವರ ಬಳಿ ಹೇಳಿದ್ದಾರೆ.

ಮನೆಮಂದಿಗೆ ಕಿಚ್ಚ ಲಕ್ಷುರಿಗಾಗಿ ಒಂದು ಫನ್ನ್ ಟಾಸ್ಕ್ ನೀಡಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಟಾಸ್ಕ್ ಟಿವಿಯಲ್ಲಿ ಬರುವ ಫೋಟೋವನ್ನು ಗುರುತಿಸುವ ಟಾಸ್ಕ್ ಇದಾಗಿದೆ.

ಒಂದು ಫೋಟೋ ಟಿವಿಯಲ್ಲಿ ತೋರಿಸಲಾಗುತ್ತದೆ. ಒಬ್ಬರು ಅದನ್ನು ನಟನೆ ಮಾಡಿ ತೋರಿಸಬೇಕು.‌ ಕಣ್ಣಿಗೆ ಬಟ್ಟೆ ಕಟ್ಟಿ ಇದ್ದವರು ಅದನ್ನು ಗೆಸ್ ಮಾಡಬೇಕು.

ಫಸ್ಟ್ ನೈಟ್ ಸೀನ್ ಫೋಟೋ ಗೆಸ್ ಮಾಡಿಸಿದ ಹನುಮಂತು:
ಶೋಭಾ ಅವರು ಕಣ್ಣಿಗೆ ಬಟ್ಟೆ ಕಟ್ಟಿದಾಗ ಫಸ್ಟ್ ನೈಟ್ ಬೆಡ್ ಫೋಟೋ ಟಿವಿಯಲ್ಲಿ ಬಂದಿದೆ. ಇದನ್ನು ರಜತ್ , ತ್ರಿವಿಕ್ರಮ್ ಅವರು ಗೆಸ್ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಕೊನೆಯದಾಗಿ ಹನುಮ ಅವರು ನಾನು ಮಾಡುತ್ತೇನೆ ಎಂದು ಎ ಏ ಐ ಒ ಓ ಔ ಅಂ ಅಃ ಎಂದು ಸೌಂಡ್ ಮಾಡಿ ತೋರಿಸಿದ್ದಾರೆ.ಇದನ್ನು ಶೋಭಾ ಅವರು ಫಸ್ಟ್ ನೈಟ್ ಬೆಡ್ ಎಂದು ಸರಿಯಾಗಿ ಉತ್ತರಿಸಿದ್ದಾರೆ.

Advertisement

ಟಾಸ್ಕ್ ಬಳಿಕ ಇಡೀ‌ ಮನೆಗೆ ಕಿಚ್ಚ ಅವರು ಲಕ್ಷುರಿ ಬಜೆಟ್ ನೀಡುವುದಾಗಿ ಹೇಳಿದ್ದಾರೆ.

ಐಶ್ವರ್ಯಾ ಅವರು ಈ‌ ಮನೆಯಲ್ಲಿ ಬರ್ತಾ ಬರ್ತಾ ಕಳೆದು ಹೋಗುತ್ತಾ ಇದ್ದಾರೆ ಎನ್ನುವ ಪ್ರಶ್ನೆಗೆ ಹನುಮಂತು, ಮಂಜು, ರಜತ್ ಅವರು ಹೌದೆಂಸು ಉತ್ತರಿಸಿದ್ದಾರೆ. ಆದರೆ ಇದಕ್ಕೆ ಐಶ್ವರ್ಯಾ ಆ ರೀತಿ ಏನು ಇಲ್ಲವೆಂದಿದ್ದಾರೆ.

ಮಂಜು ಜತೆ ಇದ್ದಾಗ ಪಕ್ಕಾ ಕ್ಲಾರಿಟಿಯಲ್ಲಿದ್ದ ಮೋಕ್ಷಿತಾ ಈಗ ಒಂಟಿ ಆಗಿದ್ದಾಗ ಗೊಂದಲದಲ್ಲಿ ಇದ್ದಾರೆ ಎನ್ನುವ ಪ್ರಶ್ನೆಗೆ ಮಂಜು, ಗೌತಮಿ ಹೌದೆಂದು ಹೇಳಿದ್ದಾರೆ. ಶಿಶಿರ್, ಸುರೇಶ್ ಅವರು ನಾನಿದನ್ನು ಒಪ್ಪಲ್ಲವೆಂದಿದ್ದಾರೆ.

ಇದಕ್ಕೆ ‌ಮೋಕ್ಷಿತಾ ಅವರು, ಯಾವ್ ಗೊಂದಲವೂ ಇಲ್ಲ. ನಾನಿಲ್ಲಿ ಕ್ಲಾರಿಟಿಯಿಂದಲೇ ಇದ್ದೇನೆ ಎಂದಿದ್ದಾರೆ.

ಮೆಂಟಲ್ ಹಾಗೂ ಫಿಸಿಕಲ್ ಅನ್ ಫಿಟ್ ಆಗಿರುವ ಶೋಭಾ ಅವರನ್ನು ಈಸಿಯಾಗಿ ಮುಂದಿನ ವಾರ ಮನೆಗೆ ಕಳಿಸಬಹುದು ಎನ್ನುವ ಪ್ರಶ್ನೆಗೆ ಭವ್ಯ, ಮಂಜು ಹೌದೆಂದು ‌ಹೇಳಿದ್ದಾರೆ.

ಚೈತ್ರಾ, ಧನರಾಜ್ ಇದಕ್ಕ ನೋ ಎಂದು ಉತ್ತರ ಕೊಟ್ಟಿದ್ದಾರೆ. ಶೋಭಾ ಅವರು ಎರಡನೇ ಸ್ವಲ್ಪ ಎಡವಿದ್ದೇನೆ. ಆರೋಗ್ಯದ ಸ್ಥಿತಿಯಿಂದ ನನಗೆ ಈ ರೀತಿ ಆಗಿದೆವೆಂದಿದ್ದಾರೆ.

ರಜತ್ ಅವರು ಈ ಮನೆಯಲ್ಲಿ ನಾನೇ ಸ್ಟ್ರಾಂಗ್ ಎಂದು ಓವರ್ ಕಾನ್ಫಿಡೆನ್ಸ್ ಯಿಂದ ಆಡ್ತಾ ಇದ್ದಾತೆ ಎನ್ನುವ ಪ್ರಶ್ನೆಗೆ ಐಶ್ವರ್ಯಾ, ಚೈತ್ರಾ ಅವರು ಹೌದೆಂದು ಉತ್ತರಿಸಿದ್ದಾರೆ.

ನಾನದನ್ನು ಎಲ್ಲೂ ಹೇಳಿಲ್ಲ ಎಂದು ರಜತ್ ಹೇಳಿದ್ದಾರೆ.

ಯಾರಿಗೆ ಯಾವ ಪಟ್ಟ:
ಬಕೆಟ್ ರಾಜ ಪಟ್ಟವನ್ನು ರಜತ್ ಅವರು ಸುರೇಶ್ ಅವರಿಗೆ ತೊಡಿಸಿದ್ದಾರೆ. ಸೋಂಬೇರಿ ಪಟ್ಟವನ್ನು ಧನರಾಜ್ ಅವರು ಹನುಮಂತು ಅವರಿಗೆ ನೀಡಿದ್ದಾರೆ. ಉತ್ತರ ಕುಮಾರಿ ಪಟ್ಟವನ್ನು ತ್ರಿವಿಕ್ರಮ್ ಅವರು ಭವ್ಯ ಅವರಿಗೆ ನೀಡಿದ್ದಾರೆ. ರಜತ್ ಅವರಿಗೆ ಚೈತ್ರಾ ಅವರು ಡವ್ ರಾಜ್ ಪಟ್ಟವನ್ನು ನೀಡಿದ್ದಾರೆ. ಅಧಿಕ ಪ್ರಸಂಗಿ ಪಟ್ಟವನ್ನು ಗೌತಮಿ ಅವರು ಸುರೇಶ್ ಅವರಿಗೆ ನೀಡಿದ್ದಾರೆ

ಮೋಕ್ಷಿತಾ ಅವರು ಮಂಜು ಅವರಿಗೆ ಸ್ಯಾಡಿಸ್ಟ್ ಎನ್ನುವ ಪಟ್ಟಿಯನ್ನು ನೀಡಿದ್ದಾರೆ. ಇದರ ಬದಲಾಗಿ ಮಂಜು ಮೋಕ್ಷಿತಾ ಅವರಿಗೆ ಬಕೆಟ್ ರಾಣಿಯ ಪಟ್ಟವನ್ನು ನೀಡಿದ್ದಾರೆ.

ನಾನು ಯಾವತ್ತೂ ಯಾರಿಗೂ ಬಕೆಟ್ ಹಿಡಿದಿಲ್ಲವೆಂದು ಮೋಕ್ಷಿತಾ ಕಣ್ಣೀರಾಕಿದ್ದಾರೆ. ನನ್ನನ್ನು ಮೆಂಟಲ್ ಆಗಿ ಅವರು ತುಂಬಾನೇ ಕುಗ್ಗಿಸಿದ್ದಾರೆ. ಬೇಕಂತಲೇ ಮಾಡ್ತಾ ಇರೋದು. ನಾನು ಮಾಡದೆ ಇರುವ ತಪ್ಪಿಗೆ ಇದನ್ನು ಮಾಡಬೇಕಾ ಎಂದು ಮೋಕ್ಷಿತಾ ಭಾವುಕರಾಗಿದ್ದಾರೆ.

ಇಬ್ಬರ ನಡುವಿನ ಕಿತ್ತಾಟದಿಂದ ಕಿಚ್ಚ ಅವರು ಗರಂ ಆಗಿದ್ದಾರೆ. ಇನ್ನು ಯಾರು ಯಾರಿಗೆ ಸಂಬಂಧಬೇಕು ಇಲ್ಲಿ. ಇಲ್ಲಿ ಎಲ್ಲರೂ ಜಿದ್ದಾಜಿದ್ದಿಗೆ ಆಡ್ತಾ ಇದ್ದೀರಿ. ನಿವೇನು ಮೋಕ್ಷಿತಾ ಆಳ್ತೀರಾ ಇಷ್ಟು ವೀಕಾ ನೀವು? ಎಂದು ಪ್ರಶ್ನಿಸಿದ್ದಾರೆ. ಇದರ ಪ್ರತಿಕ್ರಿಯೆಯಾಗಿ
ಸಿಟ್ಟಿನಲ್ಲೇ ಸುದೀಪ್ ಅವರು ಟಾಸ್ಕ್ ಅಂತ್ಯ ಮಾಡಿದ್ದಾರೆ.

ಎಲಿಮಿನೇಷನ್ ನಿಂದ ಪಾರಾದವರು ಯಾರೆಲ್ಲ:
ಇಂದು ಮೊದಲನೆಯ ಅವರಾಗಿ ಭವ್ಯ ಅವರು ಸೇಫ್ ಆಗಿದ್ದಾರೆ. ಎರಡನೇ ಅವರಾಗಿ ಶೋಭಾ ಅವರು ಸೇಫ್ ಆಗಿದ್ದರು.

ಚೈತ್ರಾ, ಶಿಶಿರ್, ಐಶ್ವರ್ಯಾ ಅವರು ಎಲಿಮಿನೇಷನ್ ನಿಂದ ಪಾರಾಗಿದ್ದಾರೆ.

ಶೋ ತ್ಯಜಿಸಲು ನಿರ್ಧರಿಸಿದ ಶೋಭಾ:

ಶೋಭಾ ಅವರೇ ಯು ಆರ್ ಸೇಫ್ ಎಂದು ಕಿಚ್ಚ ಹೇಳಿದ್ದಾರೆ. ಶೋಭಾ ನನ್ನ ಹೆಲ್ತ್ ನಿಂದ ನನ್ನನ್ನು ನಾನು ಪ್ರೂವ್ ಮಾಡೋಕೆ ಆಗ್ತಾ ಇಲ್ಲ. ಎಲ್ಲೋ ಒಂದು ಕಡೆ ನನಗೆ ಇರೋಕೆ ಆಗ್ತಾ ಇಲ್ಲ ಅಂಥ ಅನ್ನಿಸ್ತಾ ಇದೆ. ನನಗೆ ಕಂಟಿನ್ಯೂ‌ ಮಾಡೋಕೆ ಆಗ್ತಾ ಇಲ್ಲ‌. ವೀಕ್ಷಕರ ನಿರೀಕ್ಷೆಗಳನ್ನು ರೀಚ್ ಮಾಡೋಕೆ ಆಗ್ತಾ ಇಲ್ಲ ಅನ್ನಿಸುತ್ತಿದೆ ಸರ್. ಫೇಸ್ ಮಾಡೋದು ಹೇಗೆ ಅಂಥ ಗೊತ್ತಾಗುತ್ತಿಲ್ಲ. ಇರಬೇಕು ಆದ್ರೆ ಭಯ ಆಗ್ತಾ ಇದೆ ಎಂದು ಶೋಭಾ ಹೇಳಿದ್ದಾರೆ.

ಅರ್ಥ ಮಾಡ್ಕೊಳ್ಲಿ ಯಾಕೆ ಒಳಗಡೆ ಹೋದ್ರಿ ಅಂಥ. ನಿಮ್ಮನ್ನು ಸೇವ್ ಮಾಡಿದ್ರು ಅಲ್ವಾ ಅವರ ನಂಬಿಕೆ ಮೇಲೆ ನೀವು ಈ ರೀತಿ ಹೇಳೋಕೆ ಆಗಲ್ಲ. ನಿಮಗೆ ಬಾಗಿಲು ಓಪನ್ ಮಾಡುತ್ತೇನೆ. ಒಂದಾ ಉಳಿದುಕೊಳ್ಳಿ ಅಥವಾ ಹೊರಡಿ ಎಂದು ಕಿಚ್ಚ ಹೇಳಿದ್ದಾರೆ.

ಕಿಚ್ಚನ ಮಾತು ಕೇಳಿ ಶೋಭಾ ಅವರು ಕಂಬ್ಯಾಕ್ ಮಾಡುತ್ತೇನೆ ಶೋಭಾ ಶೆಟ್ಟಿ ಏನು ಅಂಥ ತೋರಿಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮ ಬಳಿ ಮಾತನಾಡಬೇಕೆಂದು ಶೋಭಾ ಕೈ ಮುಗಿದು ತಾವು ಮನೆಯಿಂದ ಹೋಗ್ತೇನೆ ಎಂದಿದ್ದಾರೆ. ಮಾತು ಬದಲಾಯಿಸಿದ ಶೋಭಾ ಅವರು ‌ನಿರ್ಧಾರಕ್ಕೆ ಸುದೀಪ್ ಗರಂ ಆಗಿದ್ದಾರೆ.

ವೋಟ್ ಮಾಡುವ ಜನರಿಗೆ ನೀವೆಲ್ಕ ಏನು ಮರ್ಯಾದೆ ಕೊಡುತ್ತಿದ್ದೀರಾ. ಮೊದಲು ಇರುತ್ತೀನಿ ಹೇಳಿದ್ರಿ ಈಗ ಏನು ಡ್ರಾಮಾ ಮಾಡ್ತಾ ಇದ್ದೀರಾ? ಹೊರಗಡೆ ಹೋಗ್ಬೇಕಾ ಹೋಗ್ಬೇಕಾ? ಜನಗಳ ವೋಟಿಗೆ ಮರ್ಯಾದೆ ಕೊಡಲ್ಲ.‌ ಇದೆಲ್ಲ ದೊಡ್ಡ ಡ್ರಾಮಾ ಅನ್ನಿಸುತ್ತದೆ. ಈ ತರ ಯಾವತ್ತೂ ನಡೆದಿಲ್ಲ.

ಇವಾಗ ಇಲ್ಲ ಅನ್ನಬೇಡಿ. 11 ವರ್ಷದಿಂದ ಶೋ ನಡೆಸುತ್ತಿದ್ದೇನೆ.‌ನನಗೆ ಇವೆಲ್ಲಾ ಗೊತ್ತಾಗಲ್ವಾ. ನಾನು ‌ಮೂರ್ಖ ಅಂಥ ಅನ್ಕೊಂಡಿದ್ದೀರಾ.‌ ನಿಮ್ಮ ಮಾತಿಗೆ ಬೆಲೆ ಕೊಟ್ಟು ನಿಮ್ಮನ್ನು ‌ಮನೆಗೆ ಕಳುಹಿಸುತ್ತಿದ್ದೇನೆ. ನೀವು ಜನಗಳ ವೋಟಿಗೆ ಮರ್ಯಾದೆ ‌ಕೊಟ್ಟಿಲ್ಲ. ನಿಮಗೆ ಯಾರೆಲ್ಲ ವೋಟ್ ಹಾಕಿದ್ರು ಅವರಿಗೆಲ್ಲ ನಾನು ಕ್ಷಮೆ ಕೇಳುತ್ತೇನೆ.

ನಾನು ಹೋಗ್ತೀನಿ ನನ್ನ ಹೆಲ್ತ್ ಯಿಂದ ಆಗ್ತಾ ಇಲ್ಲ ಎಂದಿದ್ದಾರೆ.

ನನಗೆ ಯಾರಿಗೂ ನೋವು ಮಾಡುವ ಉದ್ದೇಶವಿಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಇರಲಿ ಎಂದು ಕಿಚ್ಚ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next