Advertisement

ಯಶ್‌-ಚಹಾಲ್‌ ಭೇಟಿ

12:05 PM Feb 10, 2021 | Team Udayavani |

ನಟ ಯಶ್‌ ದಂಪತಿಯನ್ನುಕ್ರಿಕೆಟಿಗ ಯಜುವೇಂದ್ರ ಚಹಾಲ್‌ ದಂಪತಿ ಭೇಟಿಯಾಗಿದ್ದು, ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಯಶ್‌ ಅವರನ್ನು ಭೇಟಿಯಾದ ಫೋಟೋವನ್ನು ಯುಜುವೇಂದ್ರ ಚಹಾಲ್‌ ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ಹಾಕಿದ್ದು, ನೆಟ್ಟಿಗರಿಂದ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಸದ್ಯ ಯಶ್‌ “ಕೆಜಿಎಫ್-2′ ಚಿತ್ರೀಕರಣ ಮುಗಿಸಿದ್ದು, ಚಿತ್ರ ಜುಲೈ 16 ರಂದು ತೆರೆಕಾಣುತ್ತಿದೆ. ಈಗ ಯಶ್‌ ಅಭಿಮಾನಿಗಳಲ್ಲಿ “ಕೆಜಿಎಫ್-2′ ಕುತೂಹಲದ ಜೊತೆಗೆ ಯಶ್‌ ಅವರ ಮುಂದಿನ ಸಿನಿಮಾ ಯಾವುದು ಮತ್ತು ಯಾವ ನಿರ್ದೇಶಕರ ಜೊತೆಗೆ ಎಂಬ ಲೆಕ್ಕಾಚಾರ ಕೂಡಾ ಶುರುವಾಗಿದೆ

Advertisement

ಇದನ್ನೂ ಓದಿ :ಸಂಹಾರಿಣಿಯಾಗಿ ಪೂಜಾ ಗಾಂಧಿ ರೀ ಎಂಟ್ರಿ

ಒನ್‌ ಕಟ್‌ ಟು ಕಟ್‌ನಲ್ಲಿ ಸಂಯುಕ್ತಾ ಹೊರನಾಡು :

ಪುನೀತ್‌ ರಾಜ್‌ ಕುಮಾರ್‌ ನಿರ್ಮಾಣದಲ್ಲಿತಯಾರಾಗುತ್ತಿರುವ”ಒನ್‌ ಕಟ್‌ ಟು ಕಟ್‌’ ಸಿನಿಮಾದಚಿತ್ರೀಕರಣ ಆರಂಭವಾಗಿದ್ದು, ಈಗ ಚಿತ್ರತಂಡಕ್ಕೆ ಸಂಯುಕ್ತಾ ಹೊರನಾಡು ಸೇರಿಕೊಂಡಿದ್ದಾರೆ. ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾದ ಸಂಯುಕ್ತಾ, ಪುನೀತ್‌ ಜೊತೆಗಿನ ಫೋಟೋವವನ್ನು ಟ್ವೀಟರ್‌ನಲ್ಲಿಶೇರ್‌ ಮಾಡಿದ್ದಾರೆ. ಈ ಚಿತ್ರದಲ್ಲಿ ಡ್ಯಾನಿಶ್‌ ಸೇಠ್ ನಾಯಕರಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಪುನೀತ್‌ ನಿರ್ಮಾಣದ “ಫ್ರೆಂಚ್‌ ಬಿರಿಯಾನಿ’ ಚಿತ್ರದಲ್ಲೂ ಡ್ಯಾನಿಶ್‌ನಟಿಸಿದ್ದರು. ಈ ಚಿತ್ರವನ್ನು ವಂಸಿಧರ್‌ ನಿರ್ದೇಶಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next