Advertisement
ಸುಮಾರು 650 ಕನ್ನಡ ಚಿತ್ರಗಳು ಮತ್ತು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದ ಕಲಾವಿದ ‘ಅಂಕಲ್ ‘ ಖ್ಯಾತಿಯ ಲೋಕನಾಥ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಒಬ್ಬ ಗಂಡು ಮಗ ಮತ್ತು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 1927ರ ಆಗಸ್ಟ್ 14ರಂದು ಜನಿಸಿದ್ದ ಲೋಕನಾಥ್ 1970ರಲ್ಲಿ ಸಂಸ್ಕಾರ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಭೂತಯ್ಯನ ಮಗ ಅಯ್ಯು, ನಾಗರಹಾವು, ಶರಪಂಜರ, ಮಿಂಚಿನ ಓಟ, ಇತ್ತೀಚಿನ ಭೀಮ ತೀರದಲ್ಲಿ ಚಿತ್ರಗಳಲ್ಲಿ ನಟಿಸಿದ್ದರು.
ಸೋಮವಾರ ಮಧ್ಯಾಹ್ನ 12 ರಿಂದ 2.30ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.