Advertisement
ಛತ್ತೀಸ್‌ಗಢದ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ನಿಷ್ಕ್ರಿಯತೆಯ ಕಾರಣಕ್ಕೆ ವಜಾಗೊಳಿಸಲಾಗಿದೆ. ಇಬ್ಬರು ಡಿಐಜಿ ದರ್ಜೆಯ ಹುದ್ದೆಗಳನ್ನು ಹೊಂದಿದ್ದರು. ಅವರನ್ನು ವಜಾಗೊಳಿಸುವ ಮೂಲಕ ಕೇಂದ್ರ ಸರಕಾರಿ ಬಾಬುಗಳ ನಿಷ್ಕ್ರಿಯತೆಯನ್ನು ಮತ್ತು ಕರ್ತವ್ಯಲೋಪವನ್ನು ಸಹಿಸುವುದಿಲ್ಲ ಎಂಬ ಖಡಕ್ ಸಂದೇಶವನ್ನು ಅಧಿಕಾರಿಗಳಿಗೆ ರವಾನಿಸಿದೆ. ಹಿಂದೆಯೂ ಐಪಿಎಸ್ ಅಥವ ಐಎಎಸ್ ದರ್ಜೆಯ ಅಧಿಕಾರಿಗಳು ಅಪರೂಪಕ್ಕೊಮ್ಮೆ ಕಾನೂನು ಕ್ರಮ ಎದುರಿಸುವ ಅಥವಾ ಅಮಾನತುಗೊಳ್ಳವುದು ಇತ್ತು. ಹೆಚ್ಚಾಗಿ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳು ಈ ಶಿಕ್ಷೆಗೆ ಗುರಿಯಾಗುತ್ತಿದ್ದರು. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೇರಿದ ಬಳಿಕ ಸರಕಾರಿ ಅಧಿಕಾರಿಗಳ ಅದರಲ್ಲೂ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳ ಕಾರ್ಯದಕ್ಷತೆಯನ್ನು ಸುಧಾರಿಸಲು ಗಂಭೀರ ಪ್ರಯತ್ನ ಮಾಡುತ್ತಿದೆ. 2014ರಲ್ಲಿ ಅಧಿಕಾರಕ್ಕೇರಿದ ಕೂಡಲೇ ಮೋದಿ ಅಧಿಕಾರಿಗಳ ಸಮಯಪಾಲನೆಯನ್ನು ಕಟ್ಟುನಿಟ್ಟುಗೊಳಿಸಿದ್ದರು. ಇದರಿಂದಾಗಿ 11 ಗಂಟೆಯ ನಂತರವೇ ಕಚೇರಿಯತ್ತ ದಯಪಾಲಿಸುತ್ತಿದ್ದ ಅಧಿಕಾರಿಗಳು ಬೆಳಗ್ಗೆ 9ಕ್ಕೆ ಬರಲಾರಂಭಿಸಿದ್ದಾರೆ. ಅಂತೆಯೇ ಹಾಜರಿ ಹಾಕಿ ಕಾಫಿ, ಟೀ ಅಥವ ಖಾಸಗಿ ಕೆಲಸಕ್ಕಾಗಿ ಹೊರಗೆ ಹೋಗುವ ಚಾಳಿಗೂ ಬಹುತೇಕ ಕಡಿವಾಣ ಬಿದ್ದಿದೆ. ಸಂಜೆ ಕೆಲಸ ಮುಗಿಸಿದ ಮೇಲೆಯೇ ಅಧಿಕಾರಿಗಳು ಮನೆಗೆ ಹೋಗುತ್ತಿದ್ದಾರೆ. ಆಡಳಿತದಲ್ಲಿ ಕಾರ್ಯಾಂಗ ಅತ್ಯಂತ ಮಹತ್ವದ ಅಂಗ. ಇದು ನಿಷ್ಕ್ರಿಯಗೊಂಡರೆ ಇಡೀ ಆಡಳಿತಯಂತ್ರವೇ ನಿಧಾನವಾಗುತ್ತದೆ. ಕಾರ್ಯಾಂಗ ಸರಿಯಾಗಬೇಕಾದರೆ ಮೇಲಿನಿಂದಲೇ ದುರಸ್ತಿ ಮಾಡುತ್ತಾ ಬರಬೇಕಾಗುತ್ತದೆ.
Advertisement
ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕ್ರಮ: ಕಾರ್ಯಂಗ ಸುಧಾರಣೆಯಾಗಬೇಕು
09:33 AM Aug 07, 2017 | |
Advertisement
Udayavani is now on Telegram. Click here to join our channel and stay updated with the latest news.