Advertisement

ವಿಜ್ಞಾನ ಜಗತ್ತಿನ ಆಕಸ್ಮಿಕ ಸಂಶೋಧನೆಗಳು

03:45 AM Apr 06, 2017 | Harsha Rao |

ನಿಸರ್ಗದಲ್ಲಿ ಹುದುಗಿರುವ ರಹಸ್ಯಗಳನ್ನು ಕಂಡು ಹಿಡಿಯುವುದೇ ವೈಜಾnನಿಕ ಸಂಶೋಧನೆಗಳ ಗುರಿ. ದೈನಂದಿನ ಚಟುವಟಿಕೆಗಳನ್ನೂ ಕಡೆಗಣಿಸಿ, ಪ್ರಯೋಗಾಲಯಗಳಲ್ಲೇ ಜೀವನವನ್ನು ಸವೆಸಿದ ವಿಜಾnನಿಗಳ ಸಂಖ್ಯೆ ಅದೆಷ್ಟೋ! ಕೆಲ ಮಹತ್ವದ ಸಂಶೋಧನೆಗಳು ಆಕಸ್ಮಿಕವಾಗಿ ಆದುವು ಎನ್ನುವ ವಿಷಯ ನಿಜಕ್ಕೂ ರೋಚಕ. 

Advertisement

1. ಗ್ರೀಕ್‌ ದೊರೆ ಹೀರಾನ್‌ಗೆ ಬಂಗಾರದ ಕಿರೀಟ ಒಂದರಲ್ಲಿ ಬೆಳ್ಳಿ ಮಿಶ್ರ ಮಾಡಿರಬಹುದಾದ ಸಂದೇಹ ಬಂತು. ಇದನ್ನು ಪರೀಕ್ಷಿಸುವಂತೆ ಆತ ಆರ್ಕಿಮಿಡೀಸ್‌ನಿಗೆ ಆದೇಶಿಸಿದ್ದ. ಕಿರೀಟವನ್ನು ಕರಗಿಸದೇ ಅಥವಾ ಅದನ್ನು ಜಖಂ ಗೊಳಿಸದೇ ಪರೀಕ್ಷಿಸುವುದು ಹೇಗೆ ಎಂದು ಗಾಢ ಯೋಚನೆಯಲ್ಲೇ ಮುಳುಗಿದ್ದ ಆರ್ಕಿಮಿಡೀಸ್‌, ಸ್ನಾನಗೃಹಕ್ಕೆ ಹೋಗಿ ನೀರು ತುಂಬಿದ ತೊಟ್ಟಿಯಲ್ಲಿಳಿದ. ನೀರು ಹೊರಕ್ಕೆ ಚೆ‌ಲ್ಲಿತು. ಆತನನ್ನು ನೀರು ಮೇಲಕ್ಕೆತ್ತಿದಂತೆ ಅನಿಸಿತು. ತಕ್ಷಣ ಆತ “ಯುರೇಕಾ’ (ನಾನು ಕಂಡುಹಿಡಿದೆ) ಎಂದು ಕೂಗುತ್ತಾ ಕಳಚಿಟ್ಟ ಬಟ್ಟೆಗಳ ಪರಿವೆಯೂ ಇಲ್ಲದೇ ಹೊರಗೆ ಧಾವಿಸಿ ಮನೆಗೆ ಓಡಿಬಂದ. ಈ ಘಟನೆಯೇ ಆತನಿಗೆ ತೇಲುವಿಕೆ ನಿಯಮ ಕಂಡುಹಿಡಿಯಲು ಕಾರಣವಾಯಿತು.

2. ಬ್ರಿಟನ್‌ ನ ಸುಪ್ರಸಿದ್ಧ ವಿಜಾnನಿ ಐಸಾಕ್‌ ನ್ಯೂಟನ್‌, ಶ್ರಾಂತಿಗಾಗಿ ಉದ್ಯಾನದಲ್ಲಿ ಕುಳಿತಿದ್ದ. ಇದ್ದಕ್ಕಿದ್ದಂತೆ ಸೇಬು ಮರದಿಂದ ಹಣ್ಣೊಂದು ಅವನ ಮುಂದೆ ನೆಲಕ್ಕೆ ಬಿತ್ತು. ಇದು ಆತನನ್ನು ಯೋಚನೆಗೆ ಗುರಿಪಡಿಸಿತು. ಮೇಲಕ್ಕೆ ಹೋದ ಯಾವುದೇ ವಸ್ತು ಕೆಳಗೆ ಬಂದು ನೆಲಕ್ಕೆ ಬೀಳಲು ಏನು ಕಾರಣ ಎಂಬ ಆತನ ಕುತೂಹಲ ಗುರುತ್ವಾಕರ್ಷಣೆಯ ನಿಯಮವನ್ನು ರೂಪಿಸಲು ಪ್ರೇರಕವಾಗಿ ಪರಿಣಮಿಸಿತು.

3. ಇಟಲಿಯ ವಿಜಾnನಿ ಗೆಲಿಲಿಯೋ ಹದಿನೇಳು ವರ್ಷ ವಯಸ್ಸಿನವನಾಗಿದ್ದಾಗ ಪ್ರಾರ್ಥನೆ ಸಲ್ಲಿಸಲು ಚರ್ಚ್‌ಗೆ ಹೋಗಿದ್ದ. ಅಲ್ಲಿ ತೂಗಿ ಬಿಟ್ಟಿದ್ದ ಮೇಣದ ಬತ್ತಿ ಅವನ ಗಮನ ಸೆಳೆಯಿತು. ಅದರ ತೂಗಾಡುವಿಕೆ ಒಂದೇ ಲಯದಲ್ಲಿದ್ದುದು ಅಚ್ಚರಿ ಎನಿಸಿತು. ಮನೆಗೆ ಬಂದ ನಂತರ ದಾರದ ತುದಿಗೆ ಭಾರದ ವಸ್ತುವನ್ನುತೂಗುಬಿಟ್ಟು ಅದರ ಆವರ್ತನೆಯ ಸಮಯವನ್ನು ತನ್ನ ನಾಡಿ ಬಡಿತದ ಸಹಾಯದಿಂದ ಪರೀಕ್ಷಿಸಿದ. ಆವರ್ತನ ಕಾಲಾವಧಿ, ದಾರದ ಉದ್ದವನ್ನು ಅವಲಂಬಿಸಿದೆ ಎನ್ನುವುದನ್ನು ಕಂಡುಹಿಡಿದ. ಇದೇ ಆವರ್ತನ ನಿಯಮ ನಿರೂಪಣೆಗೆ ಮೂಲವಾಯಿತು.

4. ಬ್ರಿಟಿಷ್‌ ವಿಜಾnನಿ ಜೋಸೆಫ್ ಪ್ರೀಸ್ಟೆ ಆಮ್ಲಜನಕವನ್ನು ಕಂಡುಹಿಡಿದಿದ್ದೂ ಒಂದು ಆಕಸ್ಮಿಕ ಘಟನೆಯೇ! ತನಗೆ ಯಾರೋ ಕೊಟ್ಟಿದ್ದ ಉಬ್ಬು ಮಸೂರವನ್ನು ಸೂರ್ಯನ ಬೆಳಕಿಗೆ ಒಡ್ಡಿ ತನಗೆ ಇಷ್ಟ ಬಂದ ವಸ್ತುವನ್ನು ಕಾಯಿಸುವುದು ಆತನ ಅಭ್ಯಾಸವಾಗಿತ್ತು. ಒಮ್ಮೆ ಒಡೆದು ಬಿದ್ದ ಉಷ್ಣತಾ ಮಾಪಕವೊಂದರಿಂದ ಹೊರಗೆ ಚೆಲ್ಲಿದ್ದ ಪಾದರಸವನ್ನು ಪ್ರಣಾಳಿಕೆಯಲ್ಲಿರಿಸಿ ಇದೇ ರೀತಿ ಕಾಯಿಸಿದ. ಅದರಿಂದ ಅನಿಲವೊಂದು ಉತ್ಪತ್ತಿಯಾಗುವುದು ಕಂಡುಬಂದಿತು. ಅದೇ ಆಮ್ಲಜನಕ ಎಂಬುದು ನಂತರ ಖಚಿತಪಟ್ಟಿತು.

Advertisement

5. ಸುಪ್ರಸಿದ್ಧ ಭಾರತೀಯ ವಿಜಾnನಿ ಸರ್‌ ಸಿ.ವಿ. ರಾಮನ್‌ 1921ರಲ್ಲಿ ಯುರೋಪ್‌ಗೆ ಸಮುದ್ರಯಾನ ಮಾಡುತ್ತಿದ್ದಾಗ ಮೆಡಿಟರೇನಿಯನ್‌ ಸಮುದ್ರದ ನೀರು ಮತ್ತು ಆಕಾಶಗಳೆರಡೂ ನೀಲಿಯಾಗಿರುವುದನ್ನು ಕಂಡು ಕುತೂಹಲಗೊಂಡರು. ಮೊದಲ ಬಾರಿಯ ಅವರ ಈ ದೀರ್ಘ‌ ಸಮುದ್ರಯಾನ ಇನ್ನಿಲ್ಲದ ಕುತೂಹಲ ಕೆರಳಿಸಿತ್ತು. ತಾಯ್ನಾಡಿಗೆ ಮರಳಿ ಬಂದ ನಂತರ ಅವರು ನೀರಿನ ಕಣಗಳು ಬೆಳಕಿನ ವಿಭಜನೆಗೆ ಕಾರಣವಾಗುತ್ತವೆ ಎನ್ನುವುದನ್ನು ಕಂಡುಹಿಡಿದರು. ಇದೇ “ರಾಮನ್‌ ಪರಿಣಾಮ'(ರಾಮನ್‌ ಎಫೆಕ್ಟ್) ಎಂದು ಪ್ರಖ್ಯಾತಿಯಾಗಿ ಅವರಿಗೆ ನೋಬೆಲ್‌ ಪ್ರಶಸ್ತಿಯನ್ನು ತಂದುಕೊಟ್ಟಿತು.

-ಡಿ.ವಿ.ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next