Advertisement

ಬಾಕಿ ಸ್ಯಾಂಪಲ್‌ ಟೆಸ್ಟ್‌ ಪ್ರಕ್ರಿಯೆ ತೀವ್ರಗೊಳಿಸಿ

06:12 AM Jun 06, 2020 | Team Udayavani |

ಬೀದರ: ದಿನಕ್ಕೆ 500ರಷ್ಟು ನಡೆಯುವಂತೆ ಸ್ಯಾಂಪಲ್‌ ಟೆಸ್ಟ್‌ ಪ್ರಕ್ರಿಯೆ ತೀವ್ರಗೊಳಿಸಿ ಮುಂಬರುವ ಮೂರು ದಿನಗಳಲ್ಲಿ ಬಾಕಿ ಇರುವುದನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಡಿಎಚ್‌ಒ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿಗಳಿಗೆ ಗಡುವು ವಿಧಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ಕೋವಿಡ್‌-19 ನಿರ್ವಹಣೆಗಾಗಿ ಎನ್‌ಎಚ್‌ಎಂ ಮೂಲಕ ಒದಗಿಸಿದ ಹಣದ ಖರ್ಚು ವೆಚ್ಚದ ವಿವರವನ್ನು ವೈದ್ಯಾಧಿಕಾರಿಗಳು ಸರಿಯಾಗಿ ಒದಗಿಸಬೇಕು. ಯಾವುದೇ ಕಪ್ಪುಚುಕ್ಕೆಯಿಲ್ಲದೇ ಹಾಗೆ ಕೆಲಸ ನಿರ್ವಹಿಸಿದಾಗಲೇ ನಾವು ಹಾಕುವ ಶ್ರಮಕ್ಕೆ ಬೆಲೆ ಬರುತ್ತದೆ. ಜೈವಿಕ ತ್ಯಾಜ್ಯ ನಿರ್ಹಹಣೆ ಕೂಡ ನಿಯಮಾನುಸಾರವೇ ನಡೆಯಬೇಕು. ಈ ವಿಷಯದಲ್ಲಿ ಯಾರಾದರು ನಿರ್ಲಕ್ಷ್ಯ ವಹಿಸಿದಲ್ಲಿ ಮುಲಾಜಿಲ್ಲದೇ ಅಮಾನತು ಮಾಡಿ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಜೂನ್‌ 5ರ ವರೆಗೆ 28,120 ಸ್ಯಾಂಪಲ್‌ ಟೆಸ್ಟ್‌ ಮಾಡಲಾಗಿದೆ. ಸೋಂಕಿತರ ಸಂಖ್ಯೆ 214 ಇದ್ದು, ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 97 ಇದೆ. ಐವರು ಮೃತಪಟ್ಟಿದ್ದಾರೆ. ಪ್ರತಿ ದಿನ ಎಲ್ಲ ತಾಲೂಕುಗಳಿಂದ ತಲಾ 50 ರಷ್ಟು ಸ್ಯಾಂಪಲ್‌ ಟೆಸ್ಟ್‌ ಮಾಡಲಾಗುತ್ತಿದೆ ಎಂದು ಜಿಲ್ಲಾ ಕಣ್ಗಾವಲು ಘಟಕದ ಅಧಿಕಾರಿ ಡಾ|ಕೃಷ್ಣಾ ರೆಡ್ಡಿ ಹೇಳಿದರು.

ಇದುವರೆಗಿನ ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಶೇ. 62ರಷ್ಟು, ಪ್ರçಮರಿ ಸಂಪರ್ಕದಿಂದ ಶೇ.33ರಷ್ಟು, ಸೆಕೆಂಡರಿ ಸಂಪರ್ಕದಿಂದ ಇಬ್ಬರಿಗೆ, ದೆಹಲಿಯಿಂದ ಬಂದವರು ಮತ್ತು ಇನ್ನಿತರ ಸೇರಿ 214 ಜನರಲ್ಲಿ ಸೋಂಕು ಪತ್ತೆಯಾಗಿರುವುದನ್ನು ಗುರುತಿಸಲಾಗಿದೆ. ಅತೀ ಹೆಚ್ಚು ಕೋವಿಡ್‌-19 ಪ್ರಕರಣಗಳು ಬೀದರ ಹಾಗೂ ಬಸವಕಲ್ಯಾಣ ತಾಲೂಕಿನಿಂದ ವರದಿಯಾಗಿವೆ. 31 ವಯಸ್ಸಿನ ಒಳಗಿನವರಿಗೆ ಶೇ.50ರಷ್ಟು ಮತ್ತು ಮೇಲಿನವರಿಗೆ ಶೇ.50ರಷ್ಟು ಸೋಂಕು ಹರಡಿದೆ ಎಂದು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಕೋವಿಡ್‌-19ಗಾಗಿ ಸರ್ಕಾರ ಒದಗಿಸಿದ ಎನ್‌ಡಿಆರ್‌ಎಫ್‌ ಹಣ ಬಳಕೆ ಬಗ್ಗೆ ಗ್ರಾಮ ಲೆಕ್ಕಿಗರು, ಪಿಡಿಒ ದೃಢೀಕರಣ ಮಾಡಿಸಿ ಎಲ್ಲ ತಹಶೀಲ್ದಾರರಿಂದ ಪ್ರತಿವಾರ ಮಾಹಿತಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರಿಗೆ ಸೂಚಿಸಿದರು. ಜಿಲ್ಲೆಯಲ್ಲಿನ ಸೋಂಕಿತ ಪ್ರಕರಣಗಳು, ಚಿಕಿತ್ಸೆ, ಸ್ಯಾಂಪಲ್‌ ಟೆಸ್ಟ್‌, ವಿಶೇಷ ವಾರ್ಡುಗಳು, ಬಿಡುಗಡೆಯಾದ ಅನುದಾನ ಬಳಕೆ ಸೇರಿದಂತೆ ಹಲವಾರು ಮಾಹಿತಿ ಪಡೆದರು.

Advertisement

ಜಿಲ್ಲೆಯಲ್ಲಿ 53 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 8 ಸಮುದಾಯ ಆರೋಗ್ಯ ಕೇಂದ್ರಗಳು, ನಾಲ್ಕು ತಾಲೂಕು ಆಸ್ಪತ್ರೆಗಳು, ಬೀದರನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿವೆ. 34 ಅಂಬ್ಯುಲೆನ್ಸ್‌, 108 ವಾಹನಗಳು 19 ಇವೆ. ಭಾಲ್ಕಿ ಮತ್ತು ಬಸವಕಲ್ಯಾಣದಲ್ಲಿ ತಲಾ 50, ಔರಾದ ಮತ್ತು ಮನ್ನಾಏಖೆಳ್ಳಿನಲ್ಲಿ ತಲಾ 20, ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 5 ಕೊವಿಡ್‌ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಹುಮನಾಬಾದ ತಾಲೂಕು ಆಸ್ಪತ್ರೆಯಲ್ಲೂ 50 ಕೋವಿಡ್‌ ಬೆಡ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ. 19 ಐಸಿಯು ಬೆಡ್ಸ್‌, 7 ವೆಂಟಿಲೇಟರ್ಸ್‌, 51 ವಿಶೇಷ ವೈದ್ಯರಿದ್ದಾರೆ. ಪಿಎಚ್‌ ಸಿ, ಸಿಎಚ್‌

ಸಿ, ತಾಲೂಕಾಸ್ಪತ್ರೆ ಸೇರಿದಂತೆ ಇದುವರೆಗೆ 279 ಕೋವಿಡ್‌-19 ವಿಶೇಷ ಬೆಡ್‌ ಗಳನ್ನು ಹಾಕಲಾಗಿದೆ. ಈ ಪೈಕಿ 95 ಬೆಡ್‌ ಗಳಿಗೆ ಆಕ್ಸಿಜನ್‌ ಸಂಪರ್ಕವಿದೆ. 6 ಜನ ಸ್ಪೆಸಿಯಾಲಿಸ್ಟ್‌, 55 ಜನ ಎಂಬಿಬಿಎಸ್‌ ರೆಸಿಡೆಂಟ್ಸ್‌, 20 ಜನ ಟೆಕ್ನಿಷಿಯನ್‌, 65 ಹೆಲ್ಪರ್ಸ್‌, 79 ಸ್ಟಾಪ್‌ ನರ್ಸ ಕೆಲಸ ಮಾಡುತ್ತಿದ್ದಾರೆ ಎಂದು ಡಿಎಚ್‌ಒ ಡಾ|ವಿ.ಜಿ. ರೆಡ್ಡಿ ಸಭೆಗೆ ಮಾಹಿತಿ ನೀಡಿದರು.

ಬ್ರಿಮ್ಸ್‌ನಲ್ಲಿನ ಕೋವಿಡ್‌ -19 ಹಾಸ್ಪಿಟಲ್‌ ನಲ್ಲಿ ಪಿಜಿಸಿಯನ್‌ 3, ಅನೇಸ್ತàಟಿಸ್ಟ್‌ 2, ಚೆಸ್ಟ್‌ ಪಿಜಿಸಿಯನ್‌ 2, ಪಿಜಿಸಿಯನ್‌ 3, ಡಿಇಒ 6, ಡ್ನೂಟಿ ಡಾಕ್ಟರ್‌ 8, ಕೋ ಅರ್ಡಿನೇಟರ್‌-2, ನರ್ಸಿಂಗ್‌ ಸ್ಟಾಪ್‌ 63, ಸೆಕ್ಯುರಿಟಿ ಗಾರ್ಡ್‌ 24, ಗ್ರೂಪ್‌ ಡಿ 21 ಇದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.

ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌. ನಾಗೇಶ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಎಸಿ ಅಕ್ಷಯಶ್ರೀಧರ, ಬ್ರಿಮ್ಸ್‌ ನಿರ್ದೇಶಕ ಡಾ| ಶಿವಕುಮಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ರತಿಕಾಂತ ಸ್ವಾಮಿ, ಡಾ| ಇಂದುಮತಿ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next