Advertisement
ಆಗ ವಿವಿಧ ಮತಧರ್ಮಗುರುಗಳ ಜತೆ ಖಾಸಗಿಯಾಗಿ ಹೀಗೆಂದು ಪ್ರಶ್ನಿಸಿದ್ದೆವು. “ಜಗತ್ತಿನಲ್ಲಿ ಏಕೆ ಇಷ್ಟು ವ್ಯತ್ಯಾಸ ಬಂತು? ಒಬ್ಬ ಬಡವ, ಒಬ್ಬ ಶ್ರೀಮಂತ, ಒಬ್ಬ ರೋಗಿ, ಒಬ್ಬ ನಿರೋಗಿ, ಒಬ್ಬ ಕಳ್ಳ, ಇನ್ನೊಬ್ಬ ಸುಭಗ ಹೀಗೆ ಒಬ್ಬೊಬ್ಬ ಒಂದೊಂದು ರೀತಿ ಇದು ಏಕೆ ಬಂತು?’ ಎಂದು ಕೇಳಿದಾಗ ಯಾರಿಂದಲೂ ಸ್ಪಷ್ಟ ಉತ್ತರವಿರಲಿಲ್ಲ. “ಮುಂದಿನದ್ದನ್ನು ಯಾರೂ ಹೇಳುವುದು ಬೇಡವಪ್ಪ, ಈಗಿನದ್ದಾದರೂ ಹೀಗೇಕೆ’ ಎಂದರೆ ಉತ್ತರವಿಲ್ಲ. “ನಾವು ಅಷ್ಟು ಆಳವಾಗಿ ಚಿಂತನೆ ನಡೆಸಿಲ್ಲ’ ಎಂದರು. ಇದಕ್ಕೆ ಕರ್ಮ ಸಿದ್ಧಾಂತವನ್ನು ಒಪ್ಪದೆ ಹೋದರೆ ಬೇರೆ ದಾರಿಯೇ ಇಲ್ಲ. ಮನುಷ್ಯನಿಗೆ ಸಂಶಯಗಳಿರಲೇಬೇಕು, ಪ್ರಶ್ನೆ ಕೇಳಿದಾಗ ವಿಚಲಿತರಾಗಬಾರದು. ತಣ್ತೀ ನಿಶ್ಚಯವಾದ ಬಳಿಕವೇ ಧ್ಯಾನ ನಡೆಸಬೇಕು. “ಧ್ಯಾನಂ ನಿಶ್ಚಿತ ತಣ್ತೀಸ್ಯ’.
Advertisement
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
01:00 AM Jan 08, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.