ಮುಂಬಯಿ: ಮುಂಬಯಿ ಯಲ್ಲಿ ಕಳೆದ 5 ವರ್ಷಗಳಲ್ಲಿ ಗರ್ಭಿಣಿ ಯರ ಗರ್ಭಪಾತದ ಪ್ರಕರಣಗಳು ಶೇ.20ರಷ್ಟು ಹೆಚ್ಚಾಗಿವೆ.
ತಜ್ಞರ ಪ್ರಕಾರ, ಮಹಿಳೆಯರು ತೆಗೆದುಕೊಳ್ಳುವ ಗರ್ಭನಿರೋಧಕ ಔಷಧಗಳು ಕೆಲಸ ಮಾಡದಿರುವುದೇ ಗರ್ಭಪಾತದ ದರದಲ್ಲಿ ವೃದ್ಧಿಗೆ ಅತಿ ಮುಖ್ಯ ಕಾರಣವಾಗಿದೆ.
ಗರ್ಭಿಣಿಯರ ಜೀವಕ್ಕೆ ಅಪಾಯ ಮತ್ತು ಮಹಿಳೆಯು ಗಾಯಗೊಳ್ಳುವುದು ಗರ್ಭಪಾತದ ಇತರ ಪ್ರಮುಖ ಕಾರಣಗಳಾಗಿವೆ.
ಮಹಾನಗರ ಪಾಲಿಕೆ ಸಂಚಾಲಿತ ಆಸ್ಪತ್ರೆಗಳಲ್ಲಿ ಗರ್ಭಪಾತದ ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ ಶೇ. 20ರಷ್ಟು ವೃದ್ಧಿಯಾಗಿದೆ. ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ 25 ರಿಂದ 29 ವರ್ಷ ವಯೋವರ್ಗದ ಮಹಿಳೆಯರ ಗರ್ಭಪಾತದ ಪ್ರಮಾಣವು ಅಧಿಕವಾಗಿದೆ. 2018-19ರಲ್ಲಿ ಒಟ್ಟು 36,315 ಮಹಿಳೆಯರು ಗರ್ಭಪಾತ ಮಾಡಿಸಿಕೊಂಡಿದ್ದು, ಈ ಪೈಕಿ 12,098 ಮಹಿಳೆಯರು 25ರಿಂದ 29 ವರ್ಷ ವಯೋಮಿತಿಯವರಾಗಿದ್ದಾರೆ. ಅದೇ, 2014-15ರಲ್ಲಿ 30,742ಮಹಿಳೆಯರು ಗರ್ಭಪಾತ ಮಾಡಿದ್ದರು. ಈ ಪೈಕಿ 9,847 ಮಹಿಳೆಯರು 25-29 ವರ್ಷ ವಯಸ್ಸಿನವರಾಗಿದ್ದರು.
ಗರ್ಭಪಾತವು ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಶೇ.8ರಷ್ಟು ತಾಯಂದಿರ ಮರಣವು ಅಸುರಕ್ಷಿತ ಗರ್ಭಪಾತದ ಕಾರಣದಿಂದಾಗಿ ಸಂಭವಿಸುತ್ತದೆ. ಹಾಗಾಗಿ, ಈ ವಿಷಯದಲ್ಲಿ ಮಹಿಳೆಯರು ಹೆಚ್ಚು ಎಚ್ಚರಿಕೆ ವಹಿಸಬೇಕಾದ ಆವಶ್ಯಕತೆಯಿದೆ ಎಂದು ತಜ್ಞರು ಹೇಳುತ್ತಾರೆ.
ಬಾಲಕಿಯರ ಗರ್ಭಪಾತ ಪ್ರಕರಣಗಳಲ್ಲಿ ಇಳಿಕೆ ಒಂದೆಡೆಯಲ್ಲಿ ಮಹಿಳೆಯರ ಗರ್ಭಪಾತದ ಪ್ರಕರಣಗಳು ಕಳೆದ 5 ವರ್ಷಗಳಲ್ಲಿ ಶೇ.20ರಷ್ಟು ವೃದ್ಧಿಯನ್ನು ಕಂಡರೆ, ಇನ್ನೊಂದೆಡೆಯಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಿಂದ ಮಾಡಲಾಗುವ ಗರ್ಭಪಾತದ ಪ್ರಮಾಣವು ಶೇ. 95ರಷ್ಟು ಇಳಿಕೆ ದಾಖಲಾಗಿದೆ.
2014-15ರಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ 185 ಹುಡುಗಿಯರು ಗರ್ಭಪಾತ ಮಾಡಿಸಿಕೊಂಡಿದ್ದರು. ಅದೇ, 2018-19ರಲ್ಲಿ ಕೇವಲ 11 ಹುಡುಗಿಯರು ಗರ್ಭಪಾತ ಮಾಡಿ¨ªಾರೆ.