ಹೊಸದಿಲ್ಲಿ : ಇಡೀ ದೇಶವೇ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಭಾರತಕ್ಕೆ ವಾಪಾಸಾಗುವುದನ್ನು ಕಾಯುತ್ತಿದ್ದರೆ, ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ವಿಳಂಬ ತೋರಿ ಪಾಕ್‌ನರಿ ಬುದ್ದಿ ತೋರಿಸಿದೆ.
ಸಂಜೆಯೇ ಹಸ್ತಾಂತರಿಸಬೇಕಾದ ಅಭಿನಂದನ್ ಅವರನ್ನು ರಾತ್ರಿ 9 ಗಂಟೆಯ ನಂತರ ಅಟಾರಿ ಗಡಿ ಮೂಲಕ ಹಸ್ತಾಂತರಿಸಲಾಗಿದೆ. 4 ಗಂಟೆ ತಡವಾಗಿ ಹಸ್ತಾಂತರಿಸಲಾಗಿದೆ.
ಭಾರತದ ಕಡೆಯಿಂದ ಎಲ್ಲಾ ರೀತಿಯಲ್ಲಿ ಕಾಗದ ಪತ್ರಗಳ ಕೆಲಸ ಸೇರಿ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾದರೂ, ಲಾಹೋರ್‌ನಲ್ಲಿ ಅಭಿನಂದನ್‌ರನ್ನು ತಡೆದು ಕೆಲ ಕಾಗದ ಪತ್ರಗಳ ಕೆಲಸಗಳನ್ನು ಪಾಕ್ ತಡೆ ಮಾಡಿದೆ ಎಂದು ತಿಳಿದು ಬಂದಿದೆ.ಪಾಕ್ ಸರ್ಕಾರಕ್ಕೆ ಐಎಸ್‌ಐ ಒತ್ತಡ ಹಾಕಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಕಸ್ಟಮ್ಸ್ ಮತ್ತು ವಲಸೆ ವಿಭಾಗದ ಕೆಲ ಪ್ರಕ್ರಿಯೆಗಳಲ್ಲಿ ಪಾಕ್ ಉದ್ದೇಶ ಪೂರ್ವಕವಾಗಿ ವಿಳಂಬ ತೋರಿದೆ ಎಂದು ವರದಿಯಾಗಿದೆ.
ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಕರೆತಂದಿದ್ದು, ಭಾರತೀಯ ಸೇನಾ ಅಧಿಕಾರಿಗಳಿಗೆ ಹಸ್ತಾಂತರಿಸಲಿಲಾಗಿದೆ.
ಅಭಿನಂದನ್ ಪೋಷಕರು ಕೂಡಾ ಗಡಿಯಲ್ಲಿ ಹಾಜರಿದ್ದು ಮಗನ ಬರುವಿಕೆಗಾಗಿ ಕಾಯುತ್ತಿದ್ದರು.
ಗಡಿಯಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು, ಮೂರು ಸೇನಾ ಮುಖ್ಯಸ್ಥರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿತ್ತು.
ಪಾಕ್ ನರಿ ಬುದ್ದಿಗೆ ಆಕ್ರೋಶ
ಅಭಿನಂದನ್ ಅವರನ್ನು ಕಾಯುತ್ತಿದ್ದ ಕೋಟ್ಯಂತರ ಜನ ಭಾರತೀಯರು ಪಾಕ್ ನರಿ ಬುದ್ದಿ ವಿರುದ್ಧ ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.