Advertisement

Abhimanyu Kashinath; ಸೂರಿ ಲವ್‌ ಗೆ ಉಪ್ಪಿ ಮೆಚ್ಚುಗೆ

05:53 PM Nov 02, 2024 | Team Udayavani |

ಅಭಿಮನ್ಯು ಕಾಶೀನಾಥ್‌ ನಟನೆಯ ಮತ್ತೂಂದು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಸೂರಿ ಲವ್ಸ್‌ ಸಂಧ್ಯಾ’. ಇತ್ತೀಚೆಗೆ ಈ ಚಿತ್ರದ ಪ್ರೀಮಿಯರ್‌ ಶೋ ದುಬೈನಲ್ಲಿ ನಡೆದಿದೆ. ನಟ ಉಪೇಂದ್ರ, ವಿಧಾನ ಪರಿಷತ್‌ ಸದಸ್ಯ ಶರವಣ ಸೇರಿದಂತೆ ಅನೇಕರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, “ನಿರ್ಮಾಪಕರನ್ನು ನೋಡ್ತಾ ಇದ್ದರೆ ದ್ವಾರಕೀಶ್‌ ನೆನಪಿಗೆ ಬರುತ್ತಾರೆ. ಅವರು 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅವರಂತೆ ನೀವು ಆಗಿ. ಯೋಚನೆ ಮಾಡಿ ಟೈಟಲ್‌ ಇಟ್ಟಿದ್ದೀರಿ. ಸಿನಿಮಾವನ್ನು ನೇರವಾಗಿ ಹೇಳದೇ ಸುತ್ತಿಬಳಸಿ ನೋಡುಗರಿಗೆ ಬೋರ್‌ ಆಗದಂತೆ ತೋರಿಸಿದ್ದಾರೆ. ಕೊನೆಯ ಹದಿನೈದು ನಿಮಿಷ ನಿರ್ದೇಶಕರ ಶ್ರಮ, ಅಭಿನಯ, ಮೇಕಿಂಗ್‌, ನಟನೆ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಾಶೀನಾಥ್‌ ನನ್ನ ಗುರು. ಜೀವನ ಶುರುವಾಗಿದ್ದು ಅವರ ಮನೆಯಿಂದ. ಗುರುಗಳ ವಿಭಿನ್ನ ಪಾತ್ರಗಳು ಬೇರೆ ಭಾಷೆಗೆ ತಲುಪುತ್ತಿದ್ದವು. ಅವರ ಮಗ ಅಭಿಮನ್ಯು ಉತ್ತಮ ನಟ ಅಂತ ತಿಳಿದಿರಲಿಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ಅದ್ಭುತ ನಟನೆ ಮಾಡಿದ್ದಾರೆ’ ಎಂದು ಶುಭ ಹಾರೈಸಿದರು.

ಕೆ.ಟಿ.ಮಂಜುನಾಥ್‌ ನಿರ್ಮಾಣ ಮಾಡಿರುವ, “ಸೂರಿ ಲವ್ಸ್‌ ಸಂಧ್ಯಾ ‘ ಚಿತ್ರಕ್ಕೆ ಯಾದವ್‌ ರಾಜ್‌ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಬರೆದು ನಿರ್ದೇಶನ, ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next