Advertisement

ಟ್ವೆಂಟಿ20ಯಲ್ಲಿ ಗರಿಷ್ಠ ರನ್‌: ಫಿಂಚ್‌ ದಾಖಲೆ ಇನ್ನಷ್ಟು ಎತ್ತರಕ್ಕೆ

06:00 AM Jul 04, 2018 | Team Udayavani |

ಹರಾರೆ: ಪ್ರವಾಸಿ ಜಿಂಬಾಬ್ವೆ ವಿರುದ್ಧ ನಡೆದ ಟ್ವೆಂಟಿ20 ತ್ರಿಕೋನ ಸರಣಿಯ ಪಂದ್ಯ ದಲ್ಲಿ ಆಸ್ಟ್ರೇಲಿಯದ ಆರಂಭಿಕ ಆಟಗಾರ ಆರನ್‌ ಫಿಂಚ್‌ ಕೇವಲ 76 ಎಸೆತಗಳಲ್ಲಿ 172 ರನ್‌ ಸಿಡಿಸಿ ತನ್ನದೇ ಹೆಸರಲ್ಲಿದ್ದ ದಾಖಲೆಯನ್ನು ಉತ್ತಮಪಡಿಸಿಕೊಂಡರು. 

Advertisement

16 ಬೌಂಡರಿ ಮತ್ತು 10 ಸಿಕ್ಸರ್‌ ಸಿಡಿಸಿದ ಫಿಂಚ್‌ 172 ರನ್‌ ಗಳಿಸಿದ ಔಟಾದರು. 2013ರಲ್ಲಿ ಇಂಗ್ಲೆಂಡ್‌ ವಿರುದ್ಧ 156 ರನ್‌ ಗಳಿಸಿದ್ದು ಅವರ ಈ ಹಿಂದಿನ ಶ್ರೇಷ್ಠ ಮೊತ್ತವಾಗಿತ್ತು.  ಚ್‌ ಅವರು ಮೊದಲ ವಿಕೆಟಿಗೆ ಡಿ’ಆರ್ಕಿ ಶಾರ್ಟ್‌ ಜತೆ ದಾಖಲೆ 223 ರನ್ನುಗಳ ಜತೆಯಾಟ ನಡೆಸಿದರು. 2016ರಲ್ಲಿ ನ್ಯೂಜಿಲ್ಯಾಂಡಿನ ಮಾರ್ಟಿನ್‌ ಗಫ್ಟಿಲ್‌ ಮತ್ತು ಕೇನ್‌ ವಿಲಿಯಮ್ಸನ್‌ ಪಾಕಿಸ್ಥಾನ ವಿರುದ್ಧ ಮೊದಲ ವಿಕೆಟಿಗೆ 171 ರನ್‌ ಜತೆಯಾಟದಲ್ಲಿ ಪಾಲ್ಗೊಂಡಿದ್ದು ಈ ಹಿಂದಿನ ಗರಿಷ್ಠ ಜತೆಯಾಟವಾಗಿತ್ತು. 

ಫಿಂಚ್‌ ಮತ್ತು ಶಾರ್ಟ್‌ ಅವರ ಭರ್ಜರಿ ಆಟದಿಂದಾಗಿ ಆಸ್ಟ್ರೇಲಿಯವು ಈ ಪಂದ್ಯವನ್ನು 100 ರನ್ನುಗಳಿಂದ ಜಯಿಸಿತ್ತು,. ಆಸ್ಟ್ರೇಲಿಯ ಕೇವಲ 2 ವಿಕೆಟಿಗೆ 229 ರನ್ನುಗಳ ಬೃಹತ್‌ ಮೊತ್ತ ಪೇರಿಸಿದರೆ ಜಿಂಬಾಬ್ವೆ 20 ಓವರ್‌ಗಳಲ್ಲಿ  9 ವಿಕೆಟಿಗೆ 129 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 2 ವಿಕೆಟಿಗೆ 229 (ಆರನ್‌ ಫಿಂಚ್‌ 172, ಶಾರ್ಟ್‌ 46); ಜಿಂಬಾಬ್ವೆ 20 ಓವರ್‌ಗಳಲ್ಲಿ 9 ವಿಕೆಟಿಗೆ 129 (ಸೊಲೋಮನ್‌ ಮಿರ್‌ 28, ಪೀಟರ್‌ ಮೂರ್‌ 19,ಆ್ಯಂಡ್ರೂé ಟೈ 12ಕ್ಕೆ 3, ಅಗರ್‌ 16ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next