Advertisement

AAP; ನನ್ನ ಅಪ್ಪ-ಅಮ್ಮನಿಗೇಕೆ ಹಿಂಸೆ ನೀಡುತ್ತಿರುವಿರಿ?: ಪ್ರಧಾನಿಗೆ ಕೇಜ್ರಿ ಪ್ರಶ್ನೆ

12:47 AM May 24, 2024 | Team Udayavani |

ಹೊಸದಿಲ್ಲಿ: “ಮೋದಿಯವರೇ, ನನ್ನ ಅಪ್ಪ-ಅಮ್ಮನನ್ನು ಟಾರ್ಗೆಟ್‌ ಮಾಡುವ ಮೂಲಕ ನೀವು ಎಲ್ಲ ಮಿತಿಗಳನ್ನೂ ಮೀರಿದ್ದೀರಿ. ನಿಮ್ಮ ಜಗಳವೇನಿದ್ದರೂ ನನ್ನ ಜೊತೆ. ಇದಕ್ಕೆ ಅನಾರೋಗ್ಯಪೀಡಿತ, ವಯೋವೃದ್ಧರಾದ ನನ್ನ ಹೆತ್ತವರನ್ನೇಕೆ ಎಳೆದುತರುತ್ತೀರಿ?’ಇದು ಪ್ರಧಾನಿ ಮೋದಿಯವರಿಗೆ ದಿಲ್ಲಿ ಸಿಎಂ ಕೇಜ್ರಿವಾಲ್‌ ಕೇಳಿರುವ ಪ್ರಶ್ನೆ.

Advertisement

ವರ್ಚುವಲ್‌ ಸುದ್ದಿಗೋಷ್ಠಿ ನಡೆಸಿ ಮೋದಿ ವಿರುದ್ಧ ಕಿಡಿಕಾರಿದ ಕೇಜ್ರಿ, ಹೆತ್ತವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ. ಸಂಸದೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಕೇಜ್ರಿವಾಲ್‌ರ ತಂದೆ, ತಾಯಿಯಿಂದ ದಿಲ್ಲಿ ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಕೇಜ್ರಿ ಈ ಮಾತುಗಳನ್ನಾಡಿದ್ದಾರೆ. ಆದರೆ ಹೆತ್ತವರ ಪ್ರಶ್ನಿಸುವ ಪ್ರಕ್ರಿಯೆಯನ್ನು ಪೊಲೀಸರು ಮುಂದೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next