ಭೋಪಾಲ್ : ಮುಂಬರುವ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ, ಇತರೆಲ್ಲ ಪಕ್ಷಗಳಿಗಿಂತ ಮೊದಲಾಗಿ, 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಮಧ್ಯ ಪ್ರದೇಶ ಹಲವು ರಾಜ್ಯಗಳ ವಿಧಾಸಭಾ ಚುನಾವಣೆಗಳು ವರ್ಷಾಂತ್ಯದೊಳಗೆ ನಡೆಯಲಿದ್ದು ಚುನಾವಣಾ ಆಯೋಗ ಈ ತನಕ ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿಲ್ಲ.
ಆಪ್ ನಾಯಕ ಮತ್ತು ದಿಲ್ಲಿ ಸಚಿವರಾಗಿರುವ ಗೋಪಾಲ್ ರಾಯ್ ಅವರು ಇಂದಿಲ್ಲಿ ಮಧ್ಯ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 20 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು.
ಪಟ್ಟಿಯಲ್ಲಿರುವ ಆಪ್ ಅಭ್ಯರ್ಥಿಗಳು ಇಂತಿದ್ದಾರೆ : ಅಮಿತ್ ಭಟ್ನಾನಗರ್, ಜೀತೇಂದ್ರ ಚೌರಾಶಿಯಾ, ಮಹೇಶ್ ಪ್ರಸಾದ್ ಚೌಧರಿ, ಕೃಷ್ಣಪಾಲ್ ಸಿಂಗ್ ಬಾಘೇಲ್, ನವೀನ್ ಅಗ್ರವಾಲ್, ಪರಿಣಿತಾ ರಾಜೆ ಅಲಿಯಾಸ್ ಬೇಟಿ ರಾಜಾ, ಅಶೋಕ್ ಶಾ, ಗೋಪಾಲ್ ಸಿಂಗ್ ಠಾಕೂರ್, ಕುಲದೀಪ್ ಬಿ., ಝುಬೇರ್ ಖಾನ್, ರಾಮ ವಿಶಾಲ್ ವಿಶ್ವಕರ್ಮ, ಚಂದ್ರಮೋಹನ್ ಗುರು, ಅವಧೇಶ್ ಸಿಂಗ್, ಅನಿಮೇಶ್ ಪಾಂಡೆ, ಶೈಲೇಶ್ ಚೌಬೆ, ಹೀರಾಲಾಲ್ ಪಂಚೆ, ಮುಕೇಶ್ ಅಖಂಡೆ, ಜಗದೀಶ್ ಸಿಂಗ್, ರಾಮದಿನ್ ಅಹಿರವಾರ್.
ಜುಲೈ 6ರಂದು ಗ್ವಾಲಿಯರ್‌ನಲ್ಲಿ ಆಮ್ ಆದ್ಮಿ ಪಕ್ಷ ಎರಡನೇ ಪ್ರಕಟಿಸುವ ನಿರೀಕ್ಷೆ ಇದೆ. ಜುಲೈ 15ರಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಇಂದೋರ್‌ನಲ್ಲಿ ಸಾರ್ವಜನಿಕ ಭಾಷಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಎಂಪಿ ಆಪ್ ಅಧ್ಯಕ್ಷ ಆಲೋಕ್ ಅಗ್ರವಾಲ್ ತಿಳಿಸಿದರು. ಮಧ್ಯಪ್ರದೇಶದ ಎಲ್ಲ 230 ಸ್ಥಾನಗಳಲ್ಲಿ ಆಪ್ ಸ್ಪರ್ಧಿಸಲಿದೆ ಎಂದವರು ಹೇಳಿದರು.