Advertisement

“ಮಹಿಳೆ ಪುರುಷನ ಜತೆ ಸೇರಿ ಸಮಾಜ ಕಟ್ಟಲಿ’

02:00 PM Mar 19, 2017 | Team Udayavani |

ಬೆಳ್ತಂಗಡಿ : ಹೆಣ್ಣು ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಬಲ್ಲ ಜಾಣ್ಮೆ ಉಳ್ಳವಳು. ಆಕೆ ಪುರುಷನ ಕೈಕೆಳಗೆ ಬದುಕುವುದನ್ನು ಬಿಟ್ಟು ಪುರುಷನ ಜತೆ ಜತೆಯಾಗಿ ಸಮಾಜವನ್ನು ಕಟ್ಟುವ ಕಾರ್ಯವನ್ನು ಮಾಡಬೇಕು. ಮಹಿಳೆ ತನ್ನ ನಿಜವಾದ ಸಾಮರ್ಥ್ಯವನ್ನು ತೋರಿಸಬೇಕಾಗಿದೆ ಎಂದು ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ ಹೇಳಿದರು.

Advertisement

ಅವರು ಜೇಸಿಐ ಬೆಳ್ತಂಗಡಿ ಮಂಜುಶ್ರೀನ ಜೇಸಿರೇಟ್‌ ವಿಭಾಗದಿಂದ ನಡೆದ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ಸಮ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಲಯಾಧಿಕಾರಿಗಳಾದ ಚಿದಾನಂದ ಇಡ್ಯಾ ಮತ್ತು ವಸಂತ ಶೆಟ್ಟಿ  ಶ್ರದ್ಧಾ, ಜೇಸಿರೇಟ್‌ ಅಧ್ಯಕ್ಷೆ ಅಮೃತಾ, ಜೇಜೆಸಿ ಅಧ್ಯಕ್ಷ ಮನೋಜ್‌ ಎಸ್‌. ಆರ್‌., ಜೇಸಿರೇಟ್‌ ಪೂರ್ವಾಧ್ಯಕ್ಷೆ ಉಮಾ ಆರ್‌. ರಾವ್‌  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಅಂಗನವಾಡಿ ಕಾರ್ಯಕರ್ತೆ ಜಾನಕಿ ವೇಣೂರು ಅವರಿಗೆ “ಜೇಸಿ ಸಮಾಜ ಸೇವಾ ರತ್ನ’ ಪ್ರಶಸ್ತಿ, ವಿದ್ಯಾಭ್ಯಾಸದಲ್ಲಿನ ಶ್ರೇಷ್ಠ ಸಾಧನೆಗೆ ಬಳಂಜದ ಲಲಿತಾ ಟೀಚರ್‌ ಅವರಿಗೆ “ಜೇಸಿ ವಿದ್ಯಾ ರತ್ನ’ ಪ್ರಶಸ್ತಿ, ವ್ಯವಹಾರ ಕ್ಷೇತ್ರದಲ್ಲಿನ ಸಾಧನೆಗೆ ಉಜಿರೆ ಪ್ರಕಾಶ್‌ ಇಲೆಕ್ಟ್ರಾನಿಕ್ಸ್‌ನ ಆಡಳಿತ ನಿರ್ದೇಶಕಿ ಸುಮನಾ ಪಿ. ಶೆಟ್ಟಿ ಅವರಿಗೆ “ಜೇಸಿ ಉದ್ಯಮ ರತ್ನ’ ಪ್ರಶಸ್ತಿ, ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ನಾಲ್ಕೂರಿನ ಬೇಬಿ ಶೆಟ್ಟಿ ಅವರಿಗೆ “ಜೇಸಿ ಕೃಷಿ ರತ್ನ’ ಪ್ರಶಸ್ತಿ, ಕ್ರೀಡಾ ಕ್ಷೇತ್ರದಲ್ಲಿನ ವಿಶೇಷ ಸಾಧನೆಗೆ ಉಜಿರೆ ಎಸ್‌ಡಿಎಂ ಕಾಲೇಜಿನ ಕ್ರೀಡಾ ತರಬೇತಿದಾರೆ ಶಾರದಾ ಅವರಿಗೆ “ಜೇಸಿ ಖೇಲ್‌ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜ್ಯಮಟ್ಟದ ಯುವಜನ ಮೇಳದಲ್ಲಿ ಯುವತಿಯರ ವಿಭಾಗದ ಜನಪದ ಮತ್ತು ಕೋಲಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಶ್ರೀ ಗುರುಮಿತ್ರ ಸಮೂಹ ಬೆಳ್ತಂಗಡಿಯ ಹರ್ಷಿತಾ ಟಿ. ಪಿ., ಅಮƒತಾ ಎನ್‌.ಎಸ್‌., ರಾಜಶ್ರೀ, ರೂಪಶ್ರೀ, ಪೂಜಾಶ್ರೀ, ಕಾವ್ಯ, ಶಾಲಿನಿ ಬೆಳಾಲ್‌, ಅಶ್ವಿ‌ತಾ ಧರ್ಮಸ್ಥಳ, ಸೌಜನ್ಯ ಉಜಿರೆ, ಲಿಖೀತಾ, ಪೂರ್ಣಿಮಾ ಬೆಳ್ತಂಗಡಿ, ಶ್ವೇತಾ ಉಜಿರೆ, ತೀರ್ಥ ಧರ್ಮಸ್ಥಳ ಅವರನ್ನು ಗೌರವಿಸಲಾಯಿತು.

Advertisement

ಘಟಕಾಧ್ಯಕ್ಷ ಸಂತೋಷ್‌ ಪಿ. ಕೋಟ್ಯಾನ್‌ ಪ್ರಸ್ತಾವಿಸಿ, ಸ್ವಾಗತಿಸಿದರು. ಅನುರಾಧ ಸುಭಾಶ್ಚಂದ್ರ, ಮಮತಾ ಶೆಟ್ಟಿ, ಪ್ರೀತಿ ಆರ್‌. ರಾವ್‌, ಹೇಮಾವತಿ, ಚಂದ್ರಹಾಸ ಬಳಂಜ ಮತ್ತು ಸತೀಶ್‌ ಸುವರ್ಣ ಅತಿಥಿಗಳನ್ನು ಮತ್ತು ಸಮ್ಮಾನಿತರನ್ನು ಪರಿಚಯಿಸಿದರು. ಸ್ವಾತಿ ಜೇಸಿವಾಣಿ ಉದ್ಘೋಷಿಸಿದರು. ಜೇಸಿ ಕಾರ್ಯದರ್ಶಿ ರಂಜಿತ್‌ ಎಚ್‌.ಡಿ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next