Advertisement

ಹಿಪ್ಪು ನೇರಳೆಗೆ ನುಸಿ: ವಿಜ್ಞಾನಿಗಳ ಪರಿಶೀಲನೆ

06:26 PM Aug 12, 2021 | Team Udayavani |

ರಾಮನಗರ: ನುಸಿ (ಮೈಟ್ಸ್‌) ಬಾಧಿತ ಹಿಪ್ಪು ನೇರಳೆ ತೋಟಗಳಿಗೆ ಕೇಂದ್ರ ರೇಷ್ಮೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ತಾಲೂಕಿನ ಮದಾಸಾಬರ ದೊಡ್ಡಿಯ ರೇಷ್ಮೆ ಬೆಳೆಗಾರರ ಆಗ್ರಹದ ಮೇರೆಗೆ ನುಸಿ ಬಾಧಿತ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವಿಜ್ಞಾನಿಗಳ ತಂಡ, ನುಸಿ ನಿಯಂತ್ರಣಕ್ಕೆ ನೂತನ ರಾಸಾಯನಿಕಗಳ ಬಳಕೆಗೆ ಸೂಚಿಸಿದರು.

ಹೊಸ ರಾಸಾಯನಿಕ ಏನು?: ಹಿಪ್ಪುನೇರಳೆ ಸೊಪ್ಪಿನ ಗಿಡಗಳನ್ನು ನುಸಿ ಬಾಧಿಸುತ್ತಿದೆ. ಇದಕ್ಕೆ ಹೊಸ ರಾಸಾಯನಿಕಗಳ ಬಳಕೆಯಿಂದ ನಿಯಂತ್ರಣಕ್ಕೆ ತರಬಹುದು, ಕುನೋಯಿಚಿ (ಸೈನೋಫೈರಾಫೆನ್‌ 30% ಎಸ್‌.ಸಿ) ಎಂಬ ರಾಸಾಯನಿವನ್ನು ಬಳಸಿ ಎಂದು ರೈತರಿಗೆ
ತಿಳಿಸಿದರು.

ಹೇಗೆ ಬಳಸಬೇಕು?: ಕುನೋಯಿಚಿ ರಾಸಾಯನಿಕವನ್ನು ಪ್ರತಿ ಲೀಟರ್‌ ನೀರಿಗೆ 0.5 ಮಿಲಿ ಬೆರೆಸಿ ಸಿಂಪಡಿಸಬೇಕು. ಹೀಗೆ ರಾಸಾಯನಿಕ ಸಿಂಪಡನೆಯಾದ 15 ದಿನಗಳ ನಂತರ ಸೊಪ್ಪನ್ನು ರೇಷ್ಮೆ ಹುಳು ಸಾಕಾಣಿಕೆಗೆ ಉಪಯೋಗಿಸಬಹುದು. ಕುನೋಯಿಚಿ ರಾಸಾಯನಿವಲ್ಲದೆ, ವಿಡಿ ಗ್ರೀನ್‌ಪಾಥ್‌ ಔಷಧಿಯನ್ನು ಪ್ರತಿ ಲೀಟರ್‌ ನೀರಿಗೆ 2 ಮಿಲಿ ಹಾಗೂ 0.3 ಮಿಲಿ ಪ್ರೋಶೂಟಿನ್‌ ಅಂಟು ಬೆರೆಸಿ ಸಿಂಪಡಿಸಬೇಕು. ಒಂದು ವಾರದ ಅಂತರದಲ್ಲಿ2 ಬಾರಿ ಈ ಔಷಧಿಯನ್ನು ಸಿಂಪಡಿಸಿದರೆ, ನುಸಿ ನಿಯಂತ್ರಣಕ್ಕೆ ಬರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದರು. ಅವಶ್ಯಕ
ತೆಗೆ ತಕ್ಕಂತೆ ಹಿಂದೆ ಶಿಫಾರಸು ಮಾಡಿದ್ದ ಸಲ್ಪರ್‌ ಪುಡಿ, ಮ್ಯಾಜಿಸ್ಟರ್‌ ಔಷಧಿಗಳನ್ನು ಉಪಯೋಗಿಸಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ:ಪ್ರವಾಸಿಗರನ್ನು ಸ್ವಾಗತಿಸುತ್ತಿದೆ ಪ್ರವಾಸಿಗರ ಫೇವರೇಟ್ ಗೋವಾ | ಭೇಟಿಗೆ ಷರತ್ತುಗಳು ಅನ್ವಯ

Advertisement

17ರಂದು ಜಿಲ್ಲಾದ್ಯಂತ ಪ್ರವಾಸ: ಆಗಸ್ಟ್‌ 17ರಂದು ವಿಜ್ಞಾನಿಗಳು ಜಿಲ್ಲಾದ್ಯಂತ ಪ್ರವಾಸ ಮಾಡಿ ಹಿಪ್ಪುನೇರಳೆ ಕ್ಷೇತ್ರಗಳಲ್ಲಿ ಪ್ರಾತ್ಯಕ್ಷಿಕೆ ಮುಖಾಂತರ ನುಸಿ ನಿರ್ವಹಣಾಕ್ರಮಗಳನ್ನು ರೇಷ್ಮೆ ಬೆಳೆಗಾರರಿಗೆ ತಿಳಿಸಿಕೊಡುವುದಾಗಿ ವಿಜ್ಞಾನಿಗಳ ತಂಡ ತಿಳಿಸಿದ್ದಾರೆ. ವಿಜ್ಞಾನಿಗಳ ತಂಡದಲ್ಲಿ ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನಾ ಸಂಸ್ಥೆಯ ಡಾ.ಸೆಲ್ವರಾಜ್‌, ಡಾ.ಬಾಲಸರಸ್ವತಿ, ಡಾ.ಮ ಹೀಬಾ ಹೆಲೆನ್‌, ಡಾ.ಗುರುಸ್ವಾಮಿ ಇದ್ದರು. ರೇಷ್ಮೆ ಉಪನಿರ್ದೇಶಕ ಪುಟ್ಟಸ್ವಾಮಿ, ರೇಷ್ಮೆ ಸಹಾಯಕ ನಿರ್ದೇಶಕ ಕೆ.ಎಸ್‌.ಸುಬ್ರಹ್ಮಣ್ಯ, ಪ್ರಗತಿ ಪರ ರೇಷ್ಮೆ ಬೆಳೆಗಾರರಾದ ರವಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next