Advertisement
ಗೆಲುವಿಗೆ ಬಿಜೆಪಿ ಹಾಗೂ ಜೆಡಿಎಸ್‌ನ ಸವಾಲು ಎದುರಿಸುವುದು ಮುಖ್ಯವಾದ್ದರಿಂದ ಆ ಪಕ್ಷಗಳ ಹಾಗೂ ಸಂಭವನೀಯ ಅಭ್ಯರ್ಥಿಗಳ ಸಾಮರ್ಥ್ಯ, ಸ್ವ ವರ್ಚಸ್ಸನ್ನು ಗಮನಿ ಸುತ್ತಿದೆ. ಜತೆಗೆ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆಯೂ ಸವಾಲಾಗಿದೆ.
Related Articles
ಸುನಿಲ್ ತಂಡವು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಎಂ. ಬಿ. ಪಾಟೀಲ್, ಡಿ. ಕೆ. ಶಿವಕುಮಾರ್, ಹರಿಪ್ರಸಾದ್ ಸಹಿತ ರಾಜ್ಯದ ಕಾಂಗ್ರೆಸ್ ಮುಖಂಡರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದೆ. ಜಿಲ್ಲಾ ಮತ್ತು ತಾಲೂಕು ಘಟಕಗಳ ಅಧ್ಯಕ್ಷರ ಜತೆಯೂ ಚರ್ಚಿಸಿದೆ. ಮತದಾರರ ಅಂತರಾಳ ಅರಿಯುವ ಹಾಗೂ ಸಮುದಾಯಗಳ ಬೆಂಬಲ ಸಹಿತ ಸ್ಥಳೀಯ ಮಟ್ಟದ ನಾಯಕರ ಬಗ್ಗೆಯೂ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯವುಳ್ಳ 200 ಮಂದಿಯ ತಂಡ ಮುಂದಿನ 3 ತಿಂಗಳ ಕಾಲ ರಾಜ್ಯದ 224 ಕ್ಷೇತ್ರಗಳಲ್ಲಿ ಸುತ್ತಾಡಲಿದೆ ಎಂದು ಮೂಲಗಳು ತಿಳಿಸಿವೆ.
Advertisement
ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಯಾವ ರೀತಿ ಹೋರಾಡಬೇಕು, ಯಾವ ವಿಷಯ ಮುಂದಿಟ್ಟರೆ ಮತದಾರನ ಮನಸ್ಸನ್ನು ಗೆಲ್ಲಬಹುದು, ಯಾರನ್ನು ಕಣಕ್ಕಿಳಿಸಿದರೆ ಗೆಲುವು ಸಾಧ್ಯ ಮುಂತಾದವುಗಳ ಬಗ್ಗೆ ಎಲ್ಲ ಕೋನಗಳಿಂದಲೂ ಪರಿಶೀಲಿಸಿ ಕೆಪಿಸಿಸಿ ಹಾಗೂ ಎಐಸಿಸಿಗೆ ಸುನಿಲ್ ತಂಡ ಕೆಲವು ಸಲಹೆ
ಗಳನ್ನು ನೀಡಲಿದೆ ಎನ್ನಲಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮುಂದಿನ ಲೋಕಸಭಾ ಚುನಾವಣ ಹೋರಾಟಕ್ಕೆ ಹುಮ್ಮಸ್ಸು ಬರುತ್ತದೆ ಹಾಗೂ ದೇಶದ ಇತರ ಭಾಗದಲ್ಲೂ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂದು ಎಐಸಿಸಿ ಹಂತದಲ್ಲೇ ಸಮೀಕ್ಷೆಗೆ ನಿರ್ಧರಿಸಲಾಗಿದೆ.ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪ್ರತ್ಯೇಕ ಸಮೀಕ್ಷೆಗಳನ್ನು ಮಾಡಿಸಿದ್ದರಾದರೂ ಈಗಿನ ಸಮೀಕ್ಷೆ ಆಧಾರದಲ್ಲೇ ಟಿಕೆಟ್ ಹಂಚಿಕೆ ಹಾಗೂ ಕಾರ್ಯತಂತ್ರ ರೂಪಿತವಾಗಲಿದೆ ಎನ್ನಲಾಗಿದೆ. ನಿರ್ಧಾರ ಮರುಪರಿಶೀಲನೆಯಲ್ಲಿ ನಾಯಕರು
ವಿಧಾನಪರಿಷತ್ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾ ವಣೆ ಬಳಿಕ ಕಾಂಗ್ರೆಸ್‌ನತ್ತ ದೃಷ್ಟಿ ನೆಟ್ಟಿದ್ದ ಬಿಜೆಪಿ, ಜೆಡಿಎಸ್ ನಾಯ ಕರು ಪಂಚರಾಜ್ಯ ಚುನಾವಣೆ ಬಳಿಕ ಹಿಂದೇಟು ಹಾಕುತ್ತಿದ್ದಾರೆ. ಜಿ.ಟಿ.ದೇವೇಗೌಡ ಸಹಿತ ಕೆಲವರು ಇರುವಲ್ಲೇ ಇರುವುದು ಅಥವಾ ಬಿಜೆಪಿಗೆ ಹೋಗುವುದೋ ಎಂಬ ಚಿಂತನೆಯಲ್ಲಿದ್ದರೆ, ಕೆಲವರು ಆಪ್‌ನತ್ತ ಮುಖ ಮಾಡಿದ್ದಾರೆ. ಗುಬ್ಬಿ ವಾಸು ಸಹಿತ ಕಾಂಗ್ರೆಸ್ ಜತೆ ಗುರುತಿಸಿಕೊಂಡ ಕೆಲವರು ಏನು ಮಾಡಬೇಕೆಂದು ಅರಿಯದೆ ಒದ್ದಾಡುತ್ತಿದ್ದಾರೆ ಎನ್ನಲಾಗಿದೆ. – ಎಸ್.ಲಕ್ಷ್ಮೀನಾರಾಯಣ