Advertisement

ಸೋರುತಿರುವ ಮಹಾಗಣಪತಿ ದೇವಸ್ಥಾನಕ್ಕೊಂದು ಪರಿಹಾರ!

06:59 PM Jul 29, 2023 | Pranav MS |

ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧವಾದ ಮಹಾಗಣಪತಿ ದೇವಸ್ಥಾನ ಮಳೆಯಿಂದ ಸಂಪೂರ್ಣ ಸೋರುತ್ತಿರುವ ಹಿನ್ನೆಲೆಯಲ್ಲಿ ಕಟ್ಟಡ ರಕ್ಷಣೆ ಮಾಡಲು ಭಕ್ತಾದಿಗಳು ಟಾರ್ಪಲ್ ಹೊದೆಸಿದರೆ ಈಗ ಶಾಸಕರ ಸೂಚನೆ ಪಡೆದ ತಾಲೂಕು ಆಡಳಿತ ದೇವಸ್ಥಾನದ ಮೇಲೆ ಕಬ್ಬಿಣದ ತಗಡಿನ ರೂಫಿಂಗ್ ಮಾಡು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Advertisement

ದೇವಸ್ಥಾನ ಸೋರುತ್ತಿರುವ ಕುರಿತು ಮಹಾಗಣಪತಿ ದೇವಸ್ಥಾನ ಹಿತರಕ್ಷಣಾ ಸಮಿತಿ ಸಂಚಾಲಕ ಐ.ವಿ.ಹೆಗಡೆ ಉಪವಿಭಾಗಾಧಿಕಾರಿಗಳಿಗೆ ದೇವಸ್ಥಾನವನ್ನು ತುರ್ತು ರಿಪೇರಿ ಮಾಡಲು ಮನವಿ ಸಲ್ಲಿಸಿದ್ದರು. ದೇವಸ್ಥಾನ ಜೀರ್ಣೋದ್ಧಾರಗೊಂಡು ಮೂರ‍್ನಾಲ್ಕು ವರ್ಷದಲ್ಲಿ ಸಂಪೂರ್ಣ ಸೋರುತ್ತಿದ್ದು ಭಕ್ತರಿಗೆ ತೊಂದರೆಯಾಗುತ್ತಿದೆ. ದೇವಸ್ಥಾನದ ಮುಖಮಂಟಪ, ಘಂಟಾ ಮಂಟಪ ಸಂಪೂರ್ಣ ಸೋರುತ್ತಿದ್ದು, ಭಕ್ತಾದಿಗಳಿಗೆ ದೇವಸ್ಥಾನದೊಳಗೆ ಬರಲು ಭಯಬೀಳುವ ಸ್ಥಿತಿ ನಿರ್ಮಾಣವಾಗಿದೆ. ಸೋರಿಕೆಯಾದ ನೀರು ಭಕ್ತರು ದೇವರ ದರ್ಶನ ಪಡೆಯುವ ಜಾಗದಲ್ಲಿ ನಿಲ್ಲುತ್ತಿದೆ. ನೀರು ವಿದ್ಯುತ್ ತಂತಿಗಳಿಗೆ ತಗುಲಿ ಆಧಾರಕ್ಕಾಗಿ ಕೊಟ್ಟ ಸ್ಟೀಲ್ ಪೈಪ್ ಹಾಗೂ ಸ್ಟೀಲ್ ಗೇಟ್‌ಗಳನ್ನು ಮುಟ್ಟಿದರೆ ವಿದ್ಯುತ್ ಶಾಕ್ ಹೊಡೆಯುತ್ತಿದೆ. ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಲು ಸಹ ಆಗುತ್ತಿಲ್ಲ ಎಂದು ಅವರು ಆರೋಪಿಸಿದ್ದರು.

ಶ್ರಾವಣ ಮಾಸದಲ್ಲಿ ಹೆಚ್ಚಿನ ಹಬ್ಬಹರಿದಿನಗಳು ಇದ್ದು ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುತ್ತಾರೆ. ಈಗಾಗಲೇ ಸಾಕಷ್ಟು ಭಕ್ತರು ಕರೆಂಟ್ ಹೊಡೆಸಿಕೊಂಡು ಹೋಗಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ತಕ್ಷಣ ರಿಪೇರಿ ಕಾರ್ಯ ಕೈಗೊಳ್ಳುವಂತೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದರು. ಮೂರು ದಿನಗಳ ಹಿಂದೆ ದೇವಸ್ಥಾನದ ಪ್ರಾಂಗಣಕ್ಕೆ ಆಗಮಿಸಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ, ತಕ್ಷಣ ಅಗತ್ಯ ಕ್ರಮಕ್ಕೆ ಸೂಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next