Advertisement
ಅಟ್ಲಾಂಟಿಕ್ ಸಮುದ್ರದ ತ್ರಿಕೋನಾಕೃತಿಯ ಈ ಪ್ರದೇಶದಲ್ಲಿ ದಶಕಗಳಿಂದಲೂ ಹಲವಾರು ಹಡಗು ಗಳು, ಅನೇಕ ವಿಮಾನಗಳು ನಿಗೂಢವಾಗಿ ಕಣ್ಮರೆಯಾಗಿವೆ. ಇದಕ್ಕೆ ಕಾರಣವೇನು ಎಂಬುದನ್ನು ಇದುವರೆಗೂ ಯಾರಿಗೂ ಕಂಡುಹಿಡಿಯಲು ಆಗಿಲ್ಲ. ಹೀಗಾಗಿಯೇ 5 ಲಕ್ಷ ಚದರ ಮೈಲುಗಳ ಈ ಪ್ರದೇಶವನ್ನು “ಡೆವಿಲ್ಸ್ ಟ್ರಯಾಂಗಲ್’ ಎಂದೂ ಕರೆಯುತ್ತಾರೆ.
Related Articles
1945ರ ಡಿ.5ರಂದು ಫ್ಲೋರಿಡಾದಿಂದ ಅಮೆರಿಕ ನೌಕಾಪಡೆಯ 5 ವಿಮಾನಗಳು ಒಟ್ಟಿಗೇ ಟೇಕ್ ಆಫ್ ಆಗಿದ್ದವು. ಬರ್ಮುಡಾ ಟ್ರಯಾಂಗಲ್ ಸಮೀಪಕ್ಕೆ ಬರುತ್ತಿದ್ದಂತೆ, ಸಂಪರ್ಕ ಕಡಿದುಕೊಂಡ ಈ ಎಲ್ಲ 5 ವಿಮಾನಗಳೂ ನಾಪತ್ತೆಯಾಗಿದ್ದವು. ಅವುಗಳ ಅವಶೇಷಗಳಾಗಲೀ, ಮೃತದೇಹಗ ಳಾಗಲೀ ಇಂದಿಗೂ ಪತ್ತೆಯಾಗಿಲ್ಲ. ಶೋಧಕ್ಕೆಂದು ತೆರಳಿದ್ದ ವಿಮಾನವೂ ಅದೇ ರಾತ್ರಿ ಕಣ್ಮರೆಯಾಗಿತ್ತು. ಈ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಕಾರ್ಲ್ ಕ್ರುಸೆಲ್‌ನಿಕಿ, “ಆ ಘಟನೆ ನಡೆದ ದಿನ ಅಟ್ಲಾಂಟಿಕ್‌ನಲ್ಲಿ 15 ಮೀಟರ್ ಎತ್ತರದ ಅಲೆಗಳು ಎದ್ದಿದ್ದವು. ಹವಾಮಾನ ಪ್ರತಿಕೂಲವಾಗಿದ್ದ ಕಾರಣ ವಿಮಾನ ಗಳು ಪತನಗೊಂಡವು’ ಎಂದಿದ್ದಾರೆ. ಇನ್ನು, ಶೋಧ ಕಾರ್ಯಕ್ಕೆಂದು ಹೋಗಿದ್ದ ವಿಮಾನದ ಐವರು ಪೈಲಟ್‌ಗಳ ಪೈಕಿ ಲೆ. ಚಾರ್ಲ್ಸ್ ಟೈಲರ್‌ವೊಬ್ಬರೇ ಅನುಭವಿ ಪೈಲಟ್ ಆಗಿದ್ದರು.
Advertisement
ಹ್ಯಾಂಗೋವರ್‌ನಲ್ಲಿದ್ದ ಅವರು ಆ ದಿನ ವಿಮಾನ ಚಲಾಯಿಸುವ ವೇಳೆ ಮಾಡಿದ ಎಡವಟ್ಟಿನಿಂದ ಆ ವಿಮಾನವೂ ಪತನಗೊಂಡಿತು. ಸಮುದ್ರದ ಈ ಭಾಗ (ಟ್ರಯಾಂಗಲ್) ಬಹಳಷ್ಟು ಆಳವಿರುವ ಕಾರಣ ಇಲ್ಲಿ ನೌಕೆ ಮುಳುಗಿದರೂ, ವಿಮಾನಗಳು ಪತನಗೊಂಡರೂ ಅವಶೇಷಗಳು ಸಿಗುವುದಿಲ್ಲ ಅಷ್ಟೆ. ಇದಲ್ಲದೇ ಬೇರೆ ಯಾವ ಅತೀಂದ್ರೀಯ ಶಕ್ತಿಯೂ ಇದರ ಹಿಂದಿಲ್ಲ ಎಂದಿದ್ದಾರೆ ಕಾರ್ಲ್.