Advertisement

ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ : ಸರಪಂಚ್ ಹತ್ಯೆ

08:26 PM Apr 15, 2022 | Team Udayavani |

ಬಾರಾಮುಲ್ಲಾ: ಜಿಲ್ಲೆಯ ಗೋಷ್‌ಬುಗ್ ಪಟ್ಟಣದಲ್ಲಿ ಭಯೋತ್ಪಾದಕರ ಗುಂಡು ಹಾರಿಸಿ ಸರಪಂಚ್ ಒಬ್ಬರನ್ನು ಶುಕ್ರವಾರ ಹತ್ಯೆಗೈದು ಅಟ್ಟಹಾಸ ಮೆರೆದಿದ್ದಾರೆ.

Advertisement

ಸರಪಂಚ್ ಮಂಜೂರ್ ಅಹ್ಮದ್ ಬಂಗ್ರೂ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ  ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳವನ್ನು ಭದ್ರತಾ ಪಡೆಗಳು ಮತ್ತು ಪೊಲೀಸರು ಸುತ್ತುವರೆದಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next